ಗರ್ಭವಾಸ್ಥೆಯಲ್ಲಿ ಪ್ಯಾರಾಸಿಟಮಾಲ್ ಸೇವನೆ ಅಪಾಯಕಾರಿ! ಅಧ್ಯಯನದಿಂದ ಬಹಿರಂಗ
ವಿಜ್ಞಾನಿಗಳು ಗರ್ಭಾವಸ್ಥೆಯ ಸಮಯದಲ್ಲಿ ಪ್ಯಾರಾಸಿಟಮಾಲ್ ಬಳಸುವ ಕುರಿತು ಅಧ್ಯಯನ ನಡೆಸಿದ್ದು, ಇದರ ಅತಿಯಾದ ಸೇವನೆ ಗರ್ಭಿಣಿಗೆ ಮತ್ತು ಆಕೆಗೆ ಹುಟ್ಟುವ ಮಗುವಿನ ಆರೋಗ್ಯಕ್ಕೂ ಒಳ್ಳೆಯದಲ್ಲ ಎಂದಿದೆ. ಹಾಗಾದರೆ ಇದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ? ಗರ್ಭಿಣಿಯರು ಹೆಚ್ಚಾಗಿ ಪ್ಯಾರಾಸಿಟಮಾಲ್ ಸೇವನೆ ಮಾಡಬಾರದು ಎನ್ನಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ.

ಗರ್ಭವಾಸ್ಥೆಯ (pregnancy) ಸಮಯದಲ್ಲಿ ಆರೋಗ್ಯ (Health) ಸಮಸ್ಯೆಗಳು ಕಂಡು ಬರುವುದು ಸಾಮಾನ್ಯ. ಅದರಲ್ಲಿಯೂ ಕೆಲವರಿಗೆ ಶೀತ, ಜ್ವರ, ದೇಹದ ನಾನಾ ಕಡೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಮಹಿಳೆಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ವೇಗವಾಗಿ ಗುಣಮುಖರಾಗಲು ಪ್ಯಾರಾಸಿಟಮಾಲ್ ಗಳನ್ನು ಸೇವನೆ ಮಾಡುತ್ತಾರೆ. ಇವು ಗರ್ಭಿಣಿಯರು ಸೇವನೆ ಮಾಡಲು ಸುರಕ್ಷಿತ ಎಂದು ನಾವು ಭಾವಿಸಿಕೊಂಡಿದ್ದೇವೆ. ಆದರೆ ಅಧ್ಯಯನವೊಂದು ಇದಕ್ಕೆ ಹೊಸ ತಿರುವು ನೀಡಿದ್ದು ಪ್ಯಾರಾಸಿಟಮಾಲ್ (Paracetamol) ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು ಎಂದಿದೆ. ವಿಜ್ಞಾನಿಗಳು ಗರ್ಭಾವಸ್ಥೆಯ ಸಮಯದಲ್ಲಿ ಪ್ಯಾರಾಸಿಟಮಾಲ್ ಬಳಸುವ ಕುರಿತು ಅಧ್ಯಯನ ನಡೆಸಿದ್ದು, ಇದರ ಅತಿಯಾದ ಸೇವನೆ ಗರ್ಭಿಣಿಗೆ ಮತ್ತು ಆಕೆಗೆ ಹುಟ್ಟುವ ಮಗುವಿನ ಆರೋಗ್ಯಕ್ಕೂ ಒಳ್ಳೆಯದಲ್ಲ ಎಂದಿದೆ. ಹಾಗಾದರೆ ಇದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ? ಗರ್ಭಿಣಿಯರು ಹೆಚ್ಚಾಗಿ ಪ್ಯಾರಾಸಿಟಮಾಲ್ ಸೇವನೆ ಮಾಡಬಾರದು ಎನ್ನಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ.
ಗರ್ಭವಾಸ್ಥೆಯಲ್ಲಿ ಪ್ಯಾರಾಸಿಟಮಾಲ್ ಬಳಕೆ ಒಳ್ಳೆಯದಲ್ಲ ಎನ್ನಲಾಗಿದೆ. ಅಧ್ಯಯನ ಹೇಳುವ ಪ್ರಕಾರ, ಗರ್ಭಿಣಿಯರಿಗೆ ಮಾತ್ರವಲ್ಲ ಇದರಿಂದ ಶಿಶುಗಳಲ್ಲಿ ಎಡಿಎಚ್ಡಿ ( Attention deficit hyperactivity disorder) ಉಲ್ಬಣವಾಗುವ ಅಪಾಯ ಹೆಚ್ಚಾಗಬಹುದು ಎಂದು ಹೇಳಿದೆ. ಸಾಮಾನ್ಯವಾಗಿ ಗರ್ಭವಾಸ್ಥೆಯ ಸಮಯದಲ್ಲಿ ಮಹಿಳೆಯರ ದೇಹ ಪ್ರಕೃತಿ ಬಹಳ ನಾಜೂಕಾಗಿರುತ್ತದೆ ಹಾಗಾಗಿ ಬೇಗ ಜ್ವರ, ಶೀತ ಸೇರಿದಂತೆ ಸಣ್ಣ ಸಣ್ಣ ರೋಗಗಳು ಪದೇ ಪದೇ ಕಾಡುತ್ತದೆ. ಆ ಸಮಯದಲ್ಲಿ ತ್ವರಿತವಾಗಿ ನೋವು, ಕಿರಿಕಿರಿ ಕಡಿಮೆ ಮಾಡಿಕೊಳ್ಳಲು ಗರ್ಭಿಣಿಯರು ಪ್ಯಾರಾಸಿಟಮಾಲ್ ಮೊರೆ ಹೋಗುತ್ತಾರೆ. ಇದೊಂದು ಸಾಮಾನ್ಯ ಔಷಧಿಯಾಗಿದ್ದು, ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇರುವುದಿಲ್ಲ ಎಂದು ಪದೇ ಪದೇ ಸೇವನೆ ಮಾಡುತ್ತಾರೆ. ಆದರೆ ಇದು ಹಾನಿಕರ ಎಂದು ಸಾಬೀತಾಗಿದೆ. ಅದಲ್ಲದೆ ಈ ಟ್ಯಾಬ್ಲೆಟ್ ಹುಟ್ಟುವ ಮಕ್ಕಳ ಮಾನಸಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಇದನ್ನೂ ಓದಿ:ಬಾಹ್ಯಾಕಾಶದಲ್ಲಿ ಸುನೀತಾ ವಿಲಿಯಮ್ಸ್ ಏನು ತಿನ್ನುತ್ತಿದ್ದರು? ಹೇಗಿತ್ತು ಆಹಾರ ಶೈಲಿ ತಿಳಿದುಕೊಳ್ಳಿ
ಅಧ್ಯಯನ ಹೇಳುವುದೇನು ?
ಗರ್ಭವಾಸ್ಥೆಯಲ್ಲಿ ಪ್ಯಾರಾಸಿಟಮಾಲ್ ಹೆಚ್ಚು ಬಳಕೆ ಮಾಡುವುದರಿಂದ ಹುಟ್ಟುವ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಿಶೇಷವಾಗಿ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮವನ್ನು ಉಂಟುಮಾಡಬಹುದು. ಪ್ಯಾರಾಸಿಟಮಾಲ್ ಗಳನ್ನು ಹೆಚ್ಚು ಬಳಕೆ ಮಾಡುವವರಲ್ಲಿ ಎಡಿಎಚ್ಡಿ ಅಂದರೆ ಚಂಚಲತೆ ಮತ್ತು ಅತಿ ಚಟುವಟಿಕೆಯ ಕಾಯಿಲೆ, ಹೆಚ್ಚಾಗಿ ಕಂಡು ಬರುತ್ತದೆ. ಇದೊಂದು ವಿಚಿತ್ರ ಕಾಯಿಲೆಯಾಗಿದ್ದು. ಈ ಕಾಯಿಲೆ ಇರುವ ವ್ಯಕ್ತಿಗಳು ಕೂತಲ್ಲಿ ಕೂರುವುದಿಲ್ಲ, ನಿಂತಲ್ಲಿ ನಿಲ್ಲುವುದಿಲ್ಲ ತುಂಬಾ ಆಕ್ಟೀವ್ ಆಗಿರುವಂತೆ ಕಾಣಿಸುತ್ತಾರೆ. ಹಾಗಾಗಿ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವುದಕ್ಕಾಗಿ ಕೆನಡಾದ ಪ್ರಸೂತಿ ಮತ್ತು ಮಹಿಳಾ ಆರೋಗ್ಯ ವಿಜ್ಞಾನಿಗಳ ಸಂಘ ಮತ್ತು ಮಾಧು- ಭ್ರೂಣ ವೈದ್ಯಕೀಯ ಸಂಘಗಳಂತಹ ಏಜೆನ್ಸಿ ಗಳು ಪ್ಯಾರಾಸಿಟಮಾಲ್ ಗಳನ್ನು ಹೆಚ್ಚು ಬಳಕೆ ಮಾಡುವ ಗರ್ಭಿಣಿಯರ ಮೇಲೆ ಅಧ್ಯಯನ ನಡೆಸಿದ್ದು, ಅವರು ನೀಡುವ ಮಾಹಿತಿ ಪ್ರಕಾರ, ಈ ಟ್ಯಾಬ್ಲೆಟ್ ಅತಿಯಾದ ಸೇವನೆಯು, ಮುಂದೆ ಹುಟ್ಟುವ ಮಕ್ಕಳ ಮಾನಸಿಕ ಅಭಿವೃದ್ಧಿ ಕುಂಠಿತಗೊಳ್ಳುವಂತೆ ಮಾಡಬಹುದು. ಇನ್ನು ಅಲ್ಲಿನ ವೈದ್ಯರ ಅಭಿಪ್ರಾಯದ ಪ್ರಕಾರ, ಪ್ಯಾರಾಸಿಟಮಾಲ್ ಶರೀರದಲ್ಲಿ ಕೆಲವು ಬದಲಾವಣೆಗಳನ್ನು ಉಂಟುಮಾಡಬಹುದು, ಇದು ಮಗುವಿನ ಮೆದುಳಿನ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ವೈದ್ಯರ ಸಲಹೆಯ ಅನುಸಾರ ಔಷಧಿಗಳ ಸೇವನೆ ಮಾಡಬೇಕು, ಅದರ ಹೊರತಾಗಿ ಯಾವುದೇ ರೀತಿಯ ಟ್ಯಾಬ್ಲೆಟ್ ಗಳ ಸೇವನೆ ಮಾಡಬಾರದು ಎಂದಿದ್ದಾರೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ