Eggshell Calcium: ಮೊಟ್ಟೆಯ ಸಿಪ್ಪೆಯನ್ನು ಎಸೆಯಬೇಡಿ! ಪ್ರಯೋಜನ ಸಾಕಷ್ಟಿವೆ
ಕೋಳಿಯ ಮೊಟ್ಟೆಯ ಚಿಪ್ಪು ನೈಸರ್ಗಿಕ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಇದನ್ನು ಆಯುರ್ವೇದದಲ್ಲಿ ಕುಕ್ಕುಟಾಂಡತ್ವಕ್ ಭಸ್ಮವಾಗಿ ಬಳಸಲಾಗುತ್ತದೆ. ಮೂಳೆ ಮುರಿತ, ಆಸ್ಟಿಯೊಪೊರೋಸಿಸ್ ಮತ್ತು ಕೀಲು ನೋವುಗಳಿಗೆ ಇದು ಪರಿಣಾಮಕಾರಿ. ಶಾಲೆಗಳಲ್ಲಿ ದೊಡ್ಡ ಪ್ರಮಾಣದ ಮೊಟ್ಟೆಯ ಚಿಪ್ಪು ತ್ಯಾಜ್ಯವಾಗುತ್ತದೆ, ಅದನ್ನು ಸಂಗ್ರಹಿಸಿ ಆರ್ಥಿಕ ಮತ್ತು ಆರೋಗ್ಯಕರ ಉಪಯೋಗಗಳನ್ನು ಮಾಡಬಹುದು.

ಸಾಮಾನ್ಯವಾಗಿ ಸಾಕಷ್ಟು ಜನರು ಮೊಟ್ಟೆಯನ್ನು ತಿನ್ನುತ್ತಾರೆ. ಮೊಟ್ಟೆ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಆದರೆ ಎಂದಾದರೂ ಮೊಟ್ಟೆಯ ಸಿಪ್ಪೆಯ ಪ್ರಯೋಜನಗಳ ಬಗ್ಗೆ ತಿಳಿದಿದೆಯೇ? ಕೋಳಿಯ ಮೊಟ್ಟೆ ಕವಚದಿಂದ ನೈಸರ್ಗಿಕ ಕ್ಯಾಲ್ಸಿಯಂ ತಯಾರಿಸಬಹುದು, ಜೊತೆಗೆ ಹಲವು ಆಯುರ್ವೇದ ಔಷಧಿಯಲ್ಲಿ ಉಪಯೋಗಿಸುವಂತಹ ಕುಕ್ಕುಟಾಂಡತ್ವಕ್ ಭಸ್ಮವನ್ನು ತಯಾರಿಸಬಹುದು.
ಕುಕ್ಕುಟಾಂಡ ತ್ವಕ್ ಭಸ್ಮದ ಪ್ರಯೋಜನಗಳು:
- ಈ ಔಷಧಿಯನ್ನು ಮೂಳೆ ಮುರಿತದ ಚಿಕಿತ್ಸೆಯಲ್ಲಿ ವಿಶೇಷವಾಗಿ ಬಳಸಲಾಗುತ್ತದೆ.
- ಕ್ಷೀಣಗೊಳ್ಳುವ ಕೀಲು ರೋಗಗಳ ನಿರ್ವಹಣೆಯಲ್ಲಿಯೂ ಇದು ಪರಿಣಾಮಕಾರಿಯಾಗಿದೆ.
- ಈ ಔಷಧಿಯನ್ನು ನೈಸರ್ಗಿಕ ಕ್ಯಾಲ್ಸಿಯಂ ಪೂರಕವಾಗಿ ಬಳಸಬಹುದು.
- ಮೂಳೆ ಮುರಿತ ,ಮೂಳೆ ನೋವು ,ಮೂಳೆ ಸವಕಳಿಗಳು,ಆಸ್ಟಿಯೊಪೊರೋಸಿಸ್ ,ಶ್ವೇತ ಪ್ರದರದಂತಹ ತೊಂದರೆಗಳಲ್ಲಿ ಉಪಯುಕ್ತ.
- ಒಂದು ಅಂದಾಜಿನಂತೆ ಮೊಟ್ಟೆಯ ಸರಾಸರಿ ತೂಕ 55–6೦ ಗ್ರಾಂ ಮತ್ತು ಮೊಟ್ಟೆಯ ಚಿಪ್ಪಿನ ತೂಕ5–7ಗ್ರಾಂ
ಇದನ್ನೂ ಓದಿ: ಬೇಸಿಗೆಯಲ್ಲಿ ಈ 5 ಆಹಾರಗಳನ್ನು ತಪ್ಪದೆ ತಿನ್ನಿ
ಪ್ರಸ್ತುತ, ಕರ್ನಾಟಕದಾದ್ಯಂತ 46,757 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿದ್ದು, ಒಟ್ಟು 42,92,351 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಂದು ಉದಾಹರಣೆಗೆ ಒಂದು ದಿನಕ್ಕೆ 35 ಲಕ್ಷ ವಿದ್ಯಾರ್ಥಿಗಳು ಮೊಟ್ಟೆಯನ್ನು ಸ್ವೀಕರಿಸುತ್ತಾರೆಂದು ಅಂದಾಜಿಸೋಣ.
3500000*5gmಅಂತ ಲೆಕ್ಕಾಚಾರ ಮಾಡಿದರೆ ದಿನವೊಂದಕ್ಕೆ 17500 ಕಿಲೋ ದಷ್ಟು ಮೊಟ್ಟೆಯ ಕವಚ ಸಂಗ್ರಹವಾಗುತ್ತಿದೆ. ಅಂದರೆ ವರ್ಷ ಒಂದಕ್ಕೆ ಸರಾಸರಿ 200 ದಿನ ಶಾಲೆ ನಡೆಯುತ್ತದೆ ಎಂದು ಹಿಡಿದರೆ35,00,000 ಕಿಲೋ ದಷ್ಟು ಮೊಟ್ಟೆಯ ಕವಚ ಸಂಗ್ರಹವಾಗುತ್ತದೆ. ಮೊಟ್ಟೆಯ ಚಿಪ್ಪಿನ ಪುಡಿ ಕಿಲೋಗ್ರಾಂಗೆ ಕನಿಷ್ಠ 30-40 ರೂ. ಇರಬಹುದು. ಒಂದು ವೇಳೆ 30 ರೂಪಾಯಿಯಂತೆ ಖರೀದಿದಾರರು ಖರೀದಿಸಿದರೆ ವರ್ಷ ಒಂದಕ್ಕೆ ಅದು ಅಂದಾಜು10,50,00,000 ರೂಪಾಯಿ ಸಂಗ್ರಹವಾಗಬಹುದು.( ಆದಾಯ ತೆರಿಗೆ , ಸರಕು ಮತ್ತು ಸೇವಾ ತೆರಿಗೆ ಬಗ್ಗೆ ನಿಖರ ಮಾಹಿತಿ ಗೊತ್ತಿಲ್ಲ) ಅದು ಆಯಾ ಶಾಲೆಯ ಅಭಿವೃದ್ಧಿಗೆ ಉಪಯೋಗಕ್ಕೆ ಬರಬಹುದು, ಆದರೆ ಈ ಕಾರ್ಯಕ್ಕೆ ಶಿಕ್ಷಕರನ್ನ ಉಪಯೋಗಿಸಕೂಡದು( ಈಗಾಗಲೇ ಶಿಕ್ಷಣಕ್ಕಿಂತ ಇತರ ಕೆಲಸಗಳ ಮಹಾಪೂರವೇ ಇದೆ ,ಅವುಗಳ ಜೊತೆ ಇದೊಂದು ಬೇಡ).ಇದರಿಂದ ಶಾಲಾ ಆವರಣದ ಸ್ವಚ್ಛತೆ ಕಾಪಾಡಿದಂತೆ ಆಗುವುದು,ಇದರಿಂದಾಗುವ ದುರ್ಗಂಧವೂ ದೂರವಾಗುವುದು.
1 ಗ್ರಾಂ ಮೊಟ್ಟೆಯ ಚಿಪ್ಪಿನ ಕ್ಯಾಲ್ಸಿಯಂ ಸುಮಾರು 400 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಒಂದು ಕೆಜಿ ಮೊಟ್ಟೆಯ ಕವಚದ ಪುಡಿಯಿಂದ 400 gmಮೊಟ್ಟೆ ಕವಚದ ಕ್ಯಾಲ್ಸಿಯಂ ತಯಾರಾಗಬಹುದು ಎಂದು ಒಂದು ಅಂದಾಜಿದೆ.
ಲೇಖನ: ಡಾ ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯ, ಶಿರಸಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ