Junk Food: ಜಂಕ್ ಫುಡ್ ಬಿಡುವುದಕ್ಕೆ ಸಾಧ್ಯವಿಲ್ಲವೇ? ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಬೆಳ್ಳುಳ್ಳಿಯನ್ನು ಈ ರೀತಿ ಬಳಸಿ
ಜಂಕ್ ಫುಡ್ ಅತಿಯಾಗಿ ಸೇವನೆ ಮಾಡಿದಾಗ ಜನರು ತಪ್ಪದೆ ಬೆಳ್ಳುಳ್ಳಿಯನ್ನು ಸೇವನೆ ಮಾಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದು ದೇಹದಲ್ಲಿನ ತ್ಯಾಜ್ಯಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಏಕೆಂದರೆ ಬೆಳ್ಳುಳ್ಳಿಯಲ್ಲಿ ನೈಸರ್ಗಿಕ ಔಷಧೀಯ ಗುಣಗಳಿದ್ದು, ಪ್ರತಿನಿತ್ಯ ಇದನ್ನು ಸರಿಯಾಗಿ ಬಳಸುವ ಮೂಲಕ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಹಾಗಾದರೆ ಬೆಳ್ಳುಳ್ಳಿಯನ್ನು ಹೇಗೆ ಬಳಸುವುದು ಮತ್ತು ಅದು ನಿಮ್ಮ ಆರೋಗ್ಯಕ್ಕೆ ಹೇಗೆ ಉಪಯುಕ್ತವಾಗಿದೆ ಎಂಬುದನ್ನು ತಿಳಿದುಕೊಳ್ಳಿ.

ಇತ್ತೀಚಿನ ವರ್ಷಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಜಂಕ್ ಫುಡ್ (Junk Food) ಸೇವನೆ ಮಾಡುತ್ತಿರುವುದನ್ನು ನೀವು ಗಮನಿಸಿರಬಹುದು. ದಿನದಿಂದ ದಿನಕ್ಕೆ ಇದು ಹೆಚ್ಚಾಗುತ್ತಿದ್ದು, ಎಷ್ಟೇ ತಡೆಯಬೇಕು ಎಂದುಕೊಂಡರೂ ಬಾಯಿ ಕೇಳುವುದಿಲ್ಲ. ಸಂಜೆಯಾಗುತ್ತಿದ್ದಂತೆ ಏನಾದರೂ ತಿನ್ನಬೇಕು ಎಂಬ ಮನಸ್ಸಾಗುತ್ತದೆ. ಕಚೇರಿ ಸಭೆ, ಹುಟ್ಟುಹಬ್ಬದ ಪಾರ್ಟಿ (Party), ಚಲನಚಿತ್ರ (movie) ಮತ್ತು ಶಾಪಿಂಗ್ ಹೀಗೆ ಎಲ್ಲಿ ನೋಡಿದರೂ, ಈ ರೀತಿಯ ಆಹಾರವಿಲ್ಲದೆ ದಿನ ಕಳೆಯುವುದಿಲ್ಲ. ಈ ರೀತಿ ಪದೇ ಪದೇ ಜಂಕ್ ಫುಡ್ ಸೇವನೆ ಮಾಡುವುದರಿಂದ ದೇಹದಲ್ಲಿ ಸಂಗ್ರಹವಾದ ಕೆಟ್ಟ ತ್ಯಾಜ್ಯ ಸುಲಭವಾಗಿ ಹೊರಹೋಗುವುದಿಲ್ಲ. ಇದರಿಂದ ಹೃದಯಕ್ಕೆ ಹಾನಿಯಾಗಬಹುದು. ಜೊತೆಗೆ ಇವುಗಳ ಸೇವನೆಯಿಂದ ಮಹಿಳೆಯರಲ್ಲಿ ಥೈರಾಯ್ಡ್ ಮತ್ತು ಪಿಸಿಒಡಿ ಸಮಸ್ಯೆಗಳನ್ನು ಹೆಚ್ಚಾಗುತ್ತಿದೆ. ಪುರುಷರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಹಾಗಾದರೆ ಈ ವಿಷಕಾರಿ ತ್ಯಾಜ್ಯಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಿಲ್ಲವೇ? ಸಾಮಾನ್ಯವಾಗಿ, ಜಂಕ್ ಫುಡ್ ಅತಿಯಾಗಿ ಸೇವನೆ ಮಾಡಿದಾಗ ಜನರು ತಪ್ಪದೆ ಬೆಳ್ಳುಳ್ಳಿಯನ್ನು ಸೇವನೆ ಮಾಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದು ದೇಹದಲ್ಲಿನ ತ್ಯಾಜ್ಯಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಏಕೆಂದರೆ ಬೆಳ್ಳುಳ್ಳಿಯಲ್ಲಿ ನೈಸರ್ಗಿಕ ಔಷಧೀಯ ಗುಣಗಳಿದ್ದು, ಪ್ರತಿನಿತ್ಯ ಇದನ್ನು ಸರಿಯಾಗಿ ಬಳಸುವ ಮೂಲಕ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಹಾಗಾದರೆ ಬೆಳ್ಳುಳ್ಳಿಯನ್ನು ಹೇಗೆ ಬಳಸುವುದು ಮತ್ತು ಅದು ನಿಮ್ಮ ಆರೋಗ್ಯಕ್ಕೆ ಹೇಗೆ ಉಪಯುಕ್ತವಾಗಿದೆ ಎಂಬುದನ್ನು ತಿಳಿದುಕೊಳ್ಳಿ.
ಬೆಳ್ಳುಳ್ಳಿಯನ್ನು ಈ ರೀತಿ ಬಳಸಿ
ಮೊದಲಿಗೆ, 2 ರಿಂದ 3 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಂಡು ಅವುಗಳ ಸಿಪ್ಪೆ ತೆಗೆದು ಆ ನಂತರ, ಬೆಳ್ಳುಳ್ಳಿಯನ್ನು ಕೈಯಿಂದ ಅಥವಾ ಕಲ್ಲಿನಿಂದ ಲಘುವಾಗಿ ಜಜ್ಜಿ. ಈ ರೀತಿ ಮಾಡುವುದರಿಂದ, ಬೆಳ್ಳುಳ್ಳಿಯಲ್ಲಿರುವ ನೈಸರ್ಗಿಕ ರಸಗಳು ಹೊರಬರುತ್ತವೆ. ಅವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈಗ, ಜಜ್ಜಿದ ಬೆಳ್ಳುಳ್ಳಿಯನ್ನು ಒಂದು ಟೀ ಸ್ಪೂನ್ ಜೇನುತುಪ್ಪ ಅಥವಾ ಸ್ವಲ್ಪ ಉಗುರು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಮಿಶ್ರಣವನ್ನು ಸೇವನೆ ಮಾಡಿ. ಈ ಸರಳ ವಿಧಾನವು ನಿಮ್ಮ ಆರೋಗ್ಯದಲ್ಲಿ ಅದ್ಭುತ ಬದಲಾವಣೆಗಳನ್ನು ತರುತ್ತದೆ. ಒಂದು ವಾರ ಇದನ್ನು ತಪ್ಪದೆ ಪಾಲಿಸಿ, ಬಳಿಕ ಫಲಿತಾಂಶ ನೋಡಿ.
ಜೀರ್ಣಕ್ರಿಯೆಗೆ ಒಳ್ಳೆಯದು:
ಸಾಮಾನ್ಯವಾಗಿ ಅನೇಕ ಜನರು ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ, ಬೆಳ್ಳುಳ್ಳಿ ಇದಕ್ಕೆ ನೈಸರ್ಗಿಕ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ, ಆ ಮೂಲಕ ಶೀತ ಮತ್ತು ಕೆಮ್ಮಿನಂತಹ ಸಾಮಾನ್ಯ ಕಾಯಿಲೆಗಳ ವಿರುದ್ಧ ರಕ್ಷಣೆ ನೀಡುತ್ತದೆ. ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಉರಿಯೂತ ನಿವಾರಕ ಗುಣಗಳಿವೆ, ಇದು ದೇಹದಲ್ಲಿನ ರೋಗಾಣುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರಕ್ತಹೀನತೆಯನ್ನು ನಿವಾರಿಸುತ್ತದೆ:
ಪ್ರಸ್ತುತ ಜೀವನಶೈಲಿಯಲ್ಲಿ, ಅನೇಕರು ಜಂಕ್ ಫುಡ್ ಸೇವನೆಗೆ ಒಗ್ಗಿಕೊಂಡಿದ್ದಾರೆ. ಇದು ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುವುದಿಲ್ಲ. ಇದರ ಪರಿಣಾಮವಾಗಿ, ರಕ್ತಹೀನತೆಯಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಲು ಬೆಳ್ಳುಳ್ಳಿ ಸರಿಯಾದ ಔಷಧಿಯಾಗಿದೆ. ಪ್ರತಿದಿನ ಬೆಳ್ಳುಳ್ಳಿಯನ್ನು ಆಹಾರದ ಭಾಗವಾಗಿ ಮಾಡಿಕೊಳ್ಳುವ ಮೂಲಕ ರಕ್ತಹೀನತೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು ಎಂದು ಹಲವಾರು ಅಧ್ಯಯನಗಳು ತೋರಿಸಿವೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಈ 5 ಆಹಾರಗಳನ್ನು ತಪ್ಪದೆ ತಿನ್ನಿ
ಕೊಬ್ಬನ್ನು ಕರಗಿಸುತ್ತದೆ:
ಅಧಿಕ ತೂಕ ಹೊಂದಿರುವವರು ಬೆಳ್ಳುಳ್ಳಿ ತಿನ್ನುವ ಮೂಲಕ ಬೇಗನೆ ತೂಕ ಕಡಿಮೆ ಮಾಡಿಕೊಳ್ಳಬಹುದು. ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಅಂಶವಿದ್ದು ಇದು ನೀವು ತೆಳ್ಳಗಾಗಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ದೇಹದಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬನ್ನು ಕರಗಿಸುವಲ್ಲಿ ಬೆಳ್ಳುಳ್ಳಿಗೆ ಸರಿಸಾಟಿಯಿಲ್ಲ. ಇದರ ಔಷಧೀಯ ಗುಣಗಳು ರಕ್ತದಲ್ಲಿನ ಟ್ರೈಗ್ಲಿಸರೈಡ್ಗಳನ್ನು ಕಡಿಮೆ ಮಾಡುವಲ್ಲಿ ಮತ್ತು ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಯಾರು ಬೆಳ್ಳುಳ್ಳಿಯಿಂದ ದೂರವಿರಬೇಕು?
ತಜ್ಞರ ಪ್ರಕಾರ, ವಿವಿಧ ರೀತಿಯ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುವವರು ಬೆಳ್ಳುಳ್ಳಿ ಸೇವನೆಯ ಸಂದರ್ಭದಲ್ಲಿ ಒಮ್ಮೆ ವೈದ್ಯರನ್ನು ಸಂಪರ್ಕಿಸಬೇಕು. ಈ ಸಲಹೆ ಸುಲಭ ಮತ್ತು ವೆಚ್ಚ ಮುಕ್ತವಾಗಿರುವುದರಿಂದ, ಯಾರಾದರೂ ಇದನ್ನು ಸುಲಭವಾಗಿ ಅನುಸರಿಸಬಹುದು. ಆದ್ದರಿಂದ, ಇಂದಿನಿಂದ ಬೆಳ್ಳುಳ್ಳಿಯನ್ನು ನಿಮ್ಮ ದೈನಂದಿನ ಜೀವನದ ಒಂದು ಭಾಗವಾಗಿ ಮಾಡಿಕೊಳ್ಳಿ. ಆರೋಗ್ಯಕರ ಜೀವನವನ್ನು ಆನಂದಿಸಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ