ಚಹಾ, ಕಾಫಿ ತಲೆನೋವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದೇ? ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ
ಹಠಾತ್ ಆಗಿ ಬರುವಂತಹ ತಲೆನೋವು ಅನೇಕರಿಗೆ ಅನಾನುಕೂಲತೆ ಉಂಟು ಮಾಡುತ್ತದೆ. ಈ ನೋವಿನ ತೀವ್ರತೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಔಷಧಿಗಳ ಮೊರೆ ಹೋಗುತ್ತಾರೆ. ಇನ್ನು ಕೆಲವರು ಈ ಅಸ್ವಸ್ಥತೆಯನ್ನು ಕಡಿಮೆ ಮಾಡಿಕೊಳ್ಳಲು ಒಂದು ಕಪ್ ಚಹಾ ಅಥವಾ ಕಾಫಿ ಕುಡಿಯುತ್ತಾರೆ. ಆದರೆ ಈ ರೀತಿಯ ಅಭ್ಯಾಸ ನಿಜವಾಗಿಯೂ ತಲೆನೋವನ್ನು ಕಡಿಮೆ ಮಾಡುತ್ತದೆಯೇ? ಇದರಲ್ಲಿ ಎಷ್ಟು ಸತ್ಯವಿದೆ. ಚಹಾ ಅಥವಾ ಕಾಫಿಯ ಮೊದಲ ಸಿಪ್ ನಮ್ಮನ್ನು ನಿರಾಳಗೊಳಿಸುತ್ತದೆ ಎಂಬುದು ನಿಜವೇ? ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.

ತಲೆನೋವು (Headache) ಯಾವಾಗ ಬೇಕಾದರೂ ಬರಬಹುದು. ಈ ಹಠಾತ್ ಆಗಿ ಬರುವಂತಹ ತಲೆನೋವು ಅನೇಕರಿಗೆ ಅನಾನುಕೂಲತೆ ಉಂಟು ಮಾಡುತ್ತದೆ. ಈ ನೋವಿನ ತೀವ್ರತೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಔಷಧಿಗಳ ಮೊರೆ ಹೋಗುತ್ತಾರೆ. ಇನ್ನು ಕೆಲವರು ಈ ಅಸ್ವಸ್ಥತೆಯನ್ನು ಕಡಿಮೆ ಮಾಡಿಕೊಳ್ಳಲು ಒಂದು ಕಪ್ ಚಹಾ (Tea) ಅಥವಾ ಕಾಫಿ (Coffee) ಕುಡಿಯುತ್ತಾರೆ. ಆದರೆ ಈ ರೀತಿಯ ಅಭ್ಯಾಸ ನಿಜವಾಗಿಯೂ ತಲೆನೋವನ್ನು ಕಡಿಮೆ ಮಾಡುತ್ತದೆಯೇ? ಇದರಲ್ಲಿ ಎಷ್ಟು ಸತ್ಯವಿದೆ. ಚಹಾ ಅಥವಾ ಕಾಫಿಯ ಮೊದಲ ಸಿಪ್ ನಮ್ಮನ್ನು ನಿರಾಳಗೊಳಿಸುತ್ತದೆ ಎಂಬುದು ನಿಜವೇ? ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.
ಚಹಾ ಅಥವಾ ಕಾಫಿ ನಿಜವಾಗಿಯೂ ತಲೆನೋವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆಯೇ, ಅಥವಾ ಅದು ನೋವನ್ನು ಇನ್ನಷ್ಟು ಹೆಚ್ಚಿಸುತ್ತದೆಯೇ? ಎಂಬುದರ ಬಗ್ಗೆ ಆಹಾರ ತಜ್ಞ ಸೆಜಲ್ ಅಹುಜಾ ಅವರು ಈ ಪಶ್ನೆಗಳ ಹಿಂದಿರುವ ನಿಜವಾದ ಸತ್ಯವನ್ನು ಬಹಿರಂಗ ಪಡಿಸಿದ್ದು ಅವರ ಪ್ರಕಾರ, ಕೆಫೀನ್ ರಕ್ತನಾಳಗಳನ್ನು ಕಿರಿದಾಗಿಸುವ ಮೂಲಕ ತಾತ್ಕಾಲಿಕವಾಗಿ ನೋವಿನಿಂದ ಪರಿಹಾರ ನೀಡುತ್ತದೆ. ಆದರೆ ದೀರ್ಘಾವಧಿಯಲ್ಲಿ, ತಲೆನೋವನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಅವರು ಹೇಳುತ್ತಾರೆ.
ಕೆಫೀನ್ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ;
ತಲೆನೋವು ಒತ್ತಡ, ಆತಂಕ, ನಿರ್ಜಲೀಕರಣ ಅಥವಾ ಇತರ ಆರೋಗ್ಯ ಸಮಸ್ಯೆಗಳಿಂದ ಉಂಟಾಗಬಹುದು. ಸಾಮಾನ್ಯವಾಗಿ ತಲೆನೋವು ನಿರ್ಜಲೀಕರಣದಿಂದ ಉಂಟಾದರೆ, ಚಹಾ ಅಥವಾ ಕಾಫಿ ಕುಡಿಯುವುದರಿಂದ ದೇಹದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಏಕೆಂದರೆ ಕೆಫೀನ್ ಕೂಡ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಆದ್ದರಿಂದ, ನೀವು ತಕ್ಷಣ ಶಕ್ತಿ ಮತ್ತು ನಿರಾಳತೆಯನ್ನು ಅನುಭವಿಸಬಹುದಾದರೂ ಕೂಡ ಆ ತಲೆನೋವು ಬೇಗನೆ ಮರುಕಳಿಸುತ್ತದೆ.
ತಲೆನೋವನ್ನು ಕಡಿಮೆ ಮಾಡಿಕೊಳ್ಳಲು ಈ ಸಲಹೆ ಅನುಸರಿಸಿ:
ಸಾಮಾನ್ಯವಾಗಿ ತಲೆನೋವನ್ನು ತಪ್ಪಿಸಲು, ಚಹಾ ಅಥವಾ ಕಾಫಿಯನ್ನು ಪರ್ಯಾಯವಾಗಿ ಇಟ್ಟುಕೊಳ್ಳುವ ಬದಲು ದೇಹವನ್ನು ಹೈಡ್ರೇಟ್ ಆಗಿಡುವುದರ ಬಗ್ಗೆ ಯೋಚಿಸಿ, ದೇಹಕ್ಕೆ ಸಾಕಷ್ಟು ನೀರು ಅಥವಾ ಇತರ ಹೈಡ್ರೇಟೆಡ್ ಆಹಾರಗಳನ್ನು ನೀಡಲು ಪ್ರಯತ್ನಿಸಬಹುದು ಅಥವಾ ಚಹಾಗಳಲ್ಲಿರುವ ಉತ್ತಮ ಆಯ್ಕೆಗಳಾದ ಶುಂಠಿ ಚಹಾ, ಗ್ರೀನ್ ಟೀ ಅಥವಾ ಜ್ಯೂಸ್ ನಂತಹ ಆರೋಗ್ಯಕ್ಕೆ ಉತ್ತಮವಾದ ಪಾನೀಯಗಳನ್ನು ಸೇವನೆ ಮಾಡಬಹುದು. ಅಲ್ಲದೆ, ಡಾರ್ಕ್ ಚಾಕೊಲೇಟ್ ಸಣ್ಣ ತುಂಡು ಕೂಡ ತಲೆನೋವಿನ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ ನಿಮಗೆ ಸಹಿಸಿಕೊಳ್ಳಲು ಸಾಧ್ಯವಾಗದಷ್ಟು ನೋವಿದ್ದರೆ ತಕ್ಷಣ ಆರೋಗ್ಯ ತಜ್ಞರನ್ನು ಸಂಪರ್ಕಿಸಿ.
ಇದನ್ನೂ ಓದಿ: ರಾತ್ರಿ ಊಟಕ್ಕೆ ಅನ್ನ ತಿನ್ನಬಾರದು ಎನ್ನುವುದರ ಹಿಂದಿದೆ ಕಾರಣ! ತಜ್ಞರು ನೀಡಿದ ಮಾಹಿತಿ ಇಲ್ಲಿದೆ
ದಿನಕ್ಕೆ ಎಷ್ಟು ಟೀ, ಕಾಫಿ ಕುಡಿಯಬಹುದು:
ತಜ್ಞರ ಪ್ರಕಾರ, ದಿನಕ್ಕೆ 400 ಮಿಲಿಗ್ರಾಂ ಕೆಫೀನ್ (ಸುಮಾರು 4 ಕಪ್ ಕಾಫಿ ಅಥವಾ 8 ಕಪ್ ಚಹಾ) ವಯಸ್ಕರಿಗೆ ಸುರಕ್ಷಿತವಾಗಿದೆ. ಆದರೆ, ನಿಮಗೆ ಪದೇ ಪದೇ ತಲೆನೋವು ಬರುತ್ತಿದ್ದು ಅದನ್ನು ಕಡಿಮೆ ಮಾಡಿಕೊಳ್ಳಲು ಟೀ, ಕಾಫಿ ಮೊರೆ ಹೊಗುತ್ತಿದ್ದರೆ ನೀವು ಕೆಫೀನ್ ಡೋಸೇಜ್ ಅನ್ನು ಕಡಿಮೆ ಮಾಡುವುದು ಸೂಕ್ತ. ಕೆಫೀನ್ ತ್ವರಿತವಾಗಿ ಪರಿಹಾರ ನೀಡಬಹುದಾದರೂ, ಅದರ ಮೇಲೆ ಅತಿಯಾದ ಅವಲಂಬನೆ ಒಳ್ಳೆಯದಲ್ಲ. ತಲೆನೋವನ್ನು ವಾಸಿ ಮಾಡಿಕೊಳ್ಳಲು ದೇಹವನ್ನು ಯಾವಾಗಲೂ ಹೈಡ್ರೇಟ್ ಆಗಿಡುವುದು ಒಳ್ಳೆಯದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:22 pm, Fri, 28 March 25