ಹಲ್ಲಿ ಬಿದ್ದ ಆಹಾರ ವಿಷವೇ? ಸಂಶೋಧಕ ಗೌರಿ ಶಂಕರ್ ಹಲ್ಲಿ ಬಿದ್ದ ಸಾಂಬಾರ್ ತಿಂದು ಏನ್ ಹೇಳಿದ್ರು ನೋಡಿ
ಸಾಮಾನ್ಯವಾಗಿ ಜನರು ಹಲ್ಲಿ ವಿಷಕಾರಿ ಪ್ರಾಣಿ, ಅದು ಆಹಾರದಲ್ಲಿ ಬಿದ್ದರೆ ವಿಷವಾಗುತ್ತೆ, ಅದನ್ನು ಸೇವನೆ ಮಾಡಿದರೆ ಸಾಯುತ್ತೇವೆ ಹಾಗಾಗಿ ಅದನ್ನು ಎಲ್ಲಿ ಕಂಡರೂ ಓಡಿಸಬೇಕು ಎಂದು ಅಂದುಕೊಂಡಿರುತ್ತಾರೆ. ಆದರೆ ಇಲ್ಲೊಬ್ಬರು ಈ ನಂಬಿಕೆಯನ್ನು ಸಾಕ್ಷಿ ಸಮೇತ ಸುಳ್ಳು ಮಾಡಿದ್ದಾರೆ. ಹೌದು. ಹಲ್ಲಿ ಬಿದ್ದ ಆಹಾರವನ್ನು ಸೇವನೆ ಮಾಡುವ ಮೂಲಕ ಅದು ವಿಷವಲ್ಲ ಎಂದು ಸಾಬೀತು ಪಡಿಸಿದ್ದಾರೆ. ಈ ವಿಷಯ ಕೇಳಿ ನಿಮ್ಮಲ್ಲಿಯೂ ಸಾವಿರಾರು ಪ್ರಶ್ನೆಗಳು ಹುಟ್ಟಿಕೊಂಡಿರಬಹುದು ಅವುಗಳಿಗೆ ಉತ್ತರ ಇಲ್ಲಿದೆ.

ಗೋಡೆಗಳ ಮೇಲೆ ಹರಿದಾಡುವ ಹಲ್ಲಿಗಳನ್ನು (lizard ) ಕಂಡರೆ ಹಲವರಿಗೆ ಭಯ. ಕೆಲವರಂತು ಅದನ್ನು ನೋಡಲು ಸಹ ಇಷ್ಟಪಡುವುದಿಲ್ಲ. ಅದಲ್ಲದೆ ಹಲ್ಲಿಯೊಂದು ವಿಷಕಾರಿ ಪ್ರಾಣಿ ಎಂದು ಅನೇಕ ಮಂದಿ ಭಾವಿಸಿದ್ದಾರೆ. ಹಾಗಾಗಿ ಮನೆಗಳಲ್ಲಿ ಹಲ್ಲಿ ಕಂಡ ತಕ್ಷಣ ಅದನ್ನು ಓಡಿಸಲು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಇರುವ ಮುಕ್ಕಾಲು ಭಾಗ ಜನ ಅದನ್ನು ವಿಷಕಾರಿ ಪ್ರಾಣಿ, ಅದು ಆಹಾರದಲ್ಲಿ ಬಿದ್ದರೆ ವಿಷವಾಗುತ್ತೆ, ಅದನ್ನು ಸೇವನೆ ಮಾಡಿದರೆ ಸಾಯುತ್ತೇವೆ ಹಾಗಾಗಿ ಅದನ್ನು ಎಲ್ಲಿ ಕಂಡರೂ ಓಡಿಸಬೇಕು ಎಂದು ಅಂದುಕೊಂಡಿರುತ್ತಾರೆ. ಆದರೆ ಇಲ್ಲೊಬ್ಬರು ಈ ನಂಬಿಕೆಯನ್ನು ಸಾಕ್ಷಿ ಸಮೇತ ಸುಳ್ಳು ಮಾಡಿದ್ದಾರೆ. ಹೌದು. ಹಲ್ಲಿ ಬಿದ್ದ ಆಹಾರವನ್ನು ಸೇವನೆ ಮಾಡುವ ಮೂಲಕ ಅದು ವಿಷವಲ್ಲ ಎಂದು ಸಾಬೀತು ಪಡಿಸಿದ್ದಾರೆ. ಈ ವಿಷಯ ಕೇಳಿ ನಿಮ್ಮಲ್ಲಿಯೂ ಸಾವಿರಾರು ಪ್ರಶ್ನೆಗಳು ಹುಟ್ಟಿಕೊಂಡಿರಬಹುದು ಅವುಗಳಿಗೆ ಉತ್ತರ ಇಲ್ಲಿದೆ.
ಉರಗ ತಜ್ಞರಾಗಿರುವ ಡಾ. ಪಿ. ಗೌರಿ ಶಂಕರ್ ಅವರ ಹೆಸರನ್ನು ಹಲವರು ಕೇಳಿರಬಹುದು. ಅವರು ಈ ಹಿಂದೆ ಒಂದು ವಿಡಿಯೋದಲ್ಲಿ “ಹಲ್ಲಿಗಳು ವಿಷಕಾರಿ ಅಲ್ಲ. ಅವು ಮನುಷ್ಯ ಸ್ನೇಹಿ ಆಗಿವೆ. ಇವುಗಳಿಂದ ಮನುಷ್ಯರಿಗೆ ಯಾವುದೇ ಹಾನಿಯಿಲ್ಲ. ಇವುಗಳು ವಿಷವನ್ನು ಉತ್ಪಾದಿಸುವುದಿಲ್ಲ ಅಥವಾ ಮನುಷ್ಯರಿಗೆ ಯಾವುದೇ ರೀತಿಯಲ್ಲಿ ಹಾನಿ ಮಾಡುವುದಿಲ್ಲ.ಕೆಲವು ಕೀಟಗಳಂತೆ, ಹಲ್ಲಿಗಳು ಯಾವುದೇ ಆರೋಗ್ಯದ ಅಪಾಯವನ್ನು ಕೂಡ ಉಂಟು ಮಾಡುವುದಿಲ್ಲ ಬದಲಾಗಿ ಇವು ಸೊಳ್ಳೆಗಳು, ಜಿರಳೆಗಳು ಮತ್ತು ಇತರ ಕೀಟಗಳನ್ನು ತಿಂದು ನಮ್ಮ ಮನೆಗಳನ್ನು ಸುರಕ್ಷಿತವಾಗಿ ಇರಿಸುತ್ತದೆ” ಎಂದು ಹೇಳಿದ್ದರು.
View this post on Instagram
ಹಲ್ಲಿ ಬಿದ್ದ ಆಹಾರ ವಿಷವೇ?
ಈ ವಿಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವರು ಅದನ್ನು ನೀವು ಒಮ್ಮೆ ತಿಂದು ನೋಡಿ ಏನಾದರೂ ಆಗಬಹುದು ಎಂದು ಕಮೆಂಟ್ ಮಾಡಿದ್ದರು, ಇದಕ್ಕೆ ಪೂರಕ ಎಂಬಂತೆ ಒಂದು ಹಳ್ಳಿಯಲ್ಲಿರುವ ಮನೆಯಲ್ಲಿ ಸಾಂಬರ್ ನಲ್ಲಿ ಹಲ್ಲಿ ಬಿದ್ದಿದ್ದು, ಅದನ್ನು ತಿಂದು ನೋಡಿ ಎಂದು ಫೋನ್ ಕರೆ ಮಾಡಿ ವ್ಯಕ್ತಿಯೊಬ್ಬರು ಗೌರಿ ಶಂಕರ್ ಗೆ ಹೇಳಿದ್ದಾರೆ. ಇದನ್ನು ಸ್ವತಃ ಪರೀಕ್ಷೆ ಮಾಡಲು ಖುದ್ದಾಗಿ ಅವರೇ ತೆರಳಿ ಹಲ್ಲಿ ಬಿದ್ದಿರುವ ಸಾಂಬರ್ ಅನ್ನು ಸೇವನೆ ಮಾಡಿ ತಿಂದು ಮರುದಿನ ಬದುಕಿದ್ದೀನೋ? ಇಲ್ಲವೋ ? ಏನಾಯಿತು ಎಂದು ತಿಳಿಸುವುದಾಗಿ ಹೇಳುತ್ತಾರೆ. ಹಾಗಾದರೆ ಹಲ್ಲಿ ಬಿದ್ದ ಆಹಾರ ಸೇವನೆ ಮಾಡಬಹುದೇ? ಇದರಿಂದ ಜೀವ ಹೋಗುವುದು ನಿಜವೇ? ಈ ರೀತಿ ಪ್ರಶ್ನೆಗಳು ಮೂಡುವುದು ಸಹಜ. ಆದರೆ ಇದಕ್ಕೂ ಡಾ. ಪಿ. ಗೌರಿ ಶಂಕರ್ ಉತ್ತರ ನೀಡಿದ್ದು, “ಸಾಮಾನ್ಯವಾಗಿ ಹಲ್ಲಿ ಬಿದ್ದ ಆಹಾರ ವಿಷಕಾರಿ ಎಂದು ನಾವು ತಿಳಿದಿದ್ದೇವೆ. ಆದರೆ ವಾಸ್ತವದಲ್ಲಿ ಅದು ಮಿಥ್ಯ. ಹಲ್ಲಿಗಳು ವಿಷಕಾರಿಯಾಗಿರುವುದಿಲ್ಲ. ಆದರೆ ಅದರಲ್ಲಿ ಸಾಲ್ಮೊನೆಲ್ಲ ಎಂಬ ವೈರಾಣು ಇರುತ್ತದೆ, ಆದರೆ ಆಹಾರವನ್ನು ಕುದಿಸುವುದರಿಂದ ಅದರಲ್ಲಿರುವ ವೈರಾಣುವು ಸಾಯುತ್ತವೆ ಹಾಗಾಗಿ ಆ ಆಹಾರವನ್ನು ಸೇವಿಸಬಹುದು” ಎಂದು ಅವರು ಬರೆದುಕೊಂಡಿದ್ದಾರೆ.
ಹಲ್ಲಿಬಿದ್ದಂತಹ ಆಹಾರ ತಿಂದು ಅಸ್ವಸ್ತರಾಗಲು ಕಾರಣವೇನು?
ಇದಾದ 3 ದಿನಗಳ ಬಳಿಕ ಡಾ. ಪಿ. ಗೌರಿ ಶಂಕರ್ ಅವರು ಈ ವಿಷಯಕ್ಕೆ ಸಂಬಂಧಿಸಿದ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ಹಂಚಿಕೊಂಡ ಮಾಹಿತಿ ಪ್ರಕಾರ, “ಹಲ್ಲಿ ಅಥವಾ ಬೇರೆ ಯಾವುದೇ ಜಂತು ಆಹಾರದಲ್ಲಿ ಬಿದ್ದರೆ, ಅದು ವಿಷಕಾರಿಯಾಗಿ ಮನುಷ್ಯ ಸಾಯುವ ಪರಿಸ್ಥಿತಿಗೆ ಹೋಗುವಷ್ಟು ಅಪಾಯಕಾರಿಯಾಗಿರುವುದಿಲ್ಲ. ಹಾಗದರೆ ಆ ಆಹಾರಗಳನ್ನು ತಿಂದಾಗ ಏಕೆ ಅಸ್ವಸ್ತರಾಗುತ್ತಾರೆ ಎಂದು ನನ್ನನು ಕೇಳಿದರೆ, ಅದು ಮೊದಲಿಗೆ ನಾವು ಅನುಸರಿಸುವ ಅಶುಚಿತ್ವವಾದ ಕಾರ್ಯ ವೈಖರಿಗಳು. ಹೌದು. ಅಡುಗೆ ಮಾಡುವ ಮೊದಲು ಶುಚಿತ್ವವನ್ನು ಕಾಪಾಡಿಕೊಂಡರೆ ನಾವು ಬೇರೆ ಪ್ರಾಣಿಗಳ ಮೇಲೆ ನಮ್ಮ ತಪ್ಪನ್ನು ಹೊರಿಸುವುದನ್ನು ತಡೆಯಬಹುದು” ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಆಲೂಗಡ್ಡೆ ಪ್ರೀಯರಿಗೆ ಶಾಕಿಂಗ್ ನ್ಯೂಸ್! ಜಾಸ್ತಿ ತಿಂದರೆ ಸಮಸ್ಯೆ ತಪ್ಪಿದ್ದಲ್ಲ
ಈ ಮೂಲಕ ಅವರು ಹಲ್ಲಿ ಬಿದ್ದ ಆಹಾರ ವಿಷಕಾರಿ ಅಲ್ಲ. ಆದರೆ, ಹಲ್ಲಿಯ ದೇಹದ ಮೇಲಿರುವ ಸಾಲ್ಮೊನೆಲ್ಲ ಎಂಬ ವೈರಾಣು ಸ್ವಲ್ಪ ವಿಷಕಾರಿ ಆಗಿದ್ದು, ಅದು ಅರೆಬರೆ ಬೆಂದರೆ ಅಥವಾ ಸಾಂಬರ್‌ನಲ್ಲಿ ಬಿದ್ದು ಒದ್ದಾಡುತ್ತಿದ್ದರೆ ಅದನ್ನು ತಿನ್ನಬಾರದು. ಆಗ ಹಲ್ಲಿಯನ್ನು ಬೀಸಾಡಿ ಮತ್ತೊಮ್ಮೆ ಚೆನ್ನಾಗಿ ಆಹಾರವನ್ನು ಬಿಸಿ ಮಾಡಿದರೆ ಅದನ್ನು ಯಾವುದೇ ಅಂಜಿಕೆಯಿಲ್ಲದೆ ತಿನ್ನಬಹುದು. ಒಂದು ವೇಳೆ ಹಲ್ಲಿ ಬಿದ್ದು, ಸರಿಯಾಗಿ ಬೇಯಿಸದ ಆಹಾರ ತಿಂದರೆ ವಾಂತಿ- ಬೇಧಿ ಆಗಬಹುದು. ಅದರ ಹೊರತು ಮನುಷ್ಯ ಸಾಯುವುದಿಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:23 pm, Thu, 27 March 25