Viral: ಎಣ್ಣೆ ಏಟಲ್ಲಿ ನಡು ರಸ್ತೆಯಲ್ಲಿ ತೂರಾಡಿದ ಕಾಲೇಜು ಪ್ರಾಧ್ಯಾಪಕ; ವಿಡಿಯೋ ವೈರಲ್
ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು ಎಂದು ಹೇಳ್ತಾರೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ವಿದ್ಯಾರ್ಥಿಗಳನ್ನು ತಿದ್ದಿ ಬುದ್ಧಿ ಹೇಳಬೇಕಾದ ಶಿಕ್ಷಕರೊಬ್ಬರು ಕಂಠ ಪೂರ್ತಿ ಕುಡಿದು ತೂರಾಡಿದ್ದಾರೆ. ಎಣ್ಣೆ ಏಟಲ್ಲಿ ದಾರಿ ಕಾಣದೆ ತೂರಾಡುತ್ತಾ ರಸ್ತೆಯಲ್ಲೇ ಬಿದ್ದು ಹೊರಳಾಡಿದ್ದು, ಸ್ಥಳೀಯರು ಇದು ಯಾರೋ ಅಸ್ವಸ್ಥನಿರಬೇಕು ಎಂದು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ನಂತರ ಇದು ಕಾಲೇಜು ಪ್ರಾಧ್ಯಪಕ ಎಂದು ತಿಳಿದು ಬಂದಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮಧ್ಯಪ್ರದೇಶ, ಮಾ. 30: ಮದ್ಯಪಾನ (alcohol), ಧೂಪಪಾನದಂತಹ (smoking) ಕೆಟ್ಟ ಚಟಗಳು ಮನುಷ್ಯನನ್ನು ಸರ್ವನಾಶ ಮಾಡುತ್ತದೆ. ಇಂತಹ ಕೆಟ್ಟ ಚಟಗಳು ಎಂಥಹವರನ್ನು ಬೇಕಾದರೂ ಹಾಳು ಮಾಡಿ ಬಿಡುತ್ತದೆ. ಈ ಮಾತಿಗೆ ಉದಾಹರಣೆಯಂತಿರುವ ಸಾಕಷ್ಟು ಘಟನೆಗಳನ್ನು ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಮಧ್ಯಪ್ರದೇಶದಲ್ಲೊಂದು (Madhya Pradesha) ಇಂತಹದ್ದೇ ಘಟನೆ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಗಳ (students) ಭವಿಷ್ಯವನ್ನು ರೂಪಿಸಬೇಕಾದ ಶಿಕ್ಷರೊಬ್ಬರು ಕಂಠಪೂರ್ತಿ ಕುಡಿದು ಬೇಜವಬ್ದಾರಿಯಿಂದ ವರ್ತಿಸಿದ್ದಾರೆ. ಕಾಲೇಜು ಪ್ರಾಧ್ಯಾಪಕ (college professor) ಎಣ್ಣೆ ಏಟಲ್ಲಿ ತೂರಾಡುತ್ತಾ ದಾರಿ ಕಾಣದೆ ರಸ್ತೆಯಲ್ಲೇ ಬಿದ್ದು ಹೊರಳಾಡಿದ್ದು, ಈ ದೃಶ್ಯವನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಉಪನ್ಯಾಸಕರ ಈ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಮಾಹಿತಿಗಳ ಪ್ರಕಾರ ಈ ಘಟನೆ ಮಧ್ಯಪ್ರದೇಶದ ರೇವಾ ನಗರದ ಪಿಲಿ ಕೋಥಿ ಕಾಂಪೌಂಟ್ ಬಳಿ ನಡೆದಿದ್ದು, ಕಾಲೇಜು ಉಪನ್ಯಾಸಕ ಕಂಠಪೂರ್ತಿ ಕುಡಿದು ತೂರಾಡಿದ್ದಾರೆ. ಅಲ್ಲಿದ್ದ ಸ್ಥಳೀಯರು ಇದು ಯಾರೋ ಮಾನಸಿಕ ಅಸ್ವಸ್ಥನಿರಬಹುದೆಂದು ಆಂಬ್ಯಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದ್ರೆ ವಿಡಿಯೋ ವೈರಲ್ ಆದ ಬಳಿಕ ಈ ವ್ಯಕ್ತಿ ರೇವಾ ಜಿಲ್ಲೆಯ ಸರ್ಕಾರಿ ಬಾಲಕಿಯ ಕಾಲೇಜಿನ ಪ್ರಾದ್ಯಾಪಕ ಅಭಿಷೇಕ್ ಮಾಳವೀಯ ಎಂಬುದು ತಿಳಿದು ಬಂದಿದೆ. ಅತಿಥಿ ಉಪನ್ಯಾಸಕರಾರ ಇವರು ಬಿ.ಕಾಂ ವಿದ್ಯಾರ್ಥಿಗಳಿಗೆ ಫಿನಾನ್ಸ್ ವಿಷಯದ ಬಗ್ಗೆ ಪಾಠ ಮಾಡುತ್ತಿದ್ದರು. ಆದರೆ ಆ ಉಪನ್ಯಾಸಕ ಶನಿವಾರ (ಮಾ. 29) ಕಂಠಪೂರ್ತಿ ಕುಡಿದು ಸಾರ್ವಜನಿಕ ಸ್ಥಳದಲ್ಲಿಯೇ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಕಾಲೇಜು ಆಡಳಿತ ಮಂಡಳಿಯು ಆ ಉಪನ್ಯಾಸಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ಇದನ್ನೂ ಓದಿ: ಇದು ಟ್ರಾನ್ಸ್‌ಫಾರ್ಮರ್; ಸೋದರ ಸೊಸೆಯ ಫ್ಯಾನ್ಸಿ ಪೆನ್ಸಿಲ್ ಬಾಕ್ಸ್ ಕಂಡು ದಂಗಾದ ಯುವಕ
ವೈರಲ್ ವಿಡಿಯೋ ಇಲ್ಲಿದೆ ನೋಡಿ
#WATCH | MP: Govt Girls College Professor Caught In Inebriated State On Road In Rewa#MadhyaPradesh #MPNews #Rewa pic.twitter.com/Kt9hJG9YkH
— Free Press Madhya Pradesh (@FreePressMP) March 29, 2025
ಈ ಕುರಿತ ವಿಡಿಯೋವನ್ನು FreePressMP ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಂಠಪೂರ್ತಿ ಕುಡಿದ ಪ್ರಾಧ್ಯಾಪಕ ನಡೆದಾಡಲು ಸಾಧ್ಯವಾಗದೆ ರಸ್ತೆಯಲ್ಲೇ ಕುಳಿತು ಹೊರಳಾಡುವಂತಹ ದೃಶ್ಯವನ್ನು ಕಾಣಬಹುದು. ಈ ದೃಶ್ಯವನ್ನು ಕಂಡು ಇಂತಹ ಶಿಕ್ಷಕರಿದ್ದರೆ ಮಕ್ಕಳ ಭವಿಷ್ಯದ ಕಥೆಯೇನು ಎಂದು ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ