Viral: ಇದು ಟ್ರಾನ್ಸ್‌ಫಾರ್ಮರ್; ಸೋದರ ಸೊಸೆಯ ಫ್ಯಾನ್ಸಿ ಪೆನ್ಸಿಲ್ ಬಾಕ್ಸ್ ಕಂಡು ದಂಗಾದ ಯುವಕ
ಕಂಟೆಂಟ್ ಕ್ರಿಯೇಟರ್ಸ್ ಬಟ್ಟೆ, ಮೇಕಪ್ ಪ್ರೊಡಕ್ಟ್ ಸೇರಿದಂತೆ ತಾವು ಖರೀದಿಸುವ ವಸ್ತುಗಳ ಬಗ್ಗೆ ರಿವ್ಯೂ ಕೊಡ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ತನ್ನ ಸೋದರ ಸೊಸೆಯ ಹೈಟೆಕ್ ಪೆನ್ಸಿಲ್ ಬಾಕ್ಸ್ ಬಗ್ಗೆ ತಮಾಷೆಯ ರಿವ್ಯೂ ಕೊಟ್ಟಿದ್ದಾನೆ. ನೋಡಿ ಈ ಯುನಿಕಾರ್ನ್ ಥೀಮ್ ಪೆನ್ಸಿಲ್ ಬಾಕ್ಸ್‌ನಲ್ಲಿ ಪೆನ್ಸಿಲ್, ಎರೇಸರ್, ಸ್ಕೇಲ್ ಇವೆಲ್ಲವನ್ನು ಇಡಲು ಬೇರೆ ಬೇರೆ ಜಾಗ ಇದೆ, ಇದೇನು ಪೆನ್ಸಿಲ್ ಬಾಕ್ಸ್ ಅಲ್ಲ ಟ್ರಾನ್ಸ್‌ಫಾರ್ಮರ್ ತರಹ ಇದೆ ಎಂದು ಹೇಳಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈಗಿನ ಕಾಲದ ಮಕ್ಕಳಿಗೆ ಉತ್ತಮ ಗುಣಮಟ್ಟದ (high-tech) ಶಿಕ್ಷಣದ ಜೊತೆಗೆ ಹೈಟೆಕ್ ಸೌಲಭ್ಯಗಳು ಕೂಡಾ ಶಾಲೆಯಲ್ಲಿ ಸಿಗುತ್ತಿವೆ. ಅಷ್ಟೇ ಯಾಕೆ ಮಕ್ಕಳು ಬಳಸುವ ಬ್ಯಾಗ್ , ಪೆನ್ಸಿಲ್‌ನಿಂದ ಹಿಡಿದು ಪೆನ್ಸಿಲ್ ಬಾಕ್ಸ್ ವರೆಗೆ ಎಲ್ಲವೂ ಫ್ಯಾನ್ಸಿ (fancy) ಮತ್ತು ಹೈಟೆಕ್ ಆಗಿವೆ. ಇವೆಲ್ಲವನ್ನು ನೋಡಿದಾಗ ಅಬ್ಬಬ್ಬಾ ಏನೆಲ್ಲಾ ಬಂದಿದ್ಯಪ್ಪಾ ಎಂದು ಆಶ್ಚರ್ಯಚಕಿತರಾಗುತ್ತೇವೆ ಅಲ್ವಾ. ಅದೇ ರೀತಿ ಇಲ್ಲೊಬ್ಬ ಯುವಕ ತನ್ನ ಸೊಸೆಯ ಫ್ಯಾನ್ಸಿ ಹಾಗೂ ಹೈಟೆಕ್ ಪೆನ್ಸಿಲ್ ಬಾಕ್ಸ್ ಕಂಡು ಫುಲ್ ಶಾಕ್ ಆಗಿದ್ದಾನೆ. ಬಟನ್ ಕ್ಲಿಕ್ ಮಾಡಿದ್ರೆ ಓಪನ್ ಆಗುವ ಯುನಿಕಾರ್ನ್ ಥೀಮ್‌ನ ಈ ಪೆನ್ಸಿಲ್ ಬಾಕ್ಸ್ ಕಂಡು ಯುವಕ ದಂಗಾಗಿದ್ದು, ಇದರ ರಿವ್ಯೂ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಈತನ ತಮಾಷೆಯ ರಿವ್ಯೂ ವಿಡಿಯೋ ಇದೀಗ ಫುಲ್ ವೈರಲ್ ಆಗುತ್ತಿದೆ.
ಆ ಯುವಕ ತನ್ನ ಸೋದರ ಸೊಸೆಯ ಯುನಿಕಾರ್ನ್ ಪೆನ್ಸಿಲ್ ಬಾಕ್ಸ್ ನೋಡಿ ಆಶ್ಚರ್ಯಚಕಿತನಾಗಿ, ಇದು ಪೆನ್ಸಿಲ್ ಬಾಕ್ಸ್ ಅಲ್ಲ, ಟ್ರಾನ್ಸ್‌ಫಾರ್ಮರ್ ಎಂದು ತುಂಬಾ ತಮಾಷೆಯ ವಿಮರ್ಶೆಯನ್ನು ನೀಡಿದ್ದಾನೆ. ನಾವೆಲ್ಲಾ ಪೆನ್, ಪೆನ್ಸಿಲ್ ಇಡಲು ಜಾಮಿಟ್ರಿ ಬಾಕ್ಸ್ ಬಳಸುತ್ತಿದ್ದೆವು, ಆದ್ರೆ ಈಗಿನ ಮಕ್ಕಳಿಗೆ ನೋಡಿ ಹೈಟೆಕ್ ಪೆನ್ಸಿಲ್ ಬಾಕ್ಸ್ ಬಂದಿದೆ ಎಂದು ಹೇಳಿದ್ದಾನೆ.
ರೋಹನ್ (drremark) ಎಂಬಾತ ಈ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾನೆ. ವೈರಲ್ ವೀಡಿಯೊದಲ್ಲಿ, ರೋಹನ್ ಉತ್ಸಾಹದಿಂದ ತನ್ನ ಸೊಸೆಯ ಗುಲಾಬಿ ಬಣ್ಣದ ಪೆನ್ಸಿಲ್ ಬಾಕ್ಸ್ ಪರಿಚಯಿಸುತ್ತಾ, ಎಲ್ಲರಿಗೂ ನಮಸ್ಕಾರ, ಇದು ತುಂಬಾ ಕ್ರೇಜಿಯಾಗಿದೆ. ಇದು ನನ್ನ ಸೊಸೆಯ ಪೆನ್ಸಿಲ್ ಬಾಕ್ಸ್, ಇದರಲ್ಲಿ ಏನೆಲ್ಲಾ ಸೌಲಭ್ಯಗಳಿವೆ ನೋಡಿ. ನಾವೆಲ್ಲಾ ಜಾಮಿಟ್ರಿ ಬಾಕ್ಸ್ ಬಳಸುತ್ತಿದ್ದೆವು. ಈ ಪೆನ್ಸಿಲ್ ಬಾಕ್ಸ್ ಟ್ರಾನ್ಸ್‌ಫಾರ್ಮರ್ ತರಹ ಇದೆ ಎಂದು ತಮಾಷೆಯ ರಿವ್ಯೂ ಕೊಟ್ಟಿದ್ದಾನೆ.
ಮತ್ತಷ್ಟು ಓದಿ:ಡ್ಯಾನ್ಸರ್ಗೆ ಹಣ ಕೊಡುತ್ತಾ ಮೈಮೇಲೆ ಪ್ರಜ್ಞೆಯಿಲ್ಲದಂತೆ ಕುಣಿಯುತ್ತಿದ್ದ ಬಾಲಕ, ಮುಂದೇನಾಯ್ತು ನೋಡಿ
ಮಾರ್ಚ್ 13 ರಂದು ಶೇರ್ ಮಾಡಲಾದ ಈ ವಿಡಿಯೋ 13.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನನ್ನ ಬಾಲ್ಯದ ಕನಸಿನ ಪೆನ್ಸಿಲ್ ಬಾಕ್ಸ್ʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನನಗೂ ಇಂತಹದ್ದೊಂದು ಪೆನ್ಸಿಲ್ ಬಾಕ್ಸ್ ಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನನ್ನ ಪೆನ್ಸಿಲ್ ಬಾಕ್ಸ್‌ನಲ್ಲಿ ಲೈಟ್ ಕೂಡಾ ಇತ್ತುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:21 pm, Sun, 30 March 25