Viral: ಮುದ್ದು ಮರಿಗಳೊಂದಿಗೆ ತಾಯಿ ಹುಲಿ; ಅಪರೂಪದ ದೃಶ್ಯ ಕಂಡು ಪ್ರವಾಸಿಗರು ಫುಲ್ ಖುಷ್
ಮೈಸೂರಿನ ಹೆಚ್. ಡಿ ಕೋಟೆ ತಾಲೂಕಿನ ದಮ್ಮನಕಟ್ಟೆ ಅರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿಗಳು ದರ್ಶನ ನೀಡಿವೆ. ನಾಲ್ಕು ಮುದ್ದಾದ ಮರಿಗಳೊಂದಿಗೆ ತಾಯಿ ಹುಲಿ ದರ್ಶನ ಕೊಟ್ಟಿದ್ದು, ಈ ರೋಮಾಂಚನಕಾರಿ ದೃಶ್ಯವನ್ನು ಕಂಡು ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ. ತಾಯಿ ಹುಲಿಯ ಗಾಂಭೀರ್ಯದ ನಡಿಗೆ, ಮರಿಗಳ ತುಂಟತನದ ಈ ಮನಮೋಹಕ ದೃಶ್ಯ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿದೆ.

ಮೈಸೂರು, ಮಾ. 30: ಪ್ರಾಣಿ ಪ್ರಿಯರಿಗೆ ಸಫಾರಿಗೆ ಹೋಗುವುದೆಂದರೆ ಸಿಕ್ಕಾಪಟ್ಟೆ ಇಷ್ಟ. ಕಾಡಿನ (forest) ನಡುವೆ ರಾಜಾರೋಷವಾಗಿ ಓಡಾಡುವ ಪ್ರಾಣಿಗಳನ್ನು ನೋಡಲೆಂದೇ ಸಫಾರಿ ಪಾಯಿಂಟ್‌ಗಳಿಗೆ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುತ್ತಾರೆ. ಅದೇ ರೀತಿ ಶುಕ್ರವಾರ (ಮಾ. 28) ಮುಂಜಾನೆ ದಮ್ಮನಕಟ್ಟೆ (Dammanakatte) ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ತಾಯಿ ಹುಲಿಯೊಂದು ತನ್ನ ನಾಲ್ಕು ಮುದ್ದು ಮರಿಗಳೊಂದಿಗೆ (cubs) ದರ್ಶನ ನೀಡಿದೆ. ಹುಲಿಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಗಾಂಭೀರ್ಯದಿಂದ ನಡೆದುಕೊಂಡು ಹೋಗುವುದು, ಹುಲಿ ಮರಿಗಳ ತುಂಟತನ ಈ ಎಲ್ಲಾ ದೃಶ್ಯಗಳನ್ನು ಕಂಡು ಪ್ರವಾಸಿಗರು ಫುಲ್ ಖುಷಿಯಾಗಿದ್ದಾರೆ. ಜೊತೆಗೆ ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲೂ ಹರಿ ಬಿಟ್ಟಿದ್ದಾರೆ.
ಸಫಾರಿಗೆ ಹೋದವರಿಗೆ ಹುಲಿಗಳು ಕಾಣ ಸಿಗುವುದು ತೀರಾ ವಿರಳ. ಆದ್ರೆ ಶುಕ್ರವಾರ (ಮಾ. 28) ಹೆಚ್. ಡಿ ಕೋಟೆ ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದಮ್ಮನಕಟ್ಟೆ ಸಫಾರಿ ಕೇಂದ್ರಕ್ಕೆ ಸಫಾರಿಗೆ ಬಂದ ಪ್ರವಾಸಿಗರಿಗೆ 5 ಹುಲಿಗಳು ದರ್ಶನ ನೀಡಿವೆ. ಹೌದು 7 ವರ್ಷ ವಯಸ್ಸಿನ ತಾಯಿ ಹುಲಿ ತನ್ನ ನಾಲ್ಕು ಮುದ್ದಾದ ಮರಿಗಳೊಂದಿಗೆ ಪ್ರವಾಸಿಗರಿಗೆ ದರ್ಶನ ನೀಡಿದೆ.
Wildlife enthusiasts on Safari from Dammanakatte Safaripoint gate witness a 7yr old tigress popularly known as Magge with her four cubs on Sunkadakatte guesthouse road,at AntharasantheRange of NagaraholeTigerReserve in H D Kote tq of Mysuru dist on Friday morning. @DeccanHerald pic.twitter.com/CZvyuVZgD5
— Shilpa P. (@shilpapdcmysuru) March 28, 2025
ಮತ್ತಷ್ಟು ಓದಿ:ಡ್ಯಾನ್ಸರ್ಗೆ ಹಣ ಕೊಡುತ್ತಾ ಮೈಮೇಲೆ ಪ್ರಜ್ಞೆಯಿಲ್ಲದಂತೆ ಕುಣಿಯುತ್ತಿದ್ದ ಬಾಲಕ, ಮುಂದೇನಾಯ್ತು ನೋಡಿ
ಈ ಕುರಿತ ವಿಡಿಯೋವನ್ನು ಶಿಲ್ಪಾ (shilpapdcmysuru) ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮರಿಗಳು ತಾಯಿ ಹುಲಿಯೊಂದಿಗೆ ಸಮಯವನ್ನು ಕಳೆಯುವ ಹಾಗೂ ತಾಯಿ ಹುಲಿ ಒಂದು ಮರಿಯನ್ನು ಬಾಯಲ್ಲಿ ಕಚ್ಚಿ ರಸ್ತೆ ದಾಟುವಾಗ ಅದರ ಹಿಂದೆಯೇ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟುಕೊಂಡು ಇತರೆ ಮರಿಗಳು ರಸ್ತೆ ದಾಟುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡು ನೋಡುಗರು ಸಂತಸ ಪಟ್ಟಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:21 am, Sun, 30 March 25