Viral: ಲೈವ್ ರಿಪೋರ್ಟಿಂಗ್ ಮಾಡ್ತಿದ್ದ ವರದಿಗಾರನ ಶರ್ಟ್ ಕಾಲರ್ ಸರಿ ಮಾಡಿದ ವ್ಯಕ್ತಿ; ವಿಡಿಯೋ ವೈರಲ್
ಕೆಲವರು ತಮ್ಮ ದಯೆ, ಪರಾನುಭೂತಿ ಮತ್ತು ಸಹಾಯ ಮನೋಭಾವದಿಂದಲೇ ಎಲ್ಲರ ಗಮನವನ್ನು ಸೆಳೆಯುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಪತ್ರಕರ್ತನ ಶರ್ಟ್ ಕಾಲರ್ ಸರಿ ಪಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಹೌದು ಲೈವ್ ರಿಪೋರ್ಟಿಂಗ್‌ನಲ್ಲಿ ವರದಿಗಾರ ನಿರತನಾಗಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಹೋಗ್ತಿದ್ದ ಆ ವ್ಯಕ್ತಿ ಪತ್ರಕರ್ತನ ಕಾಲರ್ ಸರಿಪಡಿಸಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಈತನ ಈ ಒಳ್ಳೆಯ ಗುಣಕ್ಕೆ ನೆಟ್ಟಿಗರು ತಲೆ ಬಾಗಿದ್ದಾರೆ.

ಈ ಸಮಾಜದಲ್ಲಿ ಬೇರೆಯವರ ಚಿಂತೆ ನಮಗ್ಯಾಕೆ, ನಮ್ಮ ಜೀವನವನ್ನು ನೋಡಿಕೊಂಡರೆ ಸಾಕಪ್ಪಾ ಎಂದುಕೊಳ್ಳುವ ಜನರೇ ಹೆಚ್ಚಿದ್ದಾರೆ. ಇಂತಹ ಜನಗಳ ಮಧ್ಯೆ ಏನನ್ನೂ ಬಯಸದೆ ಇನ್ನೊಬ್ಬರಿಗೆ ಸಹಾಯ ಮಾಡುವ ಜನರೂ ಇದ್ದಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ತನ್ನ ಒಳ್ಳೆಯ ಗುಣ-ನಡತೆಯ, ಮುಗ್ಧತೆಯ ಮೂಲಕ ಗಮನ ಸೆಳೆದಿದ್ದಾನೆ. ಹೌದು ಲೈವ್ ರಿಪೋರ್ಟಿಂಗ್‌ನಲ್ಲಿ (Live reporting) ನಿರತನಾಗಿದ್ದ ಪತ್ರಕರ್ತನ (journalist) ಕಾಲರ್ (collar) ಸರಿಯಿಲ್ಲ ಎಂಬುದನ್ನು ಗಮನಿಸಿದ ಆ ವ್ಯಕ್ತಿ, ಇದೆಲ್ಲಾ ನನಗ್ಯಾಕೆ ಬೇಕು ಎಂದು ಭಾವಿಸದೆ ತಕ್ಷಣ ಹೋಗಿ ಪತ್ರಕರ್ತನ ಕಾಲರ್ ಸರಿ ಪಡಿಸಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈತನ ಒಳ್ಳೆಯತನಕ್ಕೆ ನೆಟ್ಟಿಗರು ತಲೆ ಬಾಗಿದ್ದಾರೆ.
ಬಾಂಗ್ಲಾದೇಶದ ಪರ್ತಕರ್ತನೊಬ್ಬ ಕೈಯಲ್ಲಿ ಮೈಕ್ ಹಿಡಿದು ರಸ್ತೆ ಬದಿಯಲ್ಲಿ ಲೈವ್ ರಿಪೋರ್ಟಿಂಗ್ ಮಾಡುವುದರಲ್ಲಿ ನಿರತನಾಗಿದ್ದ ಸಂದರ್ಭದಲ್ಲಿ ದಾರಿಹೋಕನೊಬ್ಬ ಪತ್ರಕರ್ತನ ಕಾಲರ್ ಸರಿ ಪಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಈ ವಿಡಿಯೋವನ್ನು ಬಾಂಗ್ಲಾದೇಶದ ಪತ್ರಕರ್ತ ಅಹ್ಮದ್ ಶಾವೊನ್ (Redwan Ahmed Shawon) ಎಂಬವರು ಎಂಬವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಸ್ತೆ ಪಕ್ಕದಲ್ಲಿ ನಿಂತು ವರದಿಗಾರ ಲೈವ್ ರಿಪೋರ್ಟಿಂಗ್ ಮಾಡುವುದರಲ್ಲಿ ನಿರತನಾಗಿರುವ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬ ವರದಿಗಾರನ ಶಾರ್ಟ್ ಕಾಲರ್ ಸರಿಪಡಿಸಿ ಹೋಗಿದ್ದಾನೆ.
ಇದನ್ನೂ ಓದಿ: ನಾನು ಶುಕ್ರ ದೇವತೆ; ಸಂಪೂರ್ಣ ನಗ್ನಳಾಗಿ ವಿಮಾನ ನಿಲ್ದಾಣದಲ್ಲಿ ರಾದ್ಧಾಂತ ಸೃಷ್ಟಿಸಿದ ಮಹಿಳೆ
ಮೂರು ದಿನಗಳ ಹಿಂದೆ ಶೇರ್ ಮಾಡಲಾದ ಈ ವಿಡಿಯೋ 2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಬಹುಶಃ ಆ ವ್ಯಕ್ತಿಗೆ ಓಸಿಡಿ ಸಮಸ್ಯೆ ಇರಬಹುದುʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಏಕೆ ಎಲ್ಲರು ತಮಾಷೆ ಮಾಡ್ತಿದ್ದಾರೆ, ಆತ ಏನಅದರೂ ಕೆಟ್ಟ ಕೆಲಸ ಮಾಡಿದ್ನಾʼ ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಎಂತಹ ಸಕರಾತ್ಮಕ ವಿಷಯವಿದು, ನೋಡಿ ತುಂಬಾನೇ ಖುಷಿಯಾಯಿತುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ