Viral: ಅಯ್ಯಯ್ಯೋ… ಕೋಪದಲ್ಲಿ ಪತಿರಾಯನ ನಾಲಿಗೆಯನ್ನೇ ಕಚ್ಚಿ ತುಂಡು ಮಾಡಿದ ಪತ್ನಿ
ಗಂಡ-ಹೆಂಡತಿ ಮಧ್ಯೆ ಸಣ್ಣಪುಟ್ಟ ಜಗಳಗಳು ನಡೆಯುವುದು ಸಾಮಾನ್ಯ. ಕೆಲವೊಂದು ಬಾರಿ ಈ ಗಲಾಟೆಗಳು ಅತಿರೇಕಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದದ್ದು ಕೂಡಾ ಇದೆ. ಇಲ್ಲೊಂದು ಇಂತಹದ್ದೆ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪತ್ನಿ ಕೋಪದಲ್ಲಿ ಪತಿರಾಯನ ನಾಲಿಗೆಯನ್ನೇ ಕಚ್ಚಿ ತುಂಡು ಮಾಡಿದ್ದಾಳೆ. ಹೌದು ಕ್ಷುಲ್ಲಕ ಕಾರಣಕ್ಕೆ ಈ ದಂಪತಿ ಮಧ್ಯೆ ಗಲಾಟೆ ನಡೆದಿದ್ದು, ಕೋಪ ನೆತ್ತಿಗೇರಿ ಹೆಂಡತಿ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ್ದಾಳೆ. ಈ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ರಾಜಸ್ಥಾನ, ಮಾ. 25: ಗಂಡ ಹೆಂಡತಿಯ (Husband-Wife) ಮಧ್ಯೆ ಆಗಾಗ್ಗೆ ಜಗಳಗಳು (hassle) ನಡೆಯುವುದು, ಮನಸ್ತಾಪಗಳು (misunderstanding) ಏರ್ಪಡುವುದು ಸಾಮಾನ್ಯ. ಕೆಲವೊಂದು ಬಾರಿ ಈ ಜಗಳಗಳು ಅತಿರೇಕಕ್ಕೆ ತಿರುಗಿ ರಂಪ ರಾಮಾಯಣ ನಡೆಯುವುದು ಕೂಡಾ ಇದೆ. ಗಂಡ-ಹೆಂಡತಿ ನಡುವಿನ ಇಂತಹ ಹೊಡೆದಾಟ, ಬಡಿದಾಟಗಳ ಸುದ್ದಿ ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಲೇ ಇರುತ್ತವೆ. ಇಲ್ಲೊಂದು ಅಂತಹದ್ದೇ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಗಲಾಟೆಯಲ್ಲಿ ಹೆಂಡ್ತಿ (wife) ಗಂಡನ (husband) ನಾಲಿಗೆಯನ್ನೇ (toungue) ಕಚ್ಚಿ ತುಂಡು ಮಾಡಿದ್ದಾಳೆ. ಕ್ಷುಲ್ಲಕ ಕಾರಣಕ್ಕೆ ಈ ದಂಪತಿಯ ನಡುವೆ ಜಗಳ ಏರ್ಪಟ್ಟಿದ್ದು, ಕೋಪ ನೆತ್ತಿಗೇರಿ ಪತ್ನಿ ಪತಿರಾಯನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ್ದಾಳೆ. ಈ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ಘಟನೆ ರಾಜಸ್ಥಾನದ ಝಲಾವರ್ ಜಿಲ್ಲೆಯ ಬಕಾನಿ ಪಟ್ಟಣದಲ್ಲಿ ನಡೆದಿದ್ದು, ಪತ್ನಿ ಕೋಪದಲ್ಲಿ ತನ್ನ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ್ದಾಳೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಗುರುವಾರ (ಮಾ. 20) ಈ ದಂಪತಿ ಯಾವುದೋ ವಿಷಯಕ್ಕೆ ಜಗಳವಾಡಿದ್ದರು. ಈ ಜಗಳ ತಾರಕಕ್ಕೇರಿ ಕೊನೆಗೆ ಕೋಪಗೊಂಡ ಹೆಂಡತಿ ತನ್ನ ಗಂಡನ ನಾಲಿಗೆಯನ್ನು ಕಚ್ಚಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗಂಡನ ನಾಲಿಗೆ ಕಚ್ಚಿದ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಕಾನಿ ಪಟ್ಟಣದ ಕನ್ಹಯ್ಯಾಲಾಲ್ ಸೈನ್ (25) ಮತ್ತು ಹತ್ತಿರದ ಸುನೆಲ್ ಗ್ರಾಮದ ರವಿನಾ ಸೈನ್ ಒಂದೂವರೆ ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಆದ್ರೆ ಈ ದಂಪತಿಯ ನಡುವೆ ಭಿನ್ನಾಭಿಪ್ರಾಯ ತಲೆದೂರಿ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು. ಇದೀಗ ಈ ಇಬ್ಬರ ನಡುವೆ ದೊಡ್ಡ ಜಗಳವೇ ನಡೆದಿದ್ದು, ಕೋಪದಲ್ಲಿ ಹೆಂಡತಿ ತನ್ನ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ್ದಾಳೆ. ಗಾಯಗೊಂಡ ಕನ್ಹಯ್ಯಾಲಾಲ್‌ನನ್ನು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ತುಂಡಾದ ನಾಲಿಗೆಯನ್ನು ಹೊಲಿದು ಸರಿ ಮಾಡಬಹುದು ಎಂದು ವೈದ್ಯರು ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಯಾವ ಲಾಭದಾಯಕ ಉದ್ದಿಮೆಗೂ ಕಮ್ಮಿಯಿಲ್ಲ ಈ ಚೇಳು ಸಾಕಾಣಿಕೆ
ಈ ಘಟನೆಯ ನಂತರ, ರವೀನಾ ತನ್ನ ಕೋಣೆಯ ಬಾಗಿಲು ಮುಚ್ಚಿ ಮಣಿಕಟ್ಟನ್ನು ಕತ್ತರಿಸಿ ಆತ್ಮಹತ್ಯೆಗೆ ಕೂಡಾ ಯತ್ನಿಸಿದ್ದಾಳೆ. ಪ್ರಸ್ತುತ, ಕನ್ಹಯ್ಯಾಲಾಲ್ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ವಯಂಪ್ರೇರಣೆಯಿಂದ ಗಾಯಗೊಳಿಸಿದ ಮತ್ತು ಗಂಭೀರ ಗಾಯವನ್ನುಂಟುಮಾಡಿದ ಆರೋಪದಡಿ ರವಿನಾ ಸೈನ್ (23) ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 115(2) ಮತ್ತು 118(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈರಲ್ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:47 am, Tue, 25 March 25