ವಾಷಿಂಗ್ ಮೆಷಿನ್ನಿಂದ ಬಯಲಾಯ್ತು ಅತ್ಯಾಚಾರ, ಆರೋಪಿಗೆ ಶಿಕ್ಷೆ
ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬ ತನ್ನ ಮಾಜಿ ಪ್ರೇಯಸಿ ಮೇಲೆ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಜೈಲು ಸೇರಿದ್ದಾನೆ. ನ್ಯಾಯಾಲಯವು 7 ವರ್ಷಗಳ ಶಿಕ್ಷೆಯನ್ನು ವಿಧಿಸಿದೆ. ಅತ್ಯಾಚಾರ ಆರೋಪಿಯ ಅಪರಾಧವನ್ನು ಸಾಬೀತು ಮಾಡಲು ವಾಷಿಂಗ್ ಮೆಷಿನ್ ಸಹಾಯ ಮಾಡಿದೆ. ವಾಷಿಂಗ್ ಮೆಷಿನ್ನ ಪ್ರತಿಬಿಂಬವನ್ನು ಬಳಸಿಕೊಂಡು ಆತನನ್ನು ಅಪರಾಧಿ ಎಂದು ನಿರ್ಣಯಿಸಲಾಯಿತು.

ಸಿಯೋಲ್, ಮಾರ್ಚ್ 25: ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬ ತನ್ನ ಮಾಜಿ ಪ್ರೇಯಸಿ ಮೇಲೆ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಜೈಲು ಸೇರಿದ್ದಾನೆ. ನ್ಯಾಯಾಲಯವು 7 ವರ್ಷಗಳ ಶಿಕ್ಷೆಯನ್ನು ವಿಧಿಸಿದೆ. ಅತ್ಯಾಚಾರ ಆರೋಪಿಯ ಅಪರಾಧವನ್ನು ಸಾಬೀತು ಮಾಡಲು ವಾಷಿಂಗ್ ಮೆಷಿನ್ ಸಹಾಯ ಮಾಡಿದೆ. ವಾಷಿಂಗ್ ಮೆಷಿನ್ನ ಪ್ರತಿಬಿಂಬವನ್ನು ಬಳಸಿಕೊಂಡು ಆತನನ್ನು ಅಪರಾಧಿ ಎಂದು ನಿರ್ಣಯಿಸಲಾಯಿತು. ಇಪ್ಪತ್ತರ ಹರೆಯದ ವ್ಯಕ್ತಿ ತನ್ನ ಮಾಜಿ ಗೆಳತಿ ಮೇಲೆ ಅತ್ಯಾಚಾರವೆಸಗಿದ್ದ, ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ, ಯಾಕೆಂದರೆ ಯಾವುದೇ ದಾಖಲೆ ಆಕೆಯ ಬಳಿ ಇರಲಿಲ್ಲ.
ಆದರೆ ಸಿಸಿಟಿವಿ ಪರಿಶೀಲಿಸಿದಾಗ ವಾಷಿಂಗ್ಮೆಷಿನ್ನ ಮುಚ್ಚುಳದ ಮೇಲಿರುವ ಪ್ರತಿಬಿಂಬವು 39 ನಿಮಿಷಗಳ ಹಲ್ಲೆ, ಅತ್ಯಾಚಾರಕ್ಕೆ ಸಾಕ್ಷಿಯಾಗಿದೆ. ತನ್ನ ಮಾಜಿ ಗೆಳತಿಯ ಮೇಲೆ ಅತ್ಯಾಚಾರ ಸೇರಿದಂತೆ ಹಲವಾರು ಲೈಂಗಿಕ ಅಪರಾಧಗಳಲ್ಲಿ ಶಿಕ್ಷೆ ವಿಧಿಸಲಾದ ನಂತರ ಮೊದಲು ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಅವನ ಮೇಲ್ಮನವಿಯನ್ನು ಆಲಿಸಿದ ನಂತರ, ಸಿಯೋಲ್ ಹೈಕೋರ್ಟ್ ಶಿಕ್ಷೆಯನ್ನು ಏಳು ವರ್ಷಗಳಿಗೆ ಇಳಿಸಿತು. ಅವನಿಗೆ ಯಾವುದೇ ಕ್ರಿಮಿನಲ್ ದಾಖಲೆಗಳಿಲ್ಲ. ಕಳೆದ ವರ್ಷ ಏಪ್ರಿಲ್ ನಿಂದ ಮಾರ್ಚ್ ವರೆಗೆ ಆರು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅಂತ್ರಸ್ತೆ ಆರೋಪಿಸಿದ್ದಳು. ಆತನ ಫೋನ್‌ನಲ್ಲಿ ಆತನ ಮತ್ತು ಇತರ ಮಹಿಳೆಯರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕ ನಂತರ ಆತನಿಂದ ದೂರವಾದಳು.
ಮತ್ತಷ್ಟು ಓದಿ: ವಿದ್ಯಾರ್ಥಿಗಳ ಮೇಲೆ ಅತ್ಯಾಚಾರ ನಡೆಸಿ ವಿಡಿಯೋ ರೆಕಾರ್ಡ್; ಹತ್ರಾಸ್ ಕಾಲೇಜು ಪ್ರೊಫೆಸರ್ ಬಂಧನ
ಪ್ರಕರಣವು ಮೊದಲು ಮಹಿಳೆಯ ಸಾಕ್ಷಿಯನ್ನು ಅವಲಂಬಿಸಿತ್ತು. ನಂತರ ಸಂತ್ರಸ್ತೆಯ ಕೋಣೆಯೊಳಗಿನ ವಾಷಿಂಗ್ ಮೆಷಿನ್ ಮುಚ್ಚಳದಲ್ಲಿ ಹಲ್ಲೆಯನ್ನು ವೀಕ್ಷಿಸಬಹುದು ಎಂದು ಸೂಚಿಸುವ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸಿದರು.
ಪುರಾವೆಗಳನ್ನು ಪರಿಶೀಲಿಸಲು ವಿಧಿವಿಜ್ಞಾನ ವಿಧಾನಗಳ ಮೂಲಕ ವಿಶ್ಲೇಷಿಸಲು ವೀಡಿಯೊವನ್ನು ಸುಪ್ರೀಂ ಪ್ರಾಸಿಕ್ಯೂಟರ್ ಕಚೇರಿಗೆ ಕಳುಹಿಸಲಾಯಿತು.
ಮಾಜಿ ಗೆಳತಿಯ ಮೇಲೆ ಶಂಕಿತ ಅತ್ಯಾಚಾರ ಮತ್ತು ಅಪ್ರಾಪ್ತ ವಯಸ್ಕಳೊಂದಿಗೆ ಲೈಂಗಿಕ ಸಂಬಂಧ ಸೇರಿದಂತೆ ಇತರ ಅಪರಾಧಗಳ ಆರೋಪ ಹೊತ್ತಿದ್ದ ಆ ವ್ಯಕ್ತಿ ಅಂತಿಮವಾಗಿ ಅತ್ಯಾಚಾರಕ್ಕೆ ತಪ್ಪೊಪ್ಪಿಕೊಂಡನು. ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿದರೂ ಸಹ, ಅವನು ತನ್ನ ಅಪರಾಧಕ್ಕಾಗಿ ಏಳು ವರ್ಷಗಳ ಕಾಲ ಜೈಲಿನಲ್ಲಿ ಕಳೆಯಬೇಕಾಗುತ್ತದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ