Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಚೇಳಿನ ವಿಷ ಸಂಗ್ರಹಣೆ ಮೂಲಕ ಲಕ್ಷ ಲಕ್ಷ ಸಂಪಾದನೆ; ಹೇಗಿದೆ ನೋಡಿ ಚೇಳು ಸಾಕಾಣೆ ಉದ್ದಿಮೆ

ಗಾತ್ರದಲ್ಲಿ ಸಣ್ಣದಾಗಿದ್ದರೂ ಚೇಳುಗಳು ಒಮ್ಮೊಮ್ಮೆ ಭೀತಿ ಹುಟ್ಟಿಸುತ್ತವೆ. ಇವುಗಳು ಕಚ್ಚಿದ್ರೆ ವಿಪರೀತ ನೋವು ಮಾತ್ರವಲ್ಲದೆ ಕೆಲವು ಜಾತಿಯ ಚೇಳುಗಳು ಕಚ್ಚುವುದರಿಂದ ಸಾವಿನ ಅಪಾಯ ಕೂಡಾ ಇರುತ್ತದೆ. ಅದೇ ಕಾರಣಕ್ಕೆ ಯಾರು ಕೂಡಾ ಚೇಳಿನ ಹತ್ತರಕ್ಕೂ ಸುಳಿಯೋದಿಲ್ಲ. ಆದ್ರೆ ಕೆಲವರು ಚೇಳು ಸಾಕಾಣೆಯ ಮೂಲಕವೇ ಲಕ್ಷಾಂತರ, ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಇಂಟರೆಸ್ಟಿಂಗ್‌ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Viral: ಚೇಳಿನ ವಿಷ ಸಂಗ್ರಹಣೆ ಮೂಲಕ ಲಕ್ಷ ಲಕ್ಷ ಸಂಪಾದನೆ; ಹೇಗಿದೆ ನೋಡಿ ಚೇಳು ಸಾಕಾಣೆ ಉದ್ದಿಮೆ
ಚೇಳು
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 25, 2025 | 9:43 AM

ಸಾಮಾನ್ಯವಾಗಿ ನಮ್‌ ಕಡೆಯೆಲ್ಲಾ ಭತ್ತ, ರಾಗಿ, ಜೋಳ ಸೇರಿದಂತೆ ತರಕಾರಿ ಕೃಷಿಯ (agriculture) ಜೊತೆಗೆ ಹಸು (cow), ಕುರಿ, ಮೇಕೆ, ಹಂದಿ ಇತ್ಯಾದಿ ಪ್ರಾಣಿಗಳನ್ನು (animals) ಸಾಕಾಣೆ (farming) ಮಾಡ್ತಾರೆ. ಇನ್ನೂ ಕೆಲವೆಡೆ ಹಾವುಗಳನ್ನು ಕೂಡಾ ಸಾಕುವವರಿದ್ದಾರೆ. ಅದೇ ರೀತಿ ವಿಷಕಾರಿ ಚೇಳುಗಳ (Scorpion) ವಿಷವನ್ನು (venom) ಮಾರಾಟ ಮಾಡಿಯೇ ಶ್ರೀಮಂತರಾದವರಿದ್ದಾರೆ. ಹೌದು ಚೇಳುಗಳನ್ನು ಕಂಡ್ರೆ ಮಾರು ದೂರು ಹೋಗುವ ಜನರ ಮಧ್ಯೆ ಚೇಳು ಸಾಕಾಣೆಯ (Scorpion farming) ಮೂಲಕವೇ ಮೂಲಕವೇ ಲಕ್ಷಾಂತರ, ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಇಂಟರೆಸ್ಟಿಂಗ್‌ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಸಾಮಾಜಿಕ ಮಾಧ್ಯಮಗಳ ಮೂಲಕ ನಾವು ಊಹಿಸಲೂ ಸಾಧ್ಯವಾಗದ ಕೆಲವು ವಿಚಿತ್ರ ವಿಷಯಗಳು ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೊಂದು ವಿಡಿಯೋ ವೈರಲ್‌ ಆಗಿದ್ದು, ಅದರಲ್ಲಿ ಲಾಭದಾಯಕ ಚೇಳು ಸಾಕಾಣೆ ಉದ್ದಿಮೆಯ ಬಗ್ಗೆ ತಿಳಿಸಿಕೊಡಲಾಗಿದೆ. ಹಲವಾರು ಔಷಧಿಗಳು, ಸೌಂದರ್ಯ ವರ್ಧಕಗಳ ತಯಾರಿಕೆಯಲ್ಲಿ ಚೇಳುಗಳ ವಿಷವನ್ನು ಬಳಸಲಾಗುತ್ತದೆ. ಈ ಚೇಳುಗಳ ವಿಷವನ್ನು ಮಾರಾಟ ಮಾಡುವ ಮೂಲಕವೇ ಲಕ್ಷಾಂತರ ರೂಪಾಯಿ ಗಳಿಸುವವರಿದ್ದಾರೆ. ಪ್ರತಿ ಚೇಳು ಪ್ರತಿದಿನ ಸುಮಾರು 2 ಮಿಲಿಗ್ರಾಂ ವಿಷವನ್ನು ಉತ್ಪಾದಿಸುತ್ತವೆ. ಮತ್ತು ಇದರ ಒಂದು ಲೀಟರ್‌ ವಿಷವು ಸುಮಾರು $10 ಮಿಲಿಯನ್‌ ಡಾಲರ್‌ಗಳಷ್ಟು ಬೆಲೆ ಬಾಳುತ್ತವೆ. ಚೇಳಿನ ವಿಷವನ್ನು ಕ್ಯಾನ್ಸರ್‌ನಂತಹ ಅನೇಕ ಮಾರಕ ಕಾಯಿಲೆಗಳ ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಲೀಟರ್ ಚೇಳಿನ ವಿಷವು 85 ಕೋಟಿ ರೂ.ಗಳಿಗೂ ಹೆಚ್ಚು ಬೆಲೆಗೆ ಮಾರಾಟವಾಗುತ್ತದೆ. ಇದೀಗ ಚೇಳು ಸಾಕಾಣಿಕೆಗೆ ಸಂಬಂಧಿಸಿದ ಒಂದು ರೋಮಾಂಚನಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
ಇದು ಕ್ಯಾಬ್ ಓಯೋ ಅಲ್ಲ; ವೈರಲ್‌ ಆಯ್ತು ಕ್ಯಾಬ್‌ನ ವಾರ್ನಿಂಗ್‌ ಬೋರ್ಡ್‌
Image
ಈ ಹಳ್ಳಿಯಲ್ಲಿ ಮದುವೆಯಾಗಿ 7 ದಿನಗಳವರೆಗೆ ಬೆತ್ತಲಾಗಿರಬೇಕಂತೆ ಮಹಿಳೆಯರು
Image
ಮಗಳ ವಯಸ್ಸಿನ ಹುಡುಗಿ ಜತೆ ರಸ್ತೆಯಲ್ಲಿ ವ್ಯಕ್ತಿಯ ರೊಮ್ಯಾನ್ಸ್
Image
ರಸ್ತೆಯಲ್ಲಿ ಹೋಗುತ್ತಿರುವಾಗ ಕುಸಿದು ಪ್ರಾಣಬಿಟ್ಟ ಯುವಕ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

Massimo ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಚೇಳುಗಳ ಫಾರ್ಮ್‌ ಅಸ್ತಿತ್ವದಲ್ಲಿರುವುದು ನಿಮಗೆ ಗೊತ್ತೇ?, ಪ್ರತಿ ಚೇಳು ಪ್ರತಿ ದಿನ ಸುಮಾರು 2 ಮಿಲಿಗ್ರಾಂ ವಿಷವನ್ನು ಉತ್ಪಾದಿಸುತ್ತವೆ. ಈ ಒಂದು ಲೀಟರ್‌ ವಿಷ $10 ಮಿಲಿಯನ್‌ ಡಾಲರ್‌ ಬೆಲೆ ಬಾಳುತ್ತವೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಒಂದು ಕೋಣೆಯೊಳಗೆ ರಾಶಿ ರಾಶಿ ಚೇಳುಗಳನ್ನು ಸಾಕಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ವಾಷಿಂಗ್​ ಮೆಷಿನ್​ನಿಂದ ಬಯಲಾಯ್ತು ಅತ್ಯಾಚಾರ, ಆರೋಪಿಗೆ ಶಿಕ್ಷೆ

ಮಾರ್ಚ್‌ 20 ರಂದು ಶೇರ್‌ ಮಾಡಲಾದ ಈ ವಿಡಿಯೋ 90 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನಿಜಕ್ಕೂ ಆಕರ್ಷಕ ಮತ್ತು ಆಶ್ಚರ್ಯಕರವಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಂಬಲಸಾಧ್ಯವಾಗಿದೆ, ಈ ಸಣ್ಣ ಜೀವಿ ಇಷ್ಟೊಂದು ಮೌಲ್ಯಯುವತವಾಗಿದೆಯೇʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ನನ್ನ ಕನಸಿನ ಉದ್ದಿಮೆʼ ಎಂದು ಕಾಮೆಂಟ್‌ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ