Viral: ಹನಿಮೂನ್‌ಗೆಂದು ಮನಾಲಿಗೆ ಹೋಗಿ ರಾತ್ರಿಯ ರೊಮ್ಯಾನ್ಸ್ ವಿಡಿಯೋ ಶೇರ್ ಮಾಡಿದ ನವಜೋಡಿ
ಇತ್ತೀಚಿನ ದಿನಗಳಲ್ಲಿ ಜನ ಲೈಕ್ಸ್ ವೀವ್ಸ್‌ಗಾಗಿ ಏನು ಬೇಕಾದ್ರೂ ಮಾಡ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಸಲುವಾಗಿ ಕೆಲ ಜೋಡಿಗಳು ರೊಮ್ಯಾನ್ಸ್ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಸುದ್ದಿಯಾಗಿದ್ದಿದೆ. ಅದೇ ರೀತಿ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ನವ ಜೋಡಿಯೊಂದು ಹನಿಮೂನ್‌ಗೆಂದು ಮನಾಲಿಗೆ ಹೋಗಿ, ಮಧುಚಂದ್ರದಲ್ಲಿ ರೊಮ್ಯಾನ್ಸ್ ಮೂಡ್‌ನಲ್ಲಿದ್ದ ಖಾಸಗಿ ಕ್ಷಣದ ದೃಶ್ಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಹನಿಮೂನ್ (Honeymoon) ಹೊಸದಾಗಿ ಮದುವೆಯಾ ದಂಪತಿಗಳಿಗೆ ಮಧುರ ಕ್ಷಣ. ಹೆಚ್ಚಾಗಿ ನವ ದಂಪತಿಗಳು ಮದುವೆಯಾದ ಬಳಿಕ ಹನಿಮೂನ್ ಸ್ಪಾಟ್ ಮನಾಲಿಗೆ (Manali) ಟ್ರಿಪ್ ಹೋಗಿ ಅಲ್ಲಿ ಇಬ್ಬರೇ ರೊಮ್ಯಾಂಟಿಕ್ (Romantic) ಕ್ಷಣವನ್ನು ಕಳೆಯಲು ಬಯಸುತ್ತಾರೆ. ಮತ್ತು ಅನೇಕ ದಂಪತಿಗಳು (Couples) ತಮ್ಮ ಮಧುಚಂದ್ರದ ಕ್ಷಣಗಳನ್ನು ಸ್ಮರಣೀಯವಾಗಿಸಲು ಫೋಟೋಗಳು ಮತ್ತು ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಾರೆ ಹಾಗೂ ಈ ಮಧುರ ಕ್ಷಣದ ಸುಂದರ ದೃಶ್ಯವನ್ನು ಅಷ್ಟಾಗಿ ಸೋಷಿಯಲ್ ಮೀಡಿಯಾದಲ್ಲಿ (Social Media) ಮೀಡಿಯಾದಲ್ಲಿ ಹಂಚಿಕೊಳ್ಳಲು ಯಾರು ಇಷ್ಟಪಡುವುದಿಲ್ಲ. ಆದ್ರೆ ಇಲ್ಲೊಂದು ಜೋಡಿ ಹನಿಮೂನ್‌ಗೆಂದು ಮನಾಲಿಗೆ ಹೋಗಿ, ಮಧುಚಂದ್ರದಲ್ಲಿ ರೊಮ್ಯಾನ್ಸ್ ಮೂಡ್‌ನಲ್ಲಿದ್ದ ಖಾಸಗಿ ಕ್ಷಣದ ದೃಶ್ಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಖಾಸಗಿ ಕ್ಷಣದ ದೃಶ್ಯವನ್ನು ಊರಿಗೆಲ್ಲಾ ತೋರಿಸುವ ಅವಶ್ಯಕತೆ ಇತ್ತೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ನವ ದಂಪತಿಗಳಿಬ್ಬರು ಮನಾಲಿಗೆ ಹನಿಮೂನ್‌ಗೆ ಹೋದ ಸಂದರ್ಭದಲ್ಲಿ ತಮ್ಮ ರೊಮ್ಯಾಂಟಿಕ್ ಡೇಟ್ ನೈಟ್ ಹಾಗೂ ಪ್ರಣಯದ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ನೆಟ್ಟಿಗರ ಟೀಕೆಗೆ ಗುರಿಯಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ವಿಡಿಯೋವನ್ನು ಶಾನ್ ಮಿತ್ರ (shaonmitra_) ಎಂಬವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, “ಸ್ಪೆಷಲ್ ಡಿನ್ನರ್ ಇನ್ ಮನಾಲಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ದಂಪತಿ ಹೋಟೆಲ್ ಕೋಣೆಯಲ್ಲಿ ಕೇಕ್ ಕಟ್ ಮಾಡಿ ಪ್ರಣಯ ಸಮಯವನ್ನು ಕಳೆಯುವ ದೃಶ್ಯವನ್ನು ಕಾಣಬಹುದು. ಅಷ್ಟೇ ಅಲ್ಲದೆ ಕೋಣೆಯನ್ನು ಹೂವುಗಳಿಂದ ವಿಶೇಷ ರೀತಿಯಲ್ಲಿ ಅಲಂಕರಿಸಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಕೋಪದಲ್ಲಿ ಗಂಡನ ನಾಲಿಗೆ ಕಚ್ಚಿ ತುಂಡರಿಸಿದ ಹೆಂಡತಿ
2 ಮಿಲಿಯನ್ ವೀಕ್ಷಣೆಗಳನ್ನು ಪಡೆದಿರುವ ಈ ವಿಡಿಯೋಗೆ ಖಾಸಗಿ ಕ್ಷಣದ ದೃಶ್ಯವನ್ನು ಊರಿಗೆಲ್ಲಾ ತೋರಿಸುವ ಅಗತ್ಯ ಇತ್ತೇ ಎಂದು ನೆಗೆಟಿವ್ ಕಾಮೆಂಟ್ಸ್ ಬರಲಾರಂಭಿಸುತ್ತಿದ್ದಂತೆ ದಂಪತಿ ಕಾಮೆಂಟ್ಸ್ ಸೆಕ್ಷನ್ ಆಫ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ