64 ವರ್ಷಗಳ ಹಿಂದೆ ಪ್ರೀತಿಸಿ ಓಡಿ ಹೋಗಿ ಮದುವೆಯಾಗಿದ್ದ ಜೋಡಿಗೆ ಮರುಮದುವೆ
ಕೆಲವೊಂದು ಪ್ರೇಮಕಥೆಗಳೇ ಹಾಗೆ, ಮನಸ್ಸಿಗೆ ತೀರಾ ಹತ್ತಿರವಾಗುತ್ತದೆ. ಎಂಥವರ ಮೈಮನವನ್ನೂ ಒಂದು ಕ್ಷಣ ಬೆಚ್ಚನೆಯ ಭಾವದಲ್ಲಿ ಒದ್ದೆಯಾಗಿಸಿ, ಈ ರೀತಿ ಆಗುತ್ತಾ ಎನ್ನುವ ಇದೀಗ 64 ವರ್ಷಗಳ ಹಿಂದೆ ಕುಟುಂಬದ ವಿರೋಧ ಕಟ್ಟಿಕೊಂಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಗುಜರಾತಿನ ಹರ್ಷ್ ಹಾಗೂ ಮೃದು ದಂಪತಿಗಳು ಇದೀಗ ತಮ್ಮ 64 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಮತ್ತೆ ಮರು ಮದುವೆಯಾಗಿದ್ದಾರೆ. ಈ ಸುಂದರ ಕ್ಷಣಗಳನ್ನು ಮರುಸೃಷ್ಟಿಸುವಂತೆ ಮಾಡಿದ್ದು ಈ ವೃದ್ದ ದಂಪತಿಗಳ ಮೊಮ್ಮಕ್ಕಳು. ಈ ವೃದ್ಧ ದಂಪತಿಗಳ ಪ್ರೇಮ ಕಥೆಯೂ ಎಲ್ಲರಿಗೂ ಮಾದರಿಯೆನಿಸುವಂತಿದೆ.

ಪ್ರೀತಿ (Love) ಎಂಬ ಭಾವನೆ ನಿಜಕ್ಕೂ ಸುಂದರ. ಈ ಹೃದಯದ ಆಳದಿಂದ ಮೂಡಿರುವಂತಹ ನಿಜವಾದ ಪ್ರೀತಿ ಯಾವತ್ತಿಗೂ ಸಾಯಲ್ಲ. ಆದರೆ ವಿಚ್ಛೇದನಗಳೇ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ನೈಜ ಪ್ರೀತಿ ಹುಡುಕುವುದು ತುಂಬಾನೇ ಕಷ್ಟ. ನಮ್ಮ ಸುತ್ತಮುತ್ತಲಿನಲ್ಲಿ ಕೇಳುವ ಕೆಲವೊಂದು ಪ್ರೇಮಕಥೆ (Love Story) ಗಳು ಮೈ ಜುಮ್ಮ್ ಎನಿಸುತ್ತದೆ. ನಿಸ್ವಾರ್ಥವಾಗಿ ಪ್ರೀತಿಸಲು ಸಾಧ್ಯನಾ, ಪ್ರೀತಿಗಾಗಿ ಕುಟುಂಬವನ್ನೇ ತೊರೆಯಲು ಸಾಧ್ಯನಾ ಎಂದೆನಿಸುತ್ತದೆ. ಇದಕ್ಕೆ ಗುಜರಾತಿನ ಈ ವೃದ್ಧ ಜೋಡಿಯೇ ಪ್ರೇಮ ಕಥೆಯೇ ಸಾಕ್ಷಿಯಾಗಿದೆ. 64 ವರ್ಷಗಳ ಹಿಂದೆ ಪ್ರೀತಿಸಿದ್ದ ಈ ಜೋಡಿಯೂ ಕುಟುಂಬದವರ ವಿರೋಧದ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇದೀಗ ತಮ್ಮ 80 ರ ಹರೆಯದಲ್ಲಿಯೂ ಈ ಜೋಡಿಯ ಮರುಮದುವೆ ಮಾಡಿಸಿ ಯೌವನದ ಸುಂದರ ಕ್ಷಣಗಳನ್ನು ಮೊಮ್ಮಕ್ಕಳು ಕಟ್ಟಿಕೊಂಡಿದ್ದಾರೆ.
ಹೌದು, ಭಾರತೀಯ ಸಮಾಜದಲ್ಲಿ ಅಂತರ್ಜಾತಿ ವಿವಾಹಗಳನ್ನು ತಿರಸ್ಕರಿಸಲಾಗುತ್ತಿದ್ದ 1960 ರ ದಶಕದ ಸಮಯವದು. ಜೈನ ಧರ್ಮಕ್ಕೆ ಸೇರಿದ್ದ ಹರ್ಷ್ ಹಾಗೂ ಬ್ರಾಹ್ಮಣ ಹುಡುಗಿಯಾದ ಮೃದುಳ ಪರಿಚಯ ಶಾಲಾದಿನಗಳಲ್ಲೇ ಆಗಿತ್ತು. ಪ್ರೇಮ ಪತ್ರದ ಮೂಲಕ ತಮ್ಮ ಪ್ರೀತಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಮನೆಯವರ ತೀವ್ರ ವಿರೋಧವಿತ್ತು. ಹೀಗಾಗಿ ಆ ಸಮಯದಲ್ಲಿ ಹರ್ಷ್ ಹಾಗೂ ಮೃದುರವರು ಓಡಿ ಹೋಗಿ ಮದುವೆಯಾಗುವ ಆಯ್ಕೆ ಬಿಟ್ಟು ಬೇರೆ ದಾರಿಯಿರಲಿಲ್ಲ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಹೀಗಾಗಿ ತನ್ನ ಕುಟುಂಬದವರಿಗಿಂತ ಪ್ರೀತಿಯೇ ಮುಖ್ಯ ಎಂದು ಹರ್ಷ್ ಮತ್ತು ಮೃದು ಮನೆ ಬಿಟ್ಟು ಓಡಿಹೋದರು. ಇಬ್ಬರೂ ಕೂಡ ಕುಟುಂಬಗಳ ಬೆಂಬಲವಿಲ್ಲದೆ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಕಂಡರು. ಭಾರತೀಯ ವಿವಾಹದಲ್ಲಿ ಕಂಡು ಅಲಂಕೃತ ಉಡುಪುಗಳಿಂದ ದೂರವಿದ್ದ ಈ ಜೋಡಿ ಆ ಸಮಯದಲ್ಲಿ ಕೇವಲ 10 ರೂಪಾಯಿ ಬೆಲೆಯ ಸರಳ ಸೀರೆಯಲ್ಲಿ ಹಾಗೂ ಉಡುಗೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತದನಂತರದಲ್ಲಿ ಈ ಜೋಡಿಯನ್ನು ಎರಡು ಕುಟುಂಬದವರು ಒಪ್ಪಿಕೊಂಡರು. ಅದೆಷ್ಟೋ ವರ್ಷಗಳ ನಂತರ ಮಕ್ಕಳು ಹಾಗೂ ಮೊಮ್ಮಕ್ಕಳು ಹರ್ಷ್ ಹಾಗೂ ಮೃದು ದಂಪತಿಗಳ ಪ್ರೇಮ ಕಥೆ ಬಗ್ಗೆ ಕೇಳಿ ತಿಳಿದಿದ್ದರು.
ಇದನ್ನೂ ಓದಿ: ರಾತ್ರಿಯ ರೊಮ್ಯಾನ್ಸ್ ವಿಡಿಯೋ ಶೇರ್ ಮಾಡಿದ ನವಜೋಡಿ
ಈ ಪ್ರೀತಿಸಿ ಮದುವೆಯಾಗಿ ಸುದೀರ್ಘ ದಾಂಪತ್ಯ ಜೀವನ ನಡೆಸಿದ್ದ ಈ ದಂಪತಿಗಳ ಶಾಶ್ವತ ಪ್ರೇಮಕಥೆಯ ಗೌರವಾರ್ಥವಾಗಿ, ಅವರ ಮೊಮ್ಮಕ್ಕಳು ಸೇರಿ 64 ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿವಾಹ ಸಮಾರಂಭ ಏರ್ಪಡಿಸಿ ಅಚ್ಚರಿಗೊಳಿಸಿದ್ದಾರೆ. 80 ರ ಹರೆಯದಲ್ಲಿಯೂ ವೃದ್ದ ದಂಪತಿಗಳಿಗೆ ಮರು ಮದುವೆ ಮಾಡಿಸುವ ಮೂಲಕ ಯೌವನದಲ್ಲಿ ಅನುಭವಿಸಲು ಸಾಧ್ಯವಾಗದ ಆಚರಣೆಗಳನ್ನು ಪುನರ್ನಿಮಿಸಿದ್ದಾರೆ. ಮದುವೆ ವಿಧಿ ವಿಧಾನಗಳು ಹಾಗೂ ಪ್ರತಿಜ್ಞೆಗಳನ್ನು ವಿನಿಮಯ ಮಾಡಿಕೊಳ್ಳುವುದು ಒಳಗೊಂಡಿದ್ದು, ಕಷ್ಟದ ಸಮಯದಲ್ಲಿ ಜೊತೆಗಿದ್ದು ಜೀವನ ನಡೆಸಿದ್ದ ಈ ದಂಪತಿಗಳ ಬದ್ಧತೆ ಹಾಗೂ ಪ್ರೀತಿಯೂ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ