Viral: ಯಮ ವೇಗದಲ್ಲಿ ಬಂದು ಪಾದಚಾರಿಗೆ ಗುದ್ದಿದ ಕಾರು, ಬೆಚ್ಚಿ ಬೀಳಿಸುವಂತಿದೆ ಈ ದೃಶ್ಯ
ವಾಹನಗಳನ್ನು ನಿಧಾನವಾಗಿ ಓಡಿಸಿ, ನಿಧಾನವೇ ಪ್ರಧಾನ ಎಂದು ಜಾಗೃತಿ ಮೂಡಿಸಿದರೂ ಕೆಲವೊಬ್ಬರು ಇದನ್ನೆಲ್ಲಾ ಕ್ಯಾರೇ ಅನ್ನದೆ ರಸ್ತೆಯಲ್ಲಿ ವಾಹನ ಚಲಾಯಿಸುತ್ತಾರೆ. ಕೆಲವೊಮ್ಮೆ ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಇದೀಗ ಅಂತಹದ್ದೇ ಭೀಕರ ಅಪಘಾತಕ್ಕೆ ಸಂಬಂಧಪಟ್ಟ ವಿಡಿಯೋವೊಂದು ವೈರಲ್ ಆಗಿದೆ. ಯಮವೇಗದಲ್ಲಿ ಬಂದಂತಹ ಕಾರೊಂದು ರಸ್ತೆ ದಾಟುತ್ತಿದ್ದ ಪಾದಚಾರಿಗೆ ಢಿಕ್ಕಿ ಹೊಡೆದಿದೆ. ಇದರ ಪರಿಣಾಮ ಪಾದಚಾರಿ ಮೇಲಕ್ಕೆ ಹಾರಿಗೆ ರಸ್ತೆಗೆ ಎಸೆಲ್ಪಟ್ಟಿದ್ದಾರೆ. ಈ ಭೀಕರ ಅಪಘಾತದ ದೃಶ್ಯವು ಬೆಚ್ಚಿ ಬೀಳಿಸಿದ್ದು ನೆಟ್ಟಿಗರು ಚಾಲಕನ ವಿರುದ್ಧ ಗರಂ ಆಗಿದ್ದಾರೆ.

ನಿಧಾನವೇ ಪ್ರಧಾನ, ಅತಿ ವೇಗದಲ್ಲಿ ವಾಹನ ಚಲಾಯಿಸಬೇಡಿ ಎಂದು ಹೇಳಿದರೂ ಕೂಡ ಅದನ್ನು ತಲೆಗೆ ಹಾಕಿಕೊಳ್ಳುವುದಿಲ್ಲ. ಕೆಲವರಂತೂ ಸಂಚಾರಿ ನಿಯಮ (trafic rules) ಗಳನ್ನು ಗಾಳಿಗೆ ತೂರುತ್ತಾರೆ. ಅತೀ ವೇಗದಿಂದ ವಾಹನ ಚಲಾಯಿಸಿದ ಪರಿಣಾಮವಾಗಿ ಭೀಕರ ರಸ್ತೆ ಅಪಘಾತ (road accident) ಗಳು ಸಂಭವಿಸುವ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಸೋಶಿಯಲ್ ಮೀಡಿಯಾ (social media) ದಲ್ಲಿ ಇಂತಹ ಭೀಕರ ಅಪಘಾತದ ದೃಶ್ಯವು ಬೆಚ್ಚಿ ಬೀಳಿಸುತ್ತದೆ. ಇದೀಗ ಅಂತಹದ್ದೇ ಅಪಘಾತವೊಂದರ ಆಘಾತಕಾರಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಯಮವೇಗದಲ್ಲಿ ಬಂದಂತಹ ಕಾರೊಂದು (car) ರಸ್ತೆ ದಾಟುತ್ತಿದ್ದ ಪಾದಚಾರಿಗೆ ಢಿಕ್ಕಿ ಹೊಡೆದಿದೆ. ಈ ಆಘಾತಕಾರಿ ದೃಶ್ಯದ ವಿಡಿಯೋವೊಂದು ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Drive smart IN ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ‘ನಾವು ಹಲವಾರು ವಿಷಯಗಳ ಬಗ್ಗೆ ದೂರು ನೀಡಬಹುದು. ಆದರೆ ತಮ್ಮ ಮುಂದೆ ಏನಿದೆ ಎಂದು ನೋಡಲು ಹೇಗೆ ವಿಫಲರಾಗುತ್ತಾರೆ ಎನ್ನುವುದು ಗಮನಿಸಿದ್ದೀರಾ. ಪಾದಚಾರಿ ಜೀಬ್ರಾ ಕ್ರಾಸಿಂಗ್ ಇತ್ಯಾದಿಗಳನ್ನು ಬಳಸುತ್ತಿಲ್ಲ ಎಂದು ನಾವು ಹೇಳುತ್ತೇವೆ. ಆದರೆ ನಮ್ಮ ಚಾಲಕರು ಜೀಬ್ರಾ ಕ್ರಾಸಿಂಗ್‌ನಲ್ಲಿ ಪಾದಚಾರಿಗಳಿಗೆ ದಾರಿ ಮಾಡಿಕೊಡುತ್ತಾರೆಯೇ? ಈ ಕೆಳಗಿನ ಕ್ಲಿಪ್ ಅನ್ನು ಸಹ ವೀಕ್ಷಿಸಿ’ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಈ ಘಟನೆಯು ಇದೇ ಮಾರ್ಚ್ 27 ರಂದು ನಡೆದ ಘಟನೆ ಇದು ಎನ್ನಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
We can complain about N number of things but how can someone fail to see what’s in front of him?
We can say that the pedestrian is not using zebra crossing etc but do our drivers give way to pedestrians at zebra crossing? Watch the clip below as well. 👇 pic.twitter.com/Dw5eR18lW4
— DriveSmart🛡️ (@DriveSmart_IN) March 28, 2025
ಈ ವಿಡಿಯೋದಲ್ಲಿ ಪಾದಚಾರಿಯೊಬ್ಬರು ಸ್ಕೂಟರ್ ನಿಂದ ಇಳಿದು ರಸ್ತೆ ದಾಟಲು ಮುಂದಾಗಿದ್ದಾರೆ. ಇಲ್ಲಿ ಅಷ್ಟೇನು ವಾಹನ ದಟ್ಟನೆ ಇಲ್ಲದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಆದರೆ ಇದೇ ವೇಳೆ ಯಮವೇಗದಲ್ಲಿ ಬಂದ ಕಾರು ಪಾದಚಾರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದು ಮುಂದಕ್ಕೆ ಎಳೆದುಕೊಂಡು ಹೋಗಿದ್ದು, ವ್ಯಕ್ತಿಯು ಕಾರಿನ ಮೇಲೆ ಹಾರಿ ರಸ್ತೆಗೆ ಬಿದ್ದಿದ್ದಾರೆ. ಈ ಅಪಘಾತ ಸಂಭವಿಸುತ್ತಿದ್ದಂತೆ ಅಲ್ಲೇ ಸ್ಥಳೀಯರು ಓಡೋಡಿ ಬಂದಿದ್ದಾರೆ.
ಇದನ್ನೂ ಓದಿ: ಬಿಸಿಲ ಶಾಖ ತಾಳಲಾದರೆ ಕಾರಿಗೆ ಸಗಣಿ ಮೆತ್ತಿದ್ದ ವೈದ್ಯ
ಈ ವಿಡಿಯೋವು ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಅತಿವೇಗದ ಚಾಲನೆಗೆ ಪಾದಚಾರಿ ಜೀವದ ಜೊತೆ ಆಟವಾಡಬೇಡಿ’ ಎಂದಿದ್ದಾರೆ. ಮತ್ತೊಬ್ಬರು, ‘ಹಿರಿ ಜೀವಗಳು ರಸ್ತೆ ದಾಟುವಾಗ ವಾಹನ ಚಾಲಕರು ಈ ಬಗ್ಗೆ ಗಮನ ಕೊಡಿ’ ಎಂದಿದ್ದಾರೆ. ಇನ್ನೊಬ್ಬರು, ‘ ಈ ದೃಶ್ಯವು ನಿಜಕ್ಕೂ ಭಯಾನಕವಾಗಿದೆ. ವಾಹನ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ