Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬಿಸಿಲ ಶಾಖದಿಂದ ಬಚಾವ್‌ ಆಗಲು ಐಷಾರಾಮಿ ಕಾರಿಗೆ ಸಗಣಿ ಲೇಪಿಸಿದ ಆಯುರ್ವೇದಿಕ್‌ ಡಾಕ್ಟರ್‌; ವಿಡಿಯೋ ವೈರಲ್‌

ಹಿಂದಿನ ಕಾಲದಲ್ಲಿ ಮನೆಗಳ ನೆಲಕ್ಕೆ ಹಸುವಿನ ಸಗಣಿ ಲೇಪಿಸುತ್ತಿದ್ದರು. ಜೊತೆಗೆ ಇಂದಿಗೂ ಅದೆಷ್ಟೋ ಮನೆಗಳಲ್ಲಿ ಅಂಗಳಕ್ಕೆ ಸಗಣಿ ಲೇಪಿಸುವವರಿದ್ದಾರೆ. ಆದ್ರೆ ಇಲ್ಲೊಬ್ರು ಆಯುರ್ವೇದಿಕ್‌ ಡಾಕ್ಟರ್‌ ಬಿಸಿಲ ಶಾಖದಿಂದ ಬಚಾವ್‌ ಆಗಲು ತಮ್ಮ ಐಷಾರಾಮಿ ಕಾರಿಗೆ ಸಗಣಿ ಲೇಪಿಸಿದ್ದಾರೆ. ಇದು ಕಾರನ್ನು ಸ್ವಾಭಾವಿಕವಾಗಿ ಕೂಲಾಗಿರಿಸುವುದು ಮಾತ್ರವಲ್ಲದೆ, ಇದರಿಂದ ವಾಹನಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Viral: ಬಿಸಿಲ ಶಾಖದಿಂದ ಬಚಾವ್‌ ಆಗಲು ಐಷಾರಾಮಿ ಕಾರಿಗೆ ಸಗಣಿ ಲೇಪಿಸಿದ ಆಯುರ್ವೇದಿಕ್‌ ಡಾಕ್ಟರ್‌; ವಿಡಿಯೋ ವೈರಲ್‌
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 28, 2025 | 5:50 PM

ಮಹಾರಾಷ್ಟ್ರ, ಮಾ. 28: ಈಗಂತೂ ಬಿಸಿಲ ಅಬ್ಬರ ಎಲ್ಲೆಡೆ ಜೋರಾಗಿದೆ. ಈ ವರ್ಷದಲ್ಲಿ ಬೇಸಿಗೆ ಕಾಲದ (Summer) ಆರಂಭದಲ್ಲಿಯೇ ಸೂರ್ಯನ (sun) ಶಾಖ (heat) ಹೆಚ್ಚಾಗಿದ್ದು, ಸೆಖೆ ತಾಳಲಾದರೆ ಜನ ಪರದಾಡುತ್ತಿದ್ದಾರೆ. ಮನೆಯಲ್ಲಿ ಬಿಡಿ ವಾಹನದಲ್ಲಿ ಎಸಿ (AC) ಹಾಕಿ ಕೂತರೂ ಶಾಖ ಮಾತ್ರ ಕಮ್ಮಿಯಾಗಲ್ಲ ಬಿಸಿಲ ಹೊಡೆತ ಹಾಗಿದೆ ಎಂದು ಹಲವರು ಹೇಳುತ್ತಿದ್ದಾರೆ. ಹೀಗಿರುವಾಗ ಇಲ್ಲೊಬ್ರು ಆಯುರ್ವೇದಿಕ್‌ ವೈದ್ಯ (Ayurvedic Doctor) ಬಿಸಿಲ ಶಾಖದಿಂದ ಪಾರಾಗಲು ವಿನೂತನ ಉಪಾಯವನ್ನು ಕಂಡುಕೊಂಡಿದ್ದಾರೆ. ಹೌದು ವಾಹನದಲ್ಲಿ ಓಡಾಡುವಾಗ ಎಸಿ ಇದ್ರೂ ಕೂಡಾ ಸೆಖೆ ಮಾತ್ರ ಕಮ್ಮಿಯಾಗಲ್ಲ ಎಂದು ಅವರು ತಮ್ಮ ಕಾರಿಗೆ (Car) ಹಸುವಿನ ಸಗಣಿ (Cow dung) ಲೇಪಿಸಿದ್ದಾರೆ. ಇದು ಕಾರನ್ನು ಸ್ವಾಭಾವಿಕವಾಗಿ ಕೂಲಾಗಿರಿಸುವುದು ಮಾತ್ರವಲ್ಲದೆ, ಇದರಿಂದ ವಾಹನಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಮಹಾರಾಷ್ಟ್ರದ ಪಂಢಪುರದ ಆಯುರ್ವೇದಿಕ್‌ ವೈದ್ಯ ಡಾ. ರಾಮ್‌ ಹರಿ ಕದಮ್‌ ಎಂಬವರು ಈ ಸುಡು ಬೇಸಿಗೆಯಲ್ಲಿ ಕಾರನ್ನು ಕೂಲಾಗಿಡಲು ತಮ್ಮ ಐಷಾರಾಮಿ ಮಹೀಂದ್ರಾ XUV 300 ಕಾರಿಗೆ ಸಗಣಿ ಲೇಪಿಸಿದ್ದಾರೆ. ಸಗಣಿಗೆ ಗೋಮೂತ್ರವನ್ನು ಮಿಶ್ರಣ ಮಾಡಿ ಪೇಸ್ಟ್‌ ತಯಾರಿಸಿ ಅದನ್ನು ಕಾರಿಗೆ ಹಚ್ಚಿದ್ದಾರೆ. ಇದರಿಂದ ಅರ್ಧದಷ್ಟು ತಾಪಮಾನ ಕಡಿಮೆಯಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಹಸುವಿನ ಸಗಣಿ ವಿಕಿರಣವನ್ನು ವಿರೋಧಿ ಗುಣವನ್ನು ಹೊಂದಿದೆ, ಇದರಿಂದಾಗಿ ಕಾರಿನ ಬಣ್ಣ ಕೂಡಾ ಮಸುಕಾಗುವುದಿಲ್ಲ ಹಾಗೆಯೇ ಶಾಖ-ಸಂಬಂಧಿತ ಸಮಸ್ಯೆಗಳಿಂದ ವಾಹನವನ್ನು ರಕ್ಷಿಸುತ್ತದೆ. ಮತ್ತು ಇತರ ವಾಹನಗಳಿಗೆ ಹೋಲಿಸಿದರೆ ಸಗಣಿ ಬಳಿದ ಕಾರಿನ ಒಳಗಿನ ತಾಪಮಾನವು 50% ನಷ್ಟು ತಂಪಾಗಿರುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ
Image
ಹಿರಿ ಜೀವಗಳಿಗೆ  ಮರುಮದುವೆ ಮಾಡಿಸಿದ ಮೊಮ್ಮಕ್ಕಳು
Image
ರಾತ್ರಿಯ ರೊಮ್ಯಾ‌ನ್ಸ್ ವಿಡಿಯೋ ಶೇರ್‌ ಮಾಡಿದ ನವಜೋಡಿ
Image
ಕೋಪದಲ್ಲಿ ಗಂಡನ ನಾಲಿಗೆ ಕಚ್ಚಿ ತುಂಡರಿಸಿದ ಹೆಂಡತಿ
Image
ಯಾವ ಲಾಭದಾಯಕ ಉದ್ದಿಮೆಗೂ ಕಮ್ಮಿಯಿಲ್ಲ ಈ ಚೇಳು ಸಾಕಾಣಿಕೆ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಕಾರು ಮಾತ್ರವಲ್ಲದೆ ಡಾ. ಕದಮ್‌ ತಮ್ಮ ಮನೆಯ ಸಿಮೆಂಟ್‌ ಗೋಡೆಗಳಿಗೂ ಸಗಣಿ ಲೇಪಿಸಿದ್ದಾರೆ. ಇದು ಮನೆಯೊಳಗಿನ ಸುಡು ತಾಪಮಾನವನ್ನು 50% ರಷ್ಟು ಕಡಿಮೆ ಮಾಡುವುದಲ್ಲದೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಹಸುವಿನ ಸಗಣಿ ಲೇಪಿತ ಗೋಡೆಗಳನ್ನು ಹೊಂದಿರುವ ಕೋಣೆಗಳು ಶಾಂತಿಯುತವಾಗಿ ನೆಮ್ಮದಿಯಿಂದ ನಿದ್ದೆ ಮಾಡಲು ಸಹಕಾರಿ ಎಂದು ಡಾ. ಕದಮ್‌ ಅವರ ಪತ್ನಿ ತಿಳಿಸಿದ್ದಾರೆ.

ಈ ಕುರಿತ ವಿಡಿಯೋವನ್ನು ರಾಹುಲ್‌ ಕುಲಕರ್ಣಿ ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಐಷಾರಾಮಿಗೆ ಕಾರಿಗೆ ಸಂಪೂರ್ಣವಾಗಿ ಹಸುವಿನ ಸಗಣಿ ಲೇಪಿಸಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಲೈವ್‌ ರಿಪೋರ್ಟಿಂಗ್‌ ಮಾಡ್ತಿದ್ದ ವರದಿಗಾರನ ಶರ್ಟ್‌ ಕಾಲರ್‌ ಸರಿ ಮಾಡಿದ ವ್ಯಕ್ತಿ; ವಿಡಿಯೋ ವೈರಲ್‌

ಮಾರ್ಚ್‌ 28 ರಂದು ಶೇರ್‌ ಮಾಡಲಾದ ಈ ವಿಡಿಯೋ 15 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹ ಪ್ರಯೋಗಕ್ಕೆ ಕೈ ಹಾಕಿದ ವೈದ್ಯರಿಗೆ ಧನ್ಯವಾದʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದೆಲ್ಲಾ ಲೈಕ್ಸ್‌ ವೀವ್ಸ್‌ಗಾಗಿ ಮಾಡಿದ ಗಿಮಿಕ್‌ʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಜಕ್ಕೂ ಇದೆಲ್ಲಾ ವರ್ಕ್‌ ಆಗುತ್ತಾʼ ಎಂದು ಕೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ