AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವಾಗ ಟಿಪ್ಸ್ ನೀಡಿದ್ರೆ ಮಾತ್ರ ಬುಕಿಂಗ್ ಕನ್ಫರ್ಮ್

ಓಲಾ, ಉಬರ್ ಸೇರಿದಂತೆ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಯಲ್ಲಿ ಆಟೋರಿಕ್ಷಾಗಳ ಸೇವೆಯನ್ನು ಬಳಸುವ ಪ್ರಯಾಣಿಕರು ಹತಾಶೆ ವ್ಯಕ್ತಪಡಿಸಿದ್ದಾರೆ. ಹೌದು, ಬೆಂಗಳೂರಿನಲ್ಲಿ ಅಪ್ಲಿಕೇಶನ್ ಮೂಲಕ ಆಟೋ ಬುಕ್ ಮಾಡುವಾಗ ಟಿಪ್ ಸೇರಿಸಿದರೆ ಮಾತ್ರ ಆಟೋ ಚಾಲಕರು ಬುಕಿಂಗ್ ಸ್ವೀಕರಿಸುತ್ತಾರಂತೆ. ಪ್ರಯಾಣಿಕರಿಂದ ಟಿಪ್ಸ್ ಹೆಸರಿನಲ್ಲಿ ಹೆಚ್ಚುವರಿ ನಿಗದಿತ ಚಾರ್ಜ್ ಗಿಂತ ಹೆಚ್ಚುವರಿ ಹಣವನ್ನು ಸುಲಿಗೆ ಮಾಡುತ್ತಿದ್ದು, ತಮಗಾದ ಅನುಭವವನ್ನು ಸ್ವತಃ ಪ್ರಯಾಣಿಕರು ಹಂಚಿಕೊಂಡಿದ್ದಾರೆ, ಈ ಕುರಿತಾದ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವಾಗ ಟಿಪ್ಸ್ ನೀಡಿದ್ರೆ ಮಾತ್ರ ಬುಕಿಂಗ್ ಕನ್ಫರ್ಮ್
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on:Mar 31, 2025 | 11:05 AM

Share

ಈಗೇನಿದ್ದರೂ ಎಲ್ಲವೂ ಡಿಜಿಟಲ್ (digital) ಆಗಿದೆ. ಹೀಗಾಗಿ ದೊಡ್ಡ ದೊಡ್ಡ ನಗರಗಳಲ್ಲಿ ಆಟೋ, ಟ್ಯಾಕ್ಸಿ ಬುಕ್ ಮಾಡಲು ಆ್ಯಪ್ (apps) ಗಳನ್ನು ಅವಲಂಬಿಸಿದವರೇ ಹೆಚ್ಚು. ಆದರೆ ಮಾಯಾನಗರಿ ಬೆಂಗಳೂರಿನಲ್ಲಿ (banglore)  ಆ್ಯಪ್ ಮೂಲಕ ಆಟೋರಿಕ್ಷಾಗಳನ್ನು ಬುಕ್ ಮಾಡುವ ಪ್ರಯಾಣಿಕರಿಂದ ಆಟೋ ಚಾಲಕರು ಟಿಪ್ (tip) ಸೇರಿಸಿ ಹೆಚ್ಚುವರಿ ಹಣವನ್ನು ಚಾರ್ಜ್ ಮಾಡುತ್ತಿದ್ದಾರೆ. ಅದಲ್ಲದೇ ಆಟೋ ಬುಕ್ ಮಾಡುವಾಗ ಟಿಪ್ ಸೇರಿಸಿದರೆ ಮಾತ್ರ ಆಟೋ ಬುಕಿಂಗ್ ಸ್ವೀಕರಿಸಲಾಗುತ್ತದೆ. ಇನ್ನು ಕೆಲ ಚಾಲಕರು ಡ್ರಾಪ್ ಪಾಯಿಂಟ್‌ (drop point) ಗಳಲ್ಲಿ ಹೆಚ್ಚುವರಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಪ್ರಯಾಣಕರಾದ ನಿಹಾರಿಕಾ ತಮಗಾದ ಅನುಭವದ ಬಗ್ಗೆ ಹೇಳಿಕೊಂಡಿದ್ದು, ‘ನಾನು ರೆಸಿಡೆನ್ಸಿ ರಸ್ತೆಯಿಂದ ಬೆಳ್ಳಂದೂರಿಗೆ ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸಿದಾಗ, ಆ್ಯಪ್‌ನಲ್ಲಿ 296 ರೂ. ದರವಿತ್ತು. ನಾನು ಟಿಪ್ ಇಲ್ಲದೆ ಬುಕಿಂಗ್ ಮಾಡಲು ಪ್ರಯತ್ನಿಸಿದೆ, ಆದರೆ ಹಲವು ಬಾರಿ ಪ್ರಯತ್ನಿಸಿದರೂ ಆಟೋ ಸಿಗಲಿಲ್ಲ. ನಾನು 50 ರೂ. ಟಿಪ್ ನೀಡಲು ಒಪ್ಪಿಕೊಂಡ ನಂತರವೇ ಆಟೋ ಚಾಲಕ ಬುಕಿಂಗ್ ಸ್ವೀಕರಿಸಿದನು. ಈ ರಿತು ಪ್ರತಿ ಸಲ ಕೂಡ ಆಗುತ್ತಿದೆ ಎಂದಿದ್ದಾರೆ.

ಮತ್ತೊಬ್ಬ ಪ್ರಯಾಣಿಕರಾದ ಸುಶ್ಮಿತಾ ಹರೀಶ್, ರಾಮಮೂರ್ತಿ ನಗರದಲ್ಲಿರುವ ತನ್ನ ಮನೆಯಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಹಿಂಭಾಗದ ಗೇಟ್‌ಗೆ ಆಟೋ ಪ್ರಯಾಣ ದರ 75 ರೂ ಆಗಿದೆ. ನಾನು ಹೆಚ್ಚಾಗಿ ಬಳಸುವ ಮೊಬೈಲ್ ಅಪ್ಲಿಕೇಶನ್ ಪ್ರತಿ ಬಾರಿಯೂ ಈ ಸ್ಥಳಕ್ಕೆ 90-100 ರೂ. ವಿಧಿಸುತ್ತದೆ. ಕಳೆದ ಒಂದು ವಾರದಿಂದ ಈ ದರದಲ್ಲಿ ಸಾಕಷ್ಟು ಹೆಚ್ಚಳವನ್ನು ಗಮನಿಸಿದ್ದೇನೆ. ಇದೀಗ ಈ ದರವು 110-120 ರೂ. ವಿಧಿಸುತ್ತದೆ. ಒಂದೂವರೆ ಅಥವಾ ಎರಡು ಪಟ್ಟು ಶುಲ್ಕ ವಿಧಿಸಿದರೆ, ನನಗೆ ಅಪ್ಲಿಕೇಶನ್‌ನ ಸಹಾಯ ಏಕೆ ಬೇಕು? ನಾನು ಆಟೋ ಚಾಲಕನೊಂದಿಗೆ ಚೌಕಾಶಿ ಮಾಡಬಹುದು.

ಇದನ್ನೂ ಓದಿ
Image
ಹಿರಿ ಜೀವಗಳಿಗೆ  ಮರುಮದುವೆ ಮಾಡಿಸಿದ ಮೊಮ್ಮಕ್ಕಳು
Image
ರಾತ್ರಿಯ ರೊಮ್ಯಾ‌ನ್ಸ್ ವಿಡಿಯೋ ಶೇರ್‌ ಮಾಡಿದ ನವಜೋಡಿ
Image
ಕೋಪದಲ್ಲಿ ಗಂಡನ ನಾಲಿಗೆ ಕಚ್ಚಿ ತುಂಡರಿಸಿದ ಹೆಂಡತಿ
Image
ಯಾವ ಲಾಭದಾಯಕ ಉದ್ದಿಮೆಗೂ ಕಮ್ಮಿಯಿಲ್ಲ ಈ ಚೇಳು ಸಾಕಾಣಿಕೆ

ಈ ಅಪ್ಲಿಕೇಶನ್‌ಗಳು ಒಂದು ಕಾಲದಲ್ಲಿ ನಮಗೆ ರಕ್ಷಕರಾಗಿದ್ದವು. ಆದರೆ ಇದೀಗ ಆಟೋ ಚಾಲಕರು ಸುಲಿಗೆಕೋರರಾಗಿದ್ದಾರೆ. ಈ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಟ್ಯಾಕ್ಸಿಗಳನ್ನು ಬುಕ್ ಮಾಡುವುದು ಸಹ ದುಬಾರಿಯಾಗುತ್ತಿದೆ. ಬೈಕ್, ಟ್ಯಾಕ್ಸಿಗಳು ಚಾಲಕರು ಕೂಡ, 10 ರಿಂದ 40 ರೂ.ಗಳವರೆಗಿನ ಟಿಪ್ ನೀಡಲು ಒಪ್ಪಿಕೊಂಡ ನಂತರವೇ ಬುಕಿಂಗ್ ಅನ್ನು ಸ್ವೀಕರಿಸುವ ಹಲವಾರು ನಿದರ್ಶನಗಳಿವೆ” ಎಂದು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಸಾರಿಗೆ ಆಯುಕ್ತ ಯೋಗೇಶ್ ಎ.ಎಂ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಮೊಬೈಲ್ ಅಪ್ಲಿಕೇಶನ್ ಬಳಸಿ ಆಟೋ ಬುಕ್ ಮಾಡುವಾಗ ಚಾಲಕರಿಗೆ ಟಿಪ್ಸ್ ನೀಡುವಲ್ಲಿ ಸಾರಿಗೆ ಇಲಾಖೆಯ ಯಾವುದೇ ಪಾತ್ರವಿಲ್ಲ. ಮೊಬೈಲ್ ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್‌ಗಳ ನಿಯಮಗಳ ಅಡಿಯಲ್ಲಿ ಆಟೋಗಳನ್ನು ತರುವ ಬಗ್ಗೆ ಇಲಾಖೆ ಚಿಂತನೆ ನಡೆಸುತ್ತಿದೆ’ ಎಂದು ತಿಳಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:04 am, Mon, 31 March 25

ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ