ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ
ಒಬ್ಬ ವ್ಯಕ್ತಿ ಇಬ್ಬರು ಮಹಿಳೆಯರನ್ನು ಒಂದೇ ಸಮಯದಲ್ಲಿ , ಒಂದೇ ಮಂಟಪದಲ್ಲಿ ಮದುವೆಯಾಗಿದ್ದಾನೆ. ಇದೀಗ ಈ ಬಗ್ಗೆ ವಿಡಿಯೋವೊಂದು ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದು ಭಾರತದ ಹಿಂದೂ ಕಾಯ್ದೆ ಪ್ರಕಾರ ತಪ್ಪು ಆಗಿದ್ದರು. ಒಬ್ಬ ವ್ಯಕ್ತಿ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದಾನೆ. ಈ ಘಟನೆ ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಇದರ ವಿಡಿಯೋ ಇಲ್ಲಿದೆ ನೋಡಿ .

ತೆಲಂಗಾಣ , ಮಾ.31: ಭಾರತದಲ್ಲಿ ಬಹುಪತ್ನಿತ್ವ ಕಾನೂನು ಬಾಹಿರ, ಕಾನೂನು ಪ್ರಕಾರ ಹಿಂದೂ ಧರ್ಮದ ಕಾನೂನಿನ ಪ್ರಕಾರ ಮತ್ತೊಂದು ಮದುವೆ ಆಗಬೇಕಾದರೆ ಮೊದಲು ಪತ್ನಿ ಅಥವಾ ಪತಿ ಕಾನೂನು ಪ್ರಕಾರ ವಿಚ್ಛೇದನ ನೀಡಿ ಇನ್ನೊಂದು ಮದುವೆ ಆಗಬೇಕು. ಆದರೆ ಇಲ್ಲೊಂದು ಕಾನೂನಿಗೆ ವಿರುದ್ಧವಾಗಿಯೊಂದು ಮದುವೆಯಾಗಿದೆ. ತೆಲಂಗಾಣದ (Telangana) ಕೊಮರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ಘಟನೆ ನಡೆದಿದೆ. ಲಿಂಗಾಪುರ ಮಂಡಲದ ಗುಮ್ನೂರ್ ಗ್ರಾಮದ ನಿವಾಸಿ ಸೂರ್ಯದೇವ್, ಲಾಲ್ ದೇವಿ ಮತ್ತು ಝಲ್ಕರಿ ದೇವಿಯನ್ನು ಪ್ರೀತಿಸುತ್ತಿದ್ದು, ಒಂದೇ ಸಮಾರಂಭದಲ್ಲಿ ಅವರನ್ನು ಮದುವೆಯಾಗಲು ನಿರ್ಧರಿಸಿದ್ದೇನೆ ಎಂದು ಹೇಳಲಾಗಿದೆ.
ಇನ್ನು ಈ ವರ ಒಂದೇ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಎರಡೂ ವಧುಗಳ ಹೆಸರನ್ನು ಮುದ್ರಿಸಿ ಅದ್ಧೂರಿಯಾಗಿ ಮದುವೆಯಾಗಿದ್ದಾನೆ. ಈ ವಿವಾಹ ವಿಡಿಯೋದಲ್ಲಿ ನೀವು ಗಮನಿಸಬಹುದು, ಇಬ್ಬರು ಮಹಿಳೆಯರು ಆತನ ಕೈ ಹಿಡಿದು ಕುಳಿತಿರುವುದನ್ನು ಕಾಣಬಹುದು. ಮೂವರು ಕುಟುಂಬಗಳು, ಸಂಬಂಧಿಕರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಸೂರ್ಯದೇವ್ ಲಾಲ್ ದೇವಿ ಮತ್ತು ಝಲ್ಕರಿ ದೇವಿಯನ್ನು ಪ್ರೀತಿಸಿದ ನಂತರ, ಮೂವರು ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದಾರೆ. ಗ್ರಾಮದ ಹಿರಿಯರು ಆರಂಭದಲ್ಲಿ ಈ ಮದುವೆಯನ್ನು ವಿರೋಧಿಸಿದರು. ಆದರೆ ಕೊನೆಗೆ ಅವರ ಆಸೆಗೆ ಒಪ್ಪಿಗೆ ನೀಡಿದ್ದಾರೆ.
ಇದನ್ನೂ ಓದಿ: ಎಣ್ಣೆ ಏಟಲ್ಲಿ ನಡು ರಸ್ತೆಯಲ್ಲಿ ತೂರಾಡಿದ ಕಾಲೇಜು ಪ್ರಾಧ್ಯಾಪಕ; ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ఒకే మండపంలో ఇద్దరు అమ్మాయిలను పెళ్లి చేసుకున్న యువకుడు
ఆహ్వాన పత్రికల్లో సైతం ఇద్దరు యువతుల పేర్లు ముద్రించి, ఘనంగా వివాహం చేసుకున్న యువకుడు
కొమరం భీమ్ ఆసిఫాబాద్ జిల్లా లింగాపూర్ మండలం గుమ్నూర్ గ్రామంలో లాల్ దేవి, జల్కర్ దేవి అనే ఇద్దరు అమ్మాయిలను ప్రేమించి పెళ్లి చేసుకున్న… pic.twitter.com/Tbre507zTB
— Telugu Scribe (@TeluguScribe) March 28, 2025
ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. 2021 ರಲ್ಲಿ, ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಮತ್ತೊಬ್ಬ ವ್ಯಕ್ತಿ ಒಂದೇ ‘ಮಂಟಪ’ದಲ್ಲಿ ಇಬ್ಬರು ಮಹಿಳೆಯರನ್ನು ವಿವಾಹವಾಗಿದ್ದರು. ಉಟ್ನೂರ್ ಮಂಡಲದಲ್ಲಿ ಈ ಸಮಾರಂಭವು ಮೂರು ಕುಟುಂಬಗಳ ಒಪ್ಪಿಗೆಯೊಂದಿಗೆ ಈ ಮದುವೆ ನಡೆದಿದೆ. 2022 ರಲ್ಲಿ, ಜಾರ್ಖಂಡ್‌ನ ಲೋಹರ್ದಗಾದಲ್ಲಿ ಒಬ್ಬ ವ್ಯಕ್ತಿ ತನ್ನ ಇಬ್ಬರೂ ಗೆಳತಿಯರನ್ನು ಮದುವೆಯಾಗಿರುವ ಘಟನೆ ಕೂಡ ನಡೆದಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:24 am, Mon, 31 March 25