ಐಸ್ ಕ್ರೀಂ ಪ್ರಿಯರೇ ಎಚ್ಚರ..ಎಚ್ಚರ: ಸಿಕ್ಕಾಪಟೆ ಬಿಸಿಲೆಂದು ಬಾಯಿ ಚಪ್ಪರಿಸಿವ ಮುನ್ನ ಹುಷಾರ್..!
ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರಿಗೆ ಐಸ್ ಕ್ರೀಂ ಫೆವರೇಟ್ . ಬೇಸಿಗೆ ಶುರುವಾದ್ರೆ ಎಲ್ಲರೂ ಐಸ್ ಕ್ರೀಂ ಮೊರೆ ಹೋಗುತ್ತಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಈ ಐಸ್ ಕ್ರೀಂ ಬಗ್ಗೆಯೂ ಸಾಕಷ್ಟು ದೂರು ಕೇಳಿ ಬಂದಿದ್ದು, ಈ ಬಗ್ಗೆ ಆರೋಗ್ಯ ಇಲಾಖೆಯು ರಾಜಧಾನಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಐಸ್ ಕ್ರೀಂ ಸ್ಯಾಂಪಲ್ಸ್ ಪಡೆಯಲು ಮುಂದಾಗಿದೆ. hಈಗಾಗಿ ಬೇಸಿಗೆ ಟೈಮ್ ನಲ್ಲಿ ಬಾಯಾರಿಕೆ ಎಂದು ಬಾಯಿ ಚಪ್ಪರಿಸಿ ಕೂಲ್ ಕೂಲ್ ಐಸ್ ಕ್ರೀಂ ತಿನ್ನುವ ಮುನ್ನ ಒಂದಲ್ಲ ಎರಡು ಬಾರಿ ಯೋಚಿಸುವುದು ಬೆಸ್ಟ್ ಎನ್ನುವಂತಾಗಿದೆ.

ಬೆಂಗಳೂರು, (ಮಾರ್ಚ್ 27): ಗೋಬಿಗೆ ಕಲರ್ ಮಿಕ್ಸಿಂಗ್.. ಇಡ್ಲಿಗೆ ಪ್ಲಾಸ್ಟಿಕ್ ಕವರ್ ಡೇಂಜರ್.. ಕಬಾಬ್‌ಗೆ ಬಣ್ಣ ಹಾಕಿದ್ರೆ ಹುಷಾರ್. ಇದೀಗ ಇದೇ ಲಿಸ್ಟ್‌ಗೆ ಮತ್ತಷ್ಟು ಆಹಾರ ಪದಾರ್ಥ ಸೇರಿಕೊಂಡಿದ್ದು, ನಿನ್ನೆಯಷ್ಟೇ ಪನ್ನೀರ್ ಕೂಡ ಡೇಂಜರ್ ಎನ್ನುವುದು ಲ್ಯಾಬ್ ರಿಪೋರ್ಟ್ನಲ್ಲಿ ಬಯಲಾಗಿದೆ. ಇದೀಗ ಬಳಿಕ ಈಗ ಐಸ್ ಕ್ರೀಂ( Ice cream) ಸರದಿ. ಹೀಗಾಗಿ ಎಲ್ಲರ ಫೆವರೇಟ್ ಐಸ್ ಕ್ರೀಂ ಕೂಡಾ ಸೇಫ್ ಅಲ್ವಾ ಎನ್ನುವ ಅನುಮಾನ ಶುರುವಾಗಿದೆ. ಹೌದು.. ಐಸ್ ಕ್ರೀಂ ತಯಾರಿಸುವ ಘಟಕಗಳಲ್ಲಿ ಶ್ವಚ್ಛತೆ ಇರುವುದಿಲ್ಲ. ಇದರಿಂದ ಕಲುಷಿತ ಪದಾರ್ಥ ಐಸ್ ಕ್ರೀಂಗಳ ಜೊತೆ ದೇಹಸೇರಿ ಅನಾರೋಗ್ಯಕ್ಕೆ ಕಾರಣವಾದರೆ ಮತ್ತೊಂದಡೆ ಐಸ್ ಕ್ರೀಂಗಳ ತಯಾರಿಸಲು ಇತ್ತೀಚೆಗೆ ಕೃತಕ ಕಲರ್ ಹಾಗೂ ಕೃತಕ ಸಿಹಿಕಾರಕಗಳನ್ನ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಆಹಾರ ಇಲಾಖೆ ಐಸ್ ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ಮಾಡಿ ಸ್ಯಾಂಪಲ್ಸ್ ಸಂಗ್ರಹಿಸುತ್ತಿದೆ.
ಈ ಕೃತಕ ಸಿಹಿಕಾರಕದಲ್ಲಿ ಆಸ್ಪರ್ಟೇಮ್, ಅಸೆಸಲ್ಫೇಮ್ ಪೊಟ್ಯಾಸಿಯಮ್ ನಿಂದ ಸಿದ್ಧವಾದ ಐಸ್ ಕ್ರೀಂಗಳನ್ನ ಅತಿಯಾಗಿ ಸೇವನೆಯಿಂದ ಬೊಜ್ಜು , ಕ್ಯಾನ್ಸರ್ ಸೇರಿದ್ದಂತೆ ಅನೇಕ ಕಾಯಿಲೆಗಳು ಬರುತ್ತಿವೆ. ಹೀಗಾಗಿ ಆಹಾರ ಇಲಾಖೆ ರಾಜ್ಯದ ವಿವಿಧ ಭಾಗಗಳಲ್ಲಿನ ಐಸ್ ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ಮಾಡಿದ್ದು, ಈ ವೇಳೆ ಶ್ವಚ್ಛತೆ ತಯಾರಿಕೆಗಳ ಬಗ್ಗೆ ಪರಶೀಲನೆ ನಡೆಸುತ್ತಿದೆ. ಅಲ್ಲದೆ ಐಸ್ ಕ್ರೀಂಗಳ ಸ್ಯಾಂಪಲ್ಸ್ ಗಳನ್ ಸಂಗ್ರಹಿಸಲು ಮುಂದಾಗಿದೆ.
ಇದನ್ನೂ ಓದಿ: ಪನ್ನೀರ್ ಪ್ರಿಯರಿಗೆ ಶಾಕಿಂಗ್ ಸುದ್ದಿ: ಆಹಾರ ಇಲಾಖೆ ಪರೀಕ್ಷೆ ವೇಳೆ ಬ್ಯಾಕ್ಟೀರಿಯಾ ಅಂಶ ಪತ್ತೆ
ಬೇಸಿಗೆ ಸಮಯದಲ್ಲಿ ಐಸ್ ಕ್ರೀಂಗಳಿಗೆ ಹೆಚ್ಚು ಬೇಡಿಕೆ ಇರುವುದಿರಂದ ಕೃತಕ ಕಲರ್ ಹಾಗೂ ಟೆಸ್ಟಿಂಗ್ ಪೌಡರ್ ಗಳ ಬಳಕೆ ಮಾಡಲಾಗುತ್ತಿದೆ. ಹಾಗೂ ಐಸ್ ಕ್ರೀಂ ತಯಾರಿಕಾ ಘಟಕಗಳಲ್ಲಿ ಶ್ವಚ್ಛತೆ ಇರುವುದಿಲ್ಲ. ಹೀಗಾಗಿ FSSAI ದಾಳಿ ನಡೆಸಿ ಐಸ್ ಕ್ರೀಂಗಳ ಸ್ಯಾಂಪಲ್ಸ್ ಪಡೆಯುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮಾಡಲು ಮುಂದಾಗಿದ್ದು, ಸ್ಯಾಂಪಲ್ ಕಲೆಕ್ಟ್ ಮಾಡಿ ಲ್ಯಾಬ್ ಗೆ ಕಳಸಲು ಆಹಾರ ಇಲಾಖೆ ಮುಂದಾಗಿದೆ.
ಬೇಸಿಗೆಯಲ್ಲಿ ಐಸ್ ಕ್ರೀಂ, ತಂಪು ಪಾನೀಯಗಳಿಗೆ ಹೆಚ್ಚು ಜನರು ಹಾಗೂ ಮಕ್ಕಳು ಮುಗಿಬೀಳುವುದು ಹೆಚ್ಚು. ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಅಧಿಕಾರಿಗಳು ಐಸ್ ಕ್ರೀಂ, ಕೂಲ್ ಡ್ರಿಂಕ್ಸ್ ಘಟಕಗಳ ಮೇಲೆ ಎಫ್ಎಸ್ಎಸ್ಎಐ ದಾಳಿ ಮಾಡಿ ಸ್ಯಾಂಪಲ್ ಕಲೆಕ್ಟ್ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಮುಂದಿನ ವಾರ ಈ ಐಸ್ ಕ್ರೀಂ ಸ್ಯಾಂಪಲ್ಸ್ ವರದಿ ಬರಲಿದ್ದು, ಅದರ ಆಧಾರದ ಮೇಲೆ ಕ್ರಮಕ್ಕೆ ಆಹಾರ ಇಲಾಖೆ ಮುಂದಾಗಿದೆ. ಇನ್ನು ಆಹಾರ ತಜ್ಞರು ಕೂಡಾ ಐಸ್ ಕ್ರೀಂಗಳನ್ನ ಬಾಯಿಚಪ್ಪರಿಸಿ ತಿನ್ನುವ ಮುಂಚೆ ಯೋಚಿಸುವುದು ಒಳ್ಳೆಯದು ಎಂದು ಹೇಳಿದ್ದಾರೆ. ಇನ್ನು ಐಸ್ ಕ್ರೀಂ ಗಳಿಗೂ ಕೆಮಿಕಲ್ ಮಿಕ್ಸ್ ಮಾಡುತ್ತಿರುವ ವಿಚಾರ ಕೇಳಿ ಗ್ರಾಹಕರಲ್ಲೂ ಗೊಂದಲ ಉಂಟಾಗಿದೆ. ಈ ಬಗ್ಗೆ ಗ್ರಾಹಕರು ಮನೆಯಲ್ಲಿಯೇ ಐಸ್ ಕ್ರೀಂ ಮಾಡುವುದು ಬೆಸ್ಟ್ ಅಂತಾರೆ
ಒಟ್ಟಿನಲ್ಲಿ ಜನರು ಬೇಸಿಗೆಯಲ್ಲಿ ಎಜಾಂಯ್ ಮಾಡಿಕೊಂಡು ತಿನುತ್ತಿದ್ದ ಐಸ್ ಕ್ರೀಂ ಹಾಗೂ ಇತರೆ ಆಹಾರಗಳೇ ಸೇಫ್ ಅಲ್ಲ ಎಂದು ವರದಿ ಬರುತ್ತಿದ್ದು, ತಮ್ಮ ಸ್ವಾರ್ಥಕ್ಕಾಗಿ ಜನರ ಆರೋಗ್ಯದ ಮೇಲೆ ಚೆಲ್ಲಾಟವಾಡುತ್ತಿರುವವರ ಮೇಲೆ ಅಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕು ಎನ್ನುವ ಕೂಗು ಜೋರಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:04 pm, Thu, 27 March 25