Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾವಿನ ಹಣ್ಣಲ್ಲ, ಹೂವುಗಳನ್ನು ಎಂದಾದರೂ ಸೇವನೆ ಮಾಡಿದ್ದೀರಾ? ಇದರಿಂದ ಸಿಗುವ ಉಪಯೋಗವೇನು ತಿಳಿದುಕೊಳ್ಳಿ

ಮಾವಿನ ಹಣ್ಣುಗಳು ಮಾತ್ರವಲ್ಲ ಆ ಮರದಲ್ಲಿಯೇ ಅನೇಕ ರೀತಿಯ ಔಷಧೀಯ ಗುಣಗಳಿವೆ ಎಂದು ಹೇಳಲಾಗುತ್ತದೆ. ಹಣ್ಣಿನ ಹೊರತಾಗಿ, ಇದರ ಎಲೆಗಳು, ತೊಗಟೆ ಮತ್ತು ಮಾವಿನ ಹೂವು ಸಹ ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆ ಇದೆ. ಹಾಗಾಗಿಯೇ ಇವುಗಳನ್ನು ಅನೇಕ ರೀತಿಯ ಔಷಧಿಗಳಲ್ಲಿ ಈಗಲೂ ಬಳಕೆ ಮಾಡಲಾಗುತ್ತಿದೆ. ಅದರಲ್ಲಿ ಮಾವಿನ ಹೂವುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಈ ಹೂವುಗಳನ್ನು ಅನೇಕ ರೀತಿಯ ಮದ್ದಿಗೆ ಬಳಸಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಈ ಹೂವುಗಳು ಯಾವ ರೀತಿಯ ಸಮಸ್ಯೆಗಳಿಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

ಮಾವಿನ ಹಣ್ಣಲ್ಲ, ಹೂವುಗಳನ್ನು ಎಂದಾದರೂ ಸೇವನೆ ಮಾಡಿದ್ದೀರಾ? ಇದರಿಂದ ಸಿಗುವ ಉಪಯೋಗವೇನು ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 07, 2025 | 2:41 PM

ಬೇಸಿಗೆಯಲ್ಲಿ ಸೌಂದರ್ಯ (beauty) ಮತ್ತು ಆರೋಗ್ಯ (health) ಎರಡನ್ನು ಕಾಪಾಡಿಕೊಳ್ಳಲು ಬಯಸುವವರು ಮಾವಿನ (mango) ಹಣ್ಣುಗಳ ಸೇವನೆ ಮಾಡಬೇಕು ಎಂದು ಪೌಷ್ಠಿಕ ತಜ್ಞರು ಹೇಳುತ್ತಾರೆ. ಮಾವಿನ ಹಣ್ಣುಗಳು ಮಾತ್ರವಲ್ಲ ಆ ಮರದಲ್ಲಿಯೇ ಅನೇಕ ರೀತಿಯ ಔಷಧೀಯ ಗುಣಗಳಿವೆ ಎಂದು ಹೇಳಲಾಗುತ್ತದೆ. ಹಣ್ಣಿನ ಹೊರತಾಗಿ, ಇದರ ಎಲೆಗಳು, ತೊಗಟೆ ಮತ್ತು ಮಾವಿನ ಹೂವು (mango flowers) ಸಹ ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆ ಇದೆ. ಹಾಗಾಗಿಯೇ ಇವುಗಳನ್ನು ಅನೇಕ ರೀತಿಯ ಔಷಧಿಗಳಲ್ಲಿ ಈಗಲೂ ಬಳಕೆ ಮಾಡಲಾಗುತ್ತಿದೆ. ಅದರಲ್ಲಿ ಮಾವಿನ ಹೂವುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಈ ಹೂವುಗಳನ್ನು ಅನೇಕ ರೀತಿಯ ಮದ್ದಿಗೆ ಬಳಸಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಈ ಹೂವುಗಳು ಯಾವ ರೀತಿಯ ಸಮಸ್ಯೆಗಳಿಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

  • ಮಾವಿನ ಹೂವುಗಳಲ್ಲಿ ಫೈಬರ್ ಅಂಶ ಅಧಿಕವಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗದಂತೆ ರಕ್ಷಿಸುತ್ತದೆ. ಹಾಗಾಗಿ ಮಧುಮೇಹದ ಅಪಾಯವನ್ನು ತಡೆಯುತ್ತದೆ.
  • ಮಾವಿನ ಹೂವುಗಳು ಉರಿಯೂತ ನಿವಾರಕ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಗಳನ್ನು ಹೊಂದಿವೆ. ಅವು ಮೊಡವೆಗಳಂತಹ ಚರ್ಮದ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತವೆ. ಜೊತೆಗೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
  • ಮಾವಿನ ಹೂವಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ ಎಂದು ತಜ್ಞರು ಹೇಳುತ್ತಾರೆ. ಅವು ಅಜೀರ್ಣ ಮತ್ತು ಉಬ್ಬರದಂತಹ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
  • ಮಾವಿನ ಹೂವುಗಳು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳಿಂದ ಸಮೃದ್ಧವಾಗಿವೆ. ಅವು ಉರಿಯೂತದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ. ಕೀಲುಗಳನ್ನು ಆರೋಗ್ಯಕರವಾಗಿರಿಸುತ್ತವೆ ಮತ್ತು ಸಂಧಿವಾತದಿಂದ ಮುಕ್ತಿ ನೀಡುತ್ತದೆ.
  • ಅಲ್ಲದೆ ಈ ಹೂವುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರಿಂದ ಅನೇಕ ರೀತಿಯ ಸೋಂಕುಗಳು ಬರದಂತೆ ತಪ್ಪಿಸಬಹುದು. ಜೊತೆಗೆ ಹೃದಯವನ್ನು ಆರೋಗ್ಯವಾಗಿರಿಸುತ್ತದೆ.
  • ಮಾವಿನ ಹೂವುಗಳನ್ನು ಕೆಮ್ಮನ್ನು ಕಡಿಮೆ ಮಾಡಲು ಸಹ ಬಳಸಲಾಗುತ್ತದೆ. ಇದು ಅಸ್ತಮಾ, ಬ್ರಾಂಕೈಟಿಸ್ ಮುಂತಾದ ಉಸಿರಾಟದ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡುತ್ತದೆ. ಶ್ವಾಸಕೋಶವನ್ನು ಆರೋಗ್ಯವಾಗಿರಿಸುತ್ತದೆ.
  • ಮಾವಿನ ಹೂವುಗಳಲ್ಲಿ ಫೈಬರ್ ಇರುತ್ತದೆ. ಇದನ್ನು ತಿನ್ನುವುದರಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು. ತೂಕ ಇಳಿಸಿಕೊಳ್ಳಲು ಬಯಸುವವರು ಈ ಹೂವಿನ ಸೇವನೆ ಮಾಡಬಹುದು.
  • ಬೇಸಿಗೆಯಲ್ಲಿ ಅನೇಕ ಜನರು ಮೂಗಿನ ದಟ್ಟಣೆಯ ಸಮಸ್ಯೆಯಿಂದ ಬಳಲುತ್ತಾರೆ. ಈ ಸಮಸ್ಯೆಯು ಹೆಚ್ಚಾಗಿ ಶಾಖದಿಂದ ಉಂಟಾಗುತ್ತದೆ. ಅಂತಹ ಸಮಯದಲ್ಲಿ ಮಾವಿನ ಹೂವಿನ ಪರಿಮಳವನ್ನು ತೆಗೆದುಕೊಳ್ಳುವುದರಿಂದ ಈ ಸಮಸ್ಯೆಯನ್ನು ಗುಣಪಡಿಸಬಹುದು.
  • ಮಾವಿನ ಹೂವುಗಳಲ್ಲಿರುವ ಪೋಷಕಾಂಶಗಳು ಒತ್ತಡ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳನ್ನು ತಡೆಯುತ್ತವೆ. ಜೊತೆಗೆ ಆಯಾಸವನ್ನು ಸಹ ನಿವಾರಿಸುತ್ತವೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ