ಮುಟ್ಟಾದ ಬಳಿಕ ಈ ಮಹಿಳೆಗೆ 3 ವರ್ಷಗಳ ಕಾಲ ರಕ್ತಸ್ರಾವವೇ ನಿಂತಿರಲಿಲ್ಲವಂತೆ, ಕಾರಣವೇನು?
ಮುಟ್ಟಾದ ಬಳಿಕ ಮಹಿಳೆಗೆ ಸಾವಿರ ದಿನಗಳ ಕಾಲ ರಕ್ತಸ್ರಾವ ನಿಂತೇ ಇರಲಿಲ್ಲ, ಎಲ್ಲಿ ಯಾವ ಚಿಕಿತ್ಸೆ ಪಡೆದರೂ ಮುಟ್ಟಿನ ನೋವಾಗಲಿ ಅಥವಾ ರಕ್ತಸ್ರಾವವಾಗಲಿ ತಡೆಯಲು ಸಾಧ್ಯವಾಗಿಲ್ಲ. ಅಂತಿಮವಾಗಿ ಅಲ್ಟ್ರಾಸೌಂಡ್ನಲ್ಲಿ ಆಕೆಗಿರುವ ಸಮಸ್ಯೆಯನ್ನು ವೈದ್ಯರು ಪತ್ತೆಹಚ್ಚಿದ್ದಾರೆ. ಮುಟ್ಟು 24 ರಿಂದ 30 ದಿನಗಳ ಅವಧಿಯಲ್ಲಿ ಸಂಭವಿಸುತ್ತದೆ. ರಕ್ತಸ್ರಾವ 2-7 ದಿನಗಳವರೆಗೆ ಇರುತ್ತದೆ.

ವಾಷಿಂಗ್ಟನ್, ಏಪ್ರಿಲ್ 10: ಹೆಣ್ಣುಮಕ್ಕಳು ಮುಟ್ಟಾದಾಗ ಸಾಮಾನ್ಯವಾಗಿ 4-5 ದಿನಗಳ ಕಾಲ, ಹೆಚ್ಚು ಅಂದರೆ 8 ದಿನಗಳವರೆಗೆ ರಕ್ತಸ್ರಾವವಿರುತ್ತದೆ. ಅದಕ್ಕಿಂತ ಹೆಚ್ಚು ದಿನಗಳ ಕಾಲ ರಕ್ತಸ್ರಾವವಾದರೆ ಆರೋಗ್ಯದಲ್ಲಿ ಏನೋ ವ್ಯತ್ಯಾಸವಾಗಿದೆ ಎಂದರ್ಥ. ಅಮೆರಿಕದ ಮಹಿಳೆಯೊಬ್ಬರಿಗೆ ಮುಟ್ಟು(Periods) ಆದ ಬಳಿಕ 1 ಸಾವಿರ ದಿನಗಳು ಅಂದರೆ ಬರೋಬ್ಬರಿ 3 ವರ್ಷಗಳ ಕಾಲ ರಕ್ತಸ್ರಾವವಿತ್ತಂತೆ. ಹಲವು ವೈದ್ಯರಿಗೆ ತೋರಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಹಾಗೆಯೇ ಆಕೆಗಾಗಿರುವ ಸಮಸ್ಯೆಯಾದರೂ ಏನು ಎಂದು ತಿಳಿದುಬಂದಿರಲಿಲ್ಲ. ಟಿಕ್ಟಾಕ್ ಬಳಕೆದಾರರೊಬ್ಬರು ತಮಗೆ 1 ಸಾವಿರ ದಿನಗಳ ಕಾಲ ಮುಟ್ಟು ಇತ್ತು ಎಂಬುದರ ಕುರಿತು ತಮ್ಮ ನೋವು ಹಂಚಿಕೊಂಡಿದ್ದಾರೆ. ಅಂತಿಮವಾಗಿ ಮೂಲ ಕಾರಣವನ್ನು ಕಂಡುಕೊಳ್ಳಲಾಗಿದೆ. ಅಲ್ಟ್ರಾಸೌಂಡ್ ಮೂಲಕ ಇದನ್ನು ಕಂಡು ಹಿಡಿಯಲಾಯಿತು. ಮುಟ್ಟು 24 ರಿಂದ 30 ದಿನಗಳ ಅವಧಿಯಲ್ಲಿ ಸಂಭವಿಸುತ್ತದೆ.
ರಕ್ತಸ್ರಾವ 2-7 ದಿನಗಳವರೆಗೆ ಇರುತ್ತದೆ. ವಯಸ್ಸು, ಹಾರ್ಮೋನುಗಳು, ಜನನ ನಿಯಂತ್ರಣ ಮತ್ತು ಜೀವನಶೈಲಿಯ ಅಂಶಗಳು, ಒತ್ತಡ, ಆಹಾರ ಮತ್ತು ವ್ಯಾಯಾಮದಂತಹ ಅಂಶಗಳನ್ನು ಅವಲಂಬಿಸಿ ಈ ಕಾಲಾವಧಿಯು ಬದಲಾಗಬಹುದು.
ಅಮೆರಿಕನ್ ಕಾಲೇಜ್ ಆಫ್ ಅಬ್ಸ್ಟೆಟ್ರಿಷಿಯನ್ಸ್ ಅಂಡ್ ಗೈನಕಾಲಜಿಸ್ಟ್ಸ್ ಪ್ರಕಾರ , ಹೆರಿಗೆಯ ವಯಸ್ಸಿನ ಅಮೆರಿಕ ಮಹಿಳೆಯರಲ್ಲಿ ಶೇ.14 ರಿಂದ ಶೇ.25 ರಷ್ಟು ಜನರು ಅನಿಯಮಿತ ಮುಟ್ಟನ್ನು ಅನುಭವಿಸುತ್ತಿದ್ದಾರೆ. ಈ ಮಹಿಳೆಗೆ ಮೂರು ವರ್ಷಗಳ ಕಾಲ ಮುಟ್ಟು ಮುಂದುವರೆದಿತ್ತು. ಹಲವಾರು ವೈದ್ಯರ ಸಮಾಲೋಚನೆಗಳು, ಪರೀಕ್ಷೆಗಳು ಮತ್ತು ಔಷಧಿಗಳ ಹೊರತಾಗಿಯೂ, ರಕ್ತಸ್ರಾವವು ಮುಂದುವರೆಯಿತು.
ಮತ್ತಷ್ಟು ಓದಿ: Home Remedies: ಬಿಳಿ ಮುಟ್ಟಿನ ಸಮಸ್ಯೆಯನ್ನು ಕಡೆಗಣಿಸಲೇ ಬೇಡಿ, ಮನೆಯಲ್ಲೇ ಇದೆ ಸುಲಭ ಪರಿಹಾರ
ಆಕೆಯ ಅಂಡಾಶಯಗಳಲ್ಲಿ ಚೀಲಗಳು ಕಂಡುಬಂದವು, ಆದರೆ ಕಾರಣ ಸ್ಪಷ್ಟವಾಗಿರಲಿಲ್ಲ. ಯುವತಿಗೆ ಎರಡು ಗರ್ಭಕೋಶಗಳಿವೆ ಎಂದು ತಿಳಿದುಬಂದಿತ್ತು, ಇದು ಬಹಳ ಅಪರೂಪ. ಕೇವಲ 5 ಪ್ರತಿಷತದಷ್ಟು ಮಹಿಳೆಯರು ಮಾತ್ರ ಇದನ್ನು ಅನುಭವಿಸುತ್ತಾರೆ. ಹಲವು ಸಂದರ್ಭಗಳಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಸದ್ಯಕ್ಕೆ, ಯುವತಿ ಶಸ್ತ್ರಚಿಕಿತ್ಸೆಯ ಮೂಲಕ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾಳೆ.
ತಾನು 950 ದಿನಗಳನ್ನು ಯಾತನೆಯಲ್ಲೇ ಕಳೆದಿದ್ದೇನೆ, ನಾನು ಕೂಡಿಟ್ಟ ಹಣವನ್ನೆಲ್ಲಾ ಪ್ಯಾಡ್ಗಳು, ಪೀರಿಯಡ್ಗೆ ಸಂಬಂಧಿಸಿದ ಉತ್ಪನ್ನಗಳು, ಚಿಕಿತ್ಸೆಗೆ ಹಾಕಿದ್ದೇನೆ. ರಕ್ತಸ್ರಾವವಿಲ್ಲದ ಜೀವನದ ಬಗ್ಗೆ ಊಹಿಸಿದರೂ ಸ್ವರ್ಗದಂತೆ ಅನಿಸುವುದು ಎಂದು ಬೇಸರ ವ್ಯಕ್ತಪಡಿಸಿದ್ದಾಳೆ. ಗರ್ಭಾಶಯದ ಒಳಪದರದಿಂದ ಅಸಹಜ ಅಂಗಾಂಶವನ್ನು ತೆಗೆಯುತ್ತಾರೆ, ಇದಲ್ಲದೆ, ಆಕೆಯ ಹೃದಯ ಆಕಾರದ ಗರ್ಭಾಶಯವನ್ನು ಸರಿಪಡಿಸಲು ಆಕೆ ವೈದ್ಯರೊಂದಿಗೆ ಶಸ್ತ್ರಚಿಕಿತ್ಸೆ ಮಾಡುವಂತೆ ಕೇಳಿಕೊಂಡಿದ್ದಾಳೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:06 am, Thu, 10 April 25