Menstrual Health: ಮುಟ್ಟಾದಾಗ ಮಹಿಳೆಯರು ಈ 5 ವಿಷಯಗಳನ್ನು ಮಿಸ್ ಮಾಡಬೇಡಿ
International Women's Day: ಋತುಚಕ್ರವನ್ನು ಸಾಮಾನ್ಯವಾಗಿ ಮುಟ್ಟು ಅಥವಾ ಪಿರಿಯಡ್ಸ್ ಎಂದು ಕರೆಯಲಾಗುತ್ತದೆ. ನೀವು ಋತುಮತಿಯಾದಾಗ ನಿಮ್ಮ ಗರ್ಭಾಶಯದ ಒಳಪದರದಿಂದ ರಕ್ತ, ಲೋಳೆಯ ಅಂಶಗಳು ಹೊರಬರುತ್ತವೆ. ಈ ಪಿರಿಯಡ್ಸ್ ಪ್ರತಿ ತಿಂಗಳೂ ಉಂಟಾಗುತ್ತದೆ. ಇದು ಸಾಮಾನ್ಯವಾಗಿ 3ರಿಂದ 7 ದಿನಗಳವರೆಗೆ ಇರುತ್ತದೆ. ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಈ ಹಿನ್ನೆಲೆಯಲ್ಲಿ ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರು ಅನುಸರಿಸಲೇಬೇಕಾದ ಮುಟ್ಟಿನ ನೈರ್ಮಲ್ಯದ ಬಗ್ಗೆ ಸಲಹೆಗಳು ಇಲ್ಲಿವೆ.
ಪಿರಿಯಡ್ಸ್ ಎಂಬುದು ಮಹಿಳೆಯ ಋತುಚಕ್ರದ (Menstruation) ಭಾಗವಾಗಿ ಪ್ರತಿ ತಿಂಗಳೂ ಸಂಭವಿಸುವ ಸಾಮಾನ್ಯ ಯೋನಿ ರಕ್ತಸ್ರಾವವಾಗಿದೆ. ಪ್ರತಿ ತಿಂಗಳು ಈ ಮೂಲಕ ನಿಮ್ಮ ದೇಹವು ಗರ್ಭಧಾರಣೆಗೆ ಸಿದ್ಧವಾಗುತ್ತದೆ. ಮುಟ್ಟು ರಕ್ತ, ಯೋನಿ ಸ್ರವಿಸುವಿಕೆ ಮತ್ತು ಗರ್ಭಾಶಯದ ಗೋಡೆಯ ಎಂಡೊಮೆಟ್ರಿಯಲ್ ಕೋಶಗಳನ್ನು ಒಳಗೊಂಡಿರುವ ಒಂದು ಸಂಕೀರ್ಣ ಜೈವಿಕ ದ್ರವವಾಗಿದೆ. ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಇಂದು ಮಹಿಳೆಯರ ಸಾಧನೆಗಳನ್ನು ಮಾತ್ರವಲ್ಲದೆ ಮುಟ್ಟಿನ ನೈರ್ಮಲ್ಯದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವುದು ಅತ್ಯಗತ್ಯ.
ಋತುಚಕ್ರವು ಪ್ರತಿಯೊಬ್ಬ ಮಹಿಳೆ ಅನುಭವಿಸುವ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಈ ಸಮಯದಲ್ಲಿ ಸರಿಯಾದ ನೈರ್ಮಲ್ಯ ಅಭ್ಯಾಸಗಳು ಮಹಿಳೆಯರ ಆರೋಗ್ಯ ಕಾಪಾಡಿಕೊಳ್ಳಲು ನಿರ್ಣಾಯಕವಾಗಿದೆ. ಈ ಅಂತಾರಾಷ್ಟ್ರೀಯ ಮಹಿಳಾ ದಿನದಂದು, ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮತ್ತು ಶಿಕ್ಷಣವನ್ನು ಉತ್ತೇಜಿಸುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸೋಣ. ಪ್ರತಿ ಮಹಿಳೆ ಅನುಸರಿಸಬೇಕಾದ 5 ಮೂಲಭೂತ ಮುಟ್ಟಿನ ನೈರ್ಮಲ್ಯ ಸಲಹೆಗಳು ಇಲ್ಲಿವೆ.
ಇದನ್ನೂ ಓದಿ: ಮುಟ್ಟಾದರೆ ಮುಜುಗರ ಬೇಡ; ಋತುಚಕ್ರದ ಬಗ್ಗೆ ಇರುವ 3 ತಪ್ಪು ಕಲ್ಪನೆಗಳಿವು
ಸ್ಯಾನಿಟರಿ ಪ್ಯಾಡ್ ಬದಲಾಯಿಸುವುದು:
ಪ್ರತಿ 4-6 ಗಂಟೆಗಳಿಗೊಮ್ಮೆ ಮುಟ್ಟಿನ ಸಮಯದಲ್ಲಿ ನಿಯಮಿತವಾಗಿ ಸ್ಯಾನಿಟರಿ ಪ್ಯಾಡ್‌ಗಳು ಅಥವಾ ಟ್ಯಾಂಪೂನ್‌ಗಳನ್ನು ಬದಲಾಯಿಸುವುದು ಬಹಳ ಮುಖ್ಯ. ಅವುಗಳನ್ನು ಹೆಚ್ಚು ಕಾಲ ಇಡುವುದರಿಂದ ಬ್ಯಾಕ್ಟೀರಿಯಾದ ಬೆಳವಣಿಗೆ ಮತ್ತು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
ಬಳಸಿದ ಉತ್ಪನ್ನಗಳ ಸರಿಯಾದ ವಿಲೇವಾರಿ:
ನೀವು ಬಳಸಿದ ಪ್ಯಾಡ್ಗಳನ್ನು ಸರಿಯಾಗಿ ವಿಲೇವಾರಿ ಮಾಡುವುದು ಕೂಡ ಅತ್ಯಗತ್ಯ. ಅವುಗಳನ್ನು ಟಾಯ್ಲೆಟ್ ಪೇಪರ್ ಅಥವಾ ನ್ಯೂಸ್ ಪೇಪರ್ನಲ್ಲಿ ಸುತ್ತಿ ಬಿಸಾಡಬೇಕು. ಬಿನ್‌ನಲ್ಲಿ ಶೌಚಾಲಯದಲ್ಲಿ ಪ್ಯಾಡ್ಗಳನ್ನು ಟಾಯ್ಲೆಟ್ ಬೇಸಿನ್ಗೆ ಹಾಕಿ ಫ್ಲಶ್ ಮಾಡಬೇಡಿ. ಇದರಿಂದ ಪೈಪ್ಗಳು ಬಂದ್ ಆಗಿ ಪರಿಸರ ಮಾಲಿನ್ಯವನ್ನು ಉಂಟುಮಾಡಬಹುದು.
ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ:
ಮುಟ್ಟಿನ ಸಮಯದಲ್ಲಿ ಸರಿಯಾದ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ದಿನಕ್ಕೆ 2 ಬಾರಿಯಾದರೂ ಸೋಪ್ ಮತ್ತು ನೀರಿನಿಂದ ನಿಮ್ಮ ಜನನಾಂಗವನ್ನು ತೊಳೆಯುವುದು ಅತ್ಯಗತ್ಯ. ತೇವಾಂಶವನ್ನು ಕಡಿಮೆ ಮಾಡಲು ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡಲು ಒಳಉಡುಪುಗಳನ್ನು ನಿಯಮಿತವಾಗಿ ಬದಲಾಯಿಸಿ. ಆದಷ್ಟೂ ಕಾಟನ್ ಒಳ ಉಡುಪುಗಳನ್ನು ಬಳಸಿ.
ಇದನ್ನೂ ಓದಿ: ಮಹಿಳೆಯರಲ್ಲಿ ಋತುಬಂಧ ಸಮೀಪಿಸುತ್ತಿರುವ ಈ 7 ಚಿಹ್ನೆಗಳನ್ನು ನಿರ್ಲಕ್ಷ್ಯಿಸಬೇಡಿ!
ಹೈಡ್ರೇಟೆಡ್ ಆಗಿರಿ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ:
ಸಾಕಷ್ಟು ನೀರು ಕುಡಿಯುವುದು ಮತ್ತು ಹಣ್ಣುಗಳು, ತರಕಾರಿಗಳು, ಧಾನ್ಯಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಸೇವಿಸುವುದು ಮುಟ್ಟಿನ ರೋಗಲಕ್ಷಣಗಳನ್ನು ನಿವಾರಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಕೆಫೀನ್ ಮತ್ತು ಉಪ್ಪಿನ ಆಹಾರಗಳ ಅತಿಯಾದ ಸೇವನೆಯನ್ನು ಕಡಿಮೆ ಮಾಡಿ. ಏಕೆಂದರೆ ಅದು ಮುಟ್ಟಿನ ಸಮಯದಲ್ಲಿ ಆರೋಗ್ಯ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು.
ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡಿ:
ಮುಟ್ಟಿನ ಸಮಯದಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಅವರವರ ವೈಯಕ್ತಿಕ ಆಯ್ಕೆಯಾಗಿದೆ. ಆದರೆ ನೀವು ಹಾಗೆ ಮಾಡಿದರೆ, ಲೈಂಗಿಕವಾಗಿ ಹರಡುವ ಸೋಂಕುಗಳು (STI ಗಳು) ಮತ್ತು ಅನಗತ್ಯ ಗರ್ಭಧಾರಣೆಯನ್ನು ತಡೆಗಟ್ಟಲು ರಕ್ಷಣೆಯನ್ನು ಬಳಸುವುದು ಬಹಳ ಮುಖ್ಯ. ಯಾವಾಗಲೂ ಕಾಂಡೋಮ್‌ಗಳನ್ನು ಸರಿಯಾಗಿ ಬಳಸಲು ಆದ್ಯತೆ ನೀಡಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ