Parrot Fever: ಗಿಳಿ ಜ್ವರ ಎಂದರೇನು? ರೋಗಲಕ್ಷಣ ಹಾಗೂ ಚಿಕಿತ್ಸೆಯ ಮಾಹಿತಿ ಇಲ್ಲಿದೆ

ಹೆಸರೇ ಸೂಚಿಸುವಂತೆ ಇದು ಪಕ್ಷಿಗಳಿಂದ ಹರಡುವ ರೋಗ. ಕೇವಲ ಗಿಳಿಗಳಿಗೆ ಸೀಮಿತವಾಗಿಲ್ಲ. ವಲಸೆ ಹಕ್ಕಿಗಳು, ಕಾಡು ಪಕ್ಷಿಗಳು ಮತ್ತು ಕೋಳಿ ಫಾರಂನಲ್ಲಿರುವ ಕೋಳಿಗಳು ಸೇರಿದಂತೆ ಇತರ ಪಕ್ಷಿಗಳಿಂದಲೂ ಸೋಂಕು ಹರಡಬಹುದು ಎಂದು ತಜ್ಞರು ಹೇಳುತ್ತಾರೆ.

Parrot Fever: ಗಿಳಿ ಜ್ವರ ಎಂದರೇನು? ರೋಗಲಕ್ಷಣ ಹಾಗೂ ಚಿಕಿತ್ಸೆಯ ಮಾಹಿತಿ ಇಲ್ಲಿದೆ
Parrot FeverImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on: Mar 08, 2024 | 4:58 PM

ಇತ್ತೀಚಿನ ದಿನಗಳಲ್ಲಿ ಬ್ರಿಟನ್ ಸೇರಿದಂತೆ ಹಲವು ಯುರೋಪಿಯನ್ ರಾಷ್ಟ್ರಗಳ ಜನರು ಗಿಳಿ ಜ್ವರದಿಂದ ಬಳಲುತ್ತಿದ್ದಾರೆ. ಸಾಮಾನ್ಯ ಜನರ ಬಾಯಲ್ಲಿ ಗಿಳಿ ಜ್ವರ ಎಂದು ಕರೆಯಲ್ಪಡುವ ಈ ರೋಗದ ವೈಜ್ಞಾನಿಕ ಹೆಸರು psittacosis.ಈ ರೋಗವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ರೋಗ ಈಗಾಗಲೇ ಯುರೋಪ್ ಖಂಡದ ಹಲವು ದೇಶಗಳಿಗೆ ಹರಡಿದೆ. ಈ ಸೋಂಕಿನಿಂದ ಇದುವರೆಗೆ ಐವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಸೋಂಕು 2023ರಲ್ಲಿ ಬೆಳಕಿಗೆ ಬಂದಿತ್ತು ಎಂದು ತಿಳಿದುಬಂದಿದೆ. ಆದಾಗ್ಯೂ, 2024 ರ ಆರಂಭದಲ್ಲಿ, ಈ ಸೋಂಕಿನ ಹರಡುವಿಕೆ ಹೆಚ್ಚಾಗಿದೆ.

ಗಿಳಿ ಜ್ವರ ಎಂದರೇನು?

ಹೆಸರೇ ಸೂಚಿಸುವಂತೆ ಇದು ಪಕ್ಷಿಗಳಿಂದ ಹರಡುವ ರೋಗ. ಕೇವಲ ಗಿಳಿಗಳಿಗೆ ಸೀಮಿತವಾಗಿಲ್ಲ. ವಲಸೆ ಹಕ್ಕಿಗಳು, ಕಾಡು ಪಕ್ಷಿಗಳು ಮತ್ತು ಕೋಳಿ ಫಾರಂನಲ್ಲಿರುವ ಕೋಳಿಗಳು ಸೇರಿದಂತೆ ಇತರ ಪಕ್ಷಿಗಳಿಂದಲೂ ಸೋಂಕು ಹರಡಬಹುದು ಎಂದು ತಜ್ಞರು ಹೇಳುತ್ತಾರೆ. ಗಿಳಿ ಜ್ವರದಿಂದ ಸೋಂಕಿಗೆ ಒಳಗಾದ ವ್ಯಕ್ತಿಯು ಆರಂಭದಲ್ಲಿ ಸಾಮಾನ್ಯ ಜ್ವರದಂತೆಯೇ ರೋಗಲಕ್ಷಣಗಳನ್ನು ಹೊಂದಿರುತ್ತಾನೆ. ನಂತರ ರೋಗಲಕ್ಷಣಗಳು ಉಲ್ಬಣಗೊಳ್ಳುತ್ತವೆ.

ಗಿಳಿ ಜ್ವರದ ಲಕ್ಷಣಗಳು ಹೀಗಿವೆ:

  • ಶೀತ, ಜ್ವರ
  • ಸ್ನಾಯುಗಳಲ್ಲಿ ನೋವು
  • ವಾಂತಿ, ಅತಿಸಾರ
  • ದೈಹಿಕ ದೌರ್ಬಲ್ಯ
  • ಒಣ ಕೆಮ್ಮು
  • ತಲೆನೋವು ಹೆಚ್ಚು ಕಾಡುತ್ತದೆ.

ಇದನ್ನೂ ಓದಿ: Lung Damage: ಕೊವಿಡ್ ನಂತರ ಶ್ವಾಸಕೋಶದ ತೊಂದರೆ ಹೆಚ್ಚಳ; ಅಧ್ಯಯನ

ಸೋಂಕಿನ 5 ರಿಂದ 14 ದಿನಗಳಲ್ಲಿ ರೋಗಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಕೆಲವರಿಗೆ ಉಸಿರಾಟದ ತೊಂದರೆ ಇರುತ್ತದೆ. ಎದೆನೋವು ಇರಬಹುದು ಎನ್ನಲಾಗಿದೆ. ಪಕ್ಷಿಗಳ ಹತ್ತಿರ ಇರುವವರಿಗೆ ಈ ಸೋಂಕು ಬಹುಬೇಗ ಹರಡುತ್ತದೆ ಎಂದು ಹೇಳಲಾಗುತ್ತದೆ. ಸೋಂಕಿತ ಪಕ್ಷಿಗಳು ಇತರ ಪಕ್ಷಿಗಳಿಗೆ ಮತ್ತು ಮನುಷ್ಯರಿಗೆ ರೋಗವನ್ನು ಹರಡುತ್ತವೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಸೋಂಕು ಧೂಳಿನ ಕಣಗಳು ಮತ್ತು ನೀರಿನ ಹನಿಗಳ ಮೂಲಕವೂ ಹರಡಬಹುದು. ಪಕ್ಷಿಗಳು ಮನುಷ್ಯರನ್ನು ಕಚ್ಚಿದಾಗ ಸೋಂಕು ಹರಡುತ್ತದೆ. ರೋಗಲಕ್ಷಣಗಳು ಉಲ್ಬಣಗೊಳ್ಳುತ್ತಿದ್ದಂತೆ, ನ್ಯುಮೋನಿಯಾ ಮತ್ತು ಹೃದಯ ರಕ್ತನಾಳಗಳ ಉರಿಯೂತ ಸಂಭವಿಸಬಹುದು. ಹೆಪಟೈಟಿಸ್ ಮತ್ತು ನರಸಂಬಂಧಿ ಸಮಸ್ಯೆಗಳೂ ಎದುರಾಗುತ್ತವೆ.ಸರಿಯಾದ ಸಮಯದಲ್ಲಿ ವೈದ್ಯಕೀಯ ನೆರವು ದೊರೆಯದಿದ್ದರೆ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ