Viral: ಬಾರ್ಬಿ: ಗುಲಾಬಿ ಜ್ವರ ಮೋದಿ, ಸೋನಿಯಾ, ರಾಹುಲ್, ಲಾಲೂ ಇನ್ನ್ಯಾರಿಗೆಲ್ಲ?

Artificial Intelligence : ರಾಗಾ, ದೀದಿ, ಮೋದಿ, ಲಾಲೂ ಎಂದು ತಮ್ಮ ನೆಚ್ಚಿನ ರಾಜಕಾರಣಿಗಳಿಗೆಲ್ಲ ಹೃದಯವನ್ನೇ ಧಾರೆ ಎರೆಯುತ್ತಿದೆ ಕೆಲಮಂದಿ. ಬಾರ್ಬಿ ಫಿವರ್ ಎಲ್ಲಿಗೆ ಹೋಗಿ ತಲುಪುತ್ತದೆಯೋ ಎಂದು ಚಿಂತೆಗಿಳಿದಿದೆ ಇನ್ನೂ ಕೆಲಮಂದಿ. ನೀವು?

Viral: ಬಾರ್ಬಿ: ಗುಲಾಬಿ ಜ್ವರ ಮೋದಿ, ಸೋನಿಯಾ, ರಾಹುಲ್, ಲಾಲೂ ಇನ್ನ್ಯಾರಿಗೆಲ್ಲ?
ಮೋದಿ ಮತ್ತು ಸೋನಿಯಾ ಗಾಂಧಿ
Follow us
ಶ್ರೀದೇವಿ ಕಳಸದ
|

Updated on: Jul 29, 2023 | 5:01 PM

Barbie : ನಿನ್ನೆಯಷ್ಟೇ ಬರಾಕ್ ಒಬಾಮಾ, ಜೋ ಬೈಡನ್​ ಈ ಗುಲಾಬಿ ಜ್ವರಕ್ಕೆ ತುತ್ತಾಗಿದ್ದರು. ಇದೀಗ ಮೋದಿ (Modi), ಸೋನಿಯಾ, ರಾಹುಲ್​, ಲಾಲೂ, ಗಡ್ಕರಿ, ಅಮಿತ್​ ಷಾ, ಕೇಜ್ರೀವಾಲ್​ಗೂ ಕೂಡ ಇದು ಸೋಂಕಿದೆ. ಎಐ ಕಲಾವಿದರು ಹಗಲಿರುಳು ಶ್ರಮಿಸುತ್ತ ಈ ಬಾರ್ಬಿ ಫಿವರ್ ಅಥವಾ ಗುಲಾಬಿ ಜ್ವರ ಹರಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ವಿಶ್ವದಾದ್ಯಂತ ಬಾರ್ಬಿ ಚಲನಚಿತ್ರ ಯಶಸ್ವಿಯಾಗಿ ಓಡುತ್ತಿರುವ ಹಿನ್ನೆಲೆಯಲ್ಲಿ  ಅನೇಕ ಬ್ರ್ಯಾಂಡ್​ಗಳು ತಮ್ಮ ಉತ್ಪನ್ನಗಳನ್ನು ಈ ಜ್ವರದಲ್ಲಿ ಅದ್ದಿ ತೆಗೆಯುತ್ತಿವೆ. ಜಾಲತಾಣಗಳಲ್ಲಿ ಇದರ ಬಗ್ಗೆ ಮಾತೇ ಬೇಡ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Who Wore What (@whoworewhat.club)

ಅವರವರ ಅಭಿಮಾನಿಗಳು ಅವರವರನ್ನು ಹೊಗಳುತ್ತಿದ್ದಾರೆ. ಮಮತಾ ಮತ್ತು ಸೋನಿಯಾ ಬಹಳ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ಕೆಲವರು. ಮೋದಿ ಎಲ್ಲಿ ಹೋದರೂ ರಂಗೇ ಎಂದು ಕೆಲವರು. ಲಾಲೂ ಕೂಡ ಬಹಳ ಮುದ್ದಾಗಿದ್ದಾರೆ ಎಂದು ಕೆಲವರು. ರಾಹುಲ್ ಅಂತೂ ಬಹಳ ಮುದ್ದು ಎಂದು ಹಲವರು. ಒಟ್ಟಾಗಿ ನೋಡಿದರೆ ಎಲ್ಲರೂ ಭಾರತ್ ರಾಷ್ಟ್ರ ಸಮಿತಿಯನ್ನು ಸೇರಿದಂತೆ ಭಾಸವಾಗುತ್ತಿದೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral: ಚಪಾತಿಯಲ್ಲಿ ಜಿರಳೆಮರಿ; ವಂದೇ ಭಾರತ್​​​ನಿಂದ ಪ್ರಯಾಣಿಕರೊಬ್ಬರಿಗೆ ಉಚಿತ ಕೊಡುಗೆ

ರಾಹುಲ್ ಗಾಂಧಿಯನ್ನು ರಾಗಾ ಎಂದು, ಮಮತಾ ಅನ್ನು ದೀದೀ ಎಂದೂ ಕರೆದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದೆ ನೆಟ್​ಜನತೆ. ಆದರೆ ಇದರಿಂದ ಏನು ಪ್ರಯೋಜನ? ತಿಂಗಳ ಮೇಲಾಯ್ತು ಎಐ ಕಲಾವಿದರು ಪ್ರಸಿದ್ಧ ವ್ಯಕ್ತಿಗಳನ್ನೆಲ್ಲ ಗುಲಾಬಿಯಲ್ಲಿ ಮುಳುಗೇಳಿಸುತ್ತ ಎಂದು ತಕರಾರು ತೆಗೆದಿದ್ದಾರೆ.

ಇದನ್ನೂ ಓದಿ : Viral Video: ಡಿಜಿಟಲ್ ಭಿಕ್ಷೆ; ಸ್ಲೀಪರ್ ಕೋಚ್​ನಲ್ಲಿಯೂ ರೀಲಿಗರ ಹಾವಳಿ; ಕಿಡಿಕಾರಿದ ನೆಟ್ಟಿಗರು 

ಎಐ ಕಲಾವಿದರಿಗೆ ಇದರಿಂದ ಏನು ಲಾಭ ಇದೆ ಎಂದ ಪ್ರಶ್ನಿಸಿದ್ದಾರೆ ಕೆಲವರು. ಇದರ ಬದಲಾಗಿ ದೇಶಕ್ಕೆ ತುರ್ತಾಗಿ ಬೇಕಿರುವ ಸಂಗತಿಗಳ ಕಡೆ ಗಮನ ಹರಿಸುವುದು ಒಳ್ಳೆಯದು ಎಂದು ಮತ್ತೊಂದಿಷ್ಟು ಜನ ಹೇಳಿದ್ದಾರೆ. ಕಲೆಯನ್ನು ಕಲೆಯಂತೆ ನೋಡಿ ಆಸ್ವಾದಿಸಬೇಕು ಎಂದು ಒಬ್ಬರು ಹೇಳಿದ್ದಾರೆ. ಎಲ್ಲದರ ಹಿಂದೆಯೂ ವ್ಯಾಪಾರೋದ್ದೇಶಗಳು ಇರುತ್ತವೆ, ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ ಸುಮ್ಮನಿರಿ ಎಂದಿದ್ದಾರೆ ಇನ್ನೊಬ್ಬರು.

ಈ ವಿಷಯವಾಗಿ ನೀವೇನು ಹೇಳುತ್ತೀರಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್