AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಬಾರ್ಬಿ; ಇದೀಗ ಬರಾಕ್​ ಒಬಾಮಾ ಮತ್ತು ಜೋ ಬೈಡನ್​ಗೆ ಗುಲಾಬಿ ಜ್ವರ

Artificial Intelligence : ವಿಷಯಾಧಾರಿತ ಬೌದ್ಧಿಕ ಚರ್ಚೆಯನ್ನು ಬೆಳೆಸದೆ ಬಾರ್ಬಿ ಹೆಸರಲ್ಲಿ ಎಐ ಮೂಲಕ ಇಂಥದೆಲ್ಲವನ್ನೂ ಸೃಷ್ಟಿಸುತ್ತಿರುವುದು ಮತ್ತದನ್ನು ಜನರು ತಮಾಷೆಯಾಗಿ ನೋಡುತ್ತಿರುವುದು ಕೆಲ ನೆಟ್ಟಿಗರಿಗೆ ಬೇಸರ ತರಿಸಿದೆ.

Viral : ಬಾರ್ಬಿ; ಇದೀಗ ಬರಾಕ್​ ಒಬಾಮಾ ಮತ್ತು ಜೋ ಬೈಡನ್​ಗೆ ಗುಲಾಬಿ ಜ್ವರ
ಬರಾಕ್ ಒಬಾಮಾ ಮತ್ತು ಜೋ ಬೈಡೆನ್
ಶ್ರೀದೇವಿ ಕಳಸದ
|

Updated on:Jul 28, 2023 | 4:56 PM

Share

Barbie : ರಾಜಕಾರಣಿಗಳು, ಪ್ರಸಿದ್ಧ ವ್ಯಕ್ತಿಗಳು, ನಟನಟಿಯರು, ಉದ್ಯಮಿಗಳು ಹೀಗೆ ಇವರೆಲ್ಲರಿಗೂ ಹಿಡಿದಿದ್ದ ಬಾರ್ಬಿ ಫಿವರ್​​ ಮೊನ್ನೆಯಷ್ಟೇ ಗ್ಯಾಂಗ್ಸ್​ ಆಫ್​ ವಾಸೇಪುರ್​ಗೂ (Gangs of Wasseypur) ಹಿಡಿದಿತ್ತು. ಇದೀಗ ಬರಾಕ್​ ಒಬಾಮಾ ಮತ್ತು ಜೋ ಬೈಡೆನ್​ಗೂ ಹಿಡಿದುಕೊಂಡಿದೆ. ಎಐ ಕಲಾವಿದರಂತೂ ತಿಂಗಲಿನಿಂದ ಹಗಲೂರಾತ್ರಿ ಈ ಗುಲಾಬಿ ಜ್ವರದ ಹರಡುವಿಕೆಯಲ್ಲಿ ಮುಳುಗಿ ಹೋಗಿದ್ದಾರೆ. ಇದೀಗ ಜೋ ಮತ್ತು ಬರಾಕ್​ ಜೋಡಿಯಂತೂ ಬಹಳ ಮಾರ್ಮಿಕವಾಗಿದೆ ಎಂದು ನೆಟ್ಟಿಗರು ಬಿದ್ದುಬಿದ್ದು ನಗುತ್ತಿದ್ದಾರೆ.

ಜುಲೈ 21 ರಂದು ಬಿಡುಗಡೆಯಾದ ಬಾರ್ಬಿ ಇಡೀ ಜಗತ್ತನ್ನು ಗುಲಾಬಿ ಜ್ವರಕ್ಕೆ ಕೆಡವಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ; ಪಿಂಕ್ ಗೂಗಲ್, ಪಿಂಕ್ ಎಆರ್‌ಬಿಎನ್‌ಬಿ, ಪಿಂಕ್​ ಬರ್ಗರ್​ ಹೀಗೆ… ಇದೀಗ ಜೋ ಬೈಡನ್ ಮತ್ತು ಒಬಾಮಾ ಅವರ ಬಾರ್ಬಿ ಎಐ ಚಿತ್ರವನ್ನು ಬೈಡೆನ್ ಆಡಳಿತದಲ್ಲಿ ರಾಷ್ಟ್ರೀಯ ಹಣಕಾಸು ಅಧ್ಯಕ್ಷರಾಗಿದ್ದ ಜಾನ್​ ಕೂಪರ್​ (Jon Cooper) ಟ್ವೀಟ್​ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ : Viral Video: ನಾಯಿಗೂ ಒಂದು ದಿನ ಬರುತ್ತದೆ ಎಂದು ಕೇಳಿದ್ದಿರಲ್ಲ, ಈಗ ನೋಡಿ!

ಅನೇಕರು ಈ ಟ್ವೀಟಿನಡಿ ಪ್ರತಿಕ್ರಿಯಿಸುತ್ತಿದ್ದಾರೆ. ನಕ್ಕು ನಕ್ಕು ಹೊಟ್ಟೆ ಕರಗಿಸಿಕೊಳ್ಳಲು ಇದಕ್ಕಿಂತ ಒಳ್ಳೆಯ ಚಿತ್ರ ಬೇಕೇ? ಎಂದಿದ್ದಾರೆ ಒಬ್ಬರು. ಇದು ಅದ್ಭುತ, ಇದು ನಿಜವಾಗಲಿ ಎಂದಿದ್ದಾರೆ ಇನ್ನೊಬ್ಬರು. ಇವರೊಂದಿಗೆ ಟ್ರಂಪ್​ನನ್ನೂ ಕರೆದುಕೊಂಡು ಬನ್ನಿ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ಚಿಪ್ಪುಮೀನಿನ ಖಾದ್ಯದಲ್ಲಿ ಸಿಕ್ಕ ಮುತ್ತು; ಅದನ್ನಾಕೆ ನಿಶ್ಚಿತಾರ್ಥದ ಉಂಗುರವಾಗಿಸಿಕೊಂಡಳು

ಆದರೆ ಎಐ ಕಲಾವಿದರ ಈ ಸರಣಿಚಿತ್ರಗಳ ಕುರಿತು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಬಾರ್ಬಿ ಹೆಸರಿನಲ್ಲಿ ಇಂಥವರನ್ನೆಲ್ಲ ನೋಡುತ್ತಿರುವುದು ನಿರಾಶೆ ಉಂಟು ಮಾಡುತ್ತಿದೆ. ವಿಷಯಾಧಾರಿತ ಮತ್ತು ಸಮರ್ಥನೀಯ ಬೌದ್ಧಿಕ ಚರ್ಚೆಗಳನ್ನು ಬೆಳೆಸುವ ಬದಲು ಜನರನ್ನು ಇಂಥ ವಿಷಯಗಳಿಗೆ ಎಳೆಯುತ್ತಿರುವುದು ನಿಜಕ್ಕೂ ಶೋಚನೀಯ ಎಂದಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 4:49 pm, Fri, 28 July 23

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ