Viral: ಗ್ಯಾಂಗ್ಸ್​ ಆಫ್​ ವಾಸೇಪುರ್​ಗೂ ಬಾರ್ಬಿ ಫಿವರ್ ಸೋಂಕಿಸಿದ ಎಐ ಕಲಾವಿದರು

Barbie : ಬಾರ್ಬಿ ಅನೇಕರ ಅಂತರಂಗದ ರಾಜಕುಮಾರಿ. ಕಳೆದ ಒಂದು ತಿಂಗಳಿಂದ ಎಐ ಕಲಾವಿದರು ಬಾರ್ಬಿ ಸಿನೆಮಾದ ನೆಪದಲ್ಲಿ ಗುಲಾಬಿಯ ಮಾಯಕತೆಯ ತೆಕ್ಕೆಗೆ ಬಿದ್ದಿದ್ದಾರೆ. ಈಗ ನೋಡಿ ಅವರು ಯಾರನ್ನೆಲ್ಲ ಕರೆತಂದಿದ್ದಾರೆ!

Viral: ಗ್ಯಾಂಗ್ಸ್​ ಆಫ್​ ವಾಸೇಪುರ್​ಗೂ ಬಾರ್ಬಿ ಫಿವರ್ ಸೋಂಕಿಸಿದ ಎಐ ಕಲಾವಿದರು
ಎಐ ಕಲಾವಿದರ ಕೈಚಳಕದಲ್ಲಿ...
Follow us
ಶ್ರೀದೇವಿ ಕಳಸದ
|

Updated on:Jul 26, 2023 | 5:48 PM

Gangs off Wasseypur : ಗ್ರೆಟಾ ಗೆರ್ವಿಗ್ ನಿರ್ದೇಶನದಲ್ಲಿ ಮಾರ್ಗೊಟ್ ರಾಬಿ ಮತ್ತು ರಿಯಾನ್ ಗೊಸ್ಲಿಂಗ್ (Margot Robbie and Ryan Gosling) ನಟಿಸಿರುವ ಬಾರ್ಬಿ ಚಲನಚಿತ್ರವು ಜು. 21ರಂದು ಸಿನೆಮಾ ಮಂದಿರಗಳಲ್ಲಿ ತೆರೆಕಂಡಿದೆ. ಸುಮಾರು ಒಂದು ತಿಂಗಳಿನಿಂದ ಎಐ ಕಲಾವಿದರು ಗುಲಾಬಿ ಛಾಯೆಯ ಉನ್ಮಾದಕ್ಕೆ ಒಳಗಾಗಿದ್ದಾರೆ. ಸಿನಿಮಾ ತಾರೆಯರನ್ನು, ಪ್ರಸಿದ್ಧ ವ್ಯಕ್ತಿಗಳನ್ನು ‘ಬಾರ್ಬಿ’ ಪರಿಕಲ್ಪನೆಯಲ್ಲಿ ಎಐ (Artificial Intelligence) ಮೂಲಕ ಅರಳಿಸುತ್ತಲೇ ಇದ್ದಾರೆ. ಇದೀಗ ವೈರಲ್ ಆಗಿರುವ ಎಐ ಚಿತ್ರಗಳಲ್ಲಿ ಗ್ರಾಂಗ್ಸ್​ ಆಫ್ ವಾಸೇಪುರ್​ನ ಪಾತ್ರಧಾರಿಗಳಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by IFP (@ifp.world)

ಬಾರ್ಬಿ ಜಗತ್ತಿನಲ್ಲಿ ಗ್ಯಾಂಗ್ಸ್ ಆಫ್ ವಾಸೇಪುರ್​ನ ಪಾತ್ರಗಳು ಎಂಬ ಶೀರ್ಷಿಕೆಯಲ್ಲಿ ಈ ಪೋಸ್ಟ್​ ಅನ್ನು ಹಂಚಿಕೊಳ್ಳಲಾಗಿದೆ. ಎಐ ಕಲಾವಿದ ಕಲಾವಿದ ಶಾಹಿದ್ ಅವರ ಪರಿಕಲ್ಪನೆಯಲ್ಲಿ ಈ ಚಿತ್ರಗಳು ಹೊಮ್ಮಿವೆ. ನಿರ್ದೇಶಕ ಅನುರಾಗ ಕಶ್ಯಪ್​, ನವಾಜುದ್ದೀನ್ ಸಿದ್ದಿಕೀ, ಪಂಕಜ್​ ತ್ರಿಪಾಠಿ, ಹುಮಾ ಖರೇಷಿ, ಮನೋಜ್ ವಾಜಪೇಯಿ ಮತ್ತಿತರೇ ಪಾತ್ರಗಳನ್ನು ಬಾರ್ಬಿಯ ಗುಲಾಬಿಯಲ್ಲಿ ಮುಳುಗೇಳಿಸಲಾಗಿದೆ.  ಜೊತೆಗೆ ನಿಮ್ಮ ಇಷ್ಟದ ಪಾತ್ರಧಾರಿ ಯಾರು ಎಂದೂ ಈ ಪೋಸ್ಟ್​ನಡಿ ಕೇಳಲಾಗಿದೆ.

ಇದನ್ನೂ ಓದಿ : Viral: ನಿಮಗೆ ಬಾಯ್​ಫ್ರೆಂಡ್​ ಇದ್ದಾರಾ? ಡೆಲಿವರಿ ಏಜೆಂಟ್ ಗ್ರಾಹಕಿಯನ್ನು ಕೇಳಿದಾಗ

ಜು. 13ರಂದು ಹಂಚಿಕೊಂಡ ಈ ಪೋಸ್ಟ್​ ಅನ್ನು ಸುಮಾರು 9,000 ಜನರು ಲೈಕ್ ಮಾಡಿದ್ದಾರೆ. ನುರಾರು ಜನರು ತಮ್ಮ ನೆಚ್ಚಿನ ಪಾತ್ರಧಾರಿಗಳನ್ನು ಟ್ಯಾಗ್ ಮಾಡಿದ್ದಾರೆ. ಈ ಬಗ್ಗೆ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಒಂದು ಬಣ್ಣವು ಹೀಗೆ ಕಲಾಜಗತ್ತನ್ನು ಗುಂಗಿಗೆ ಕೆಡವುತ್ತದೆ ಎಂದರೆ ಬಣ್ಣಕ್ಕೆ ಎಂಥ ಅದ್ಭುತವಾದ ಶಕ್ತಿ ಇರಬಹುದಲ್ಲವೆ? ಎಂದು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Viral Video: ಮಗ ಪತ್ರಕರ್ತನಾದ! ಟಿವಿ ನೋಡಿ ಸಂಭ್ರಮಿಸುತ್ತಿರುವ ತಾಯಿ

ಬಾರ್ಬಿ ಮತ್ತು ಗುಲಾಬಿ ಇವು ಯಾರ ಮನಸ್ಸನ್ನೂ ಮೃದುಗೊಳಿಸಬಲ್ಲವು. ಬಾರ್ಬಿ ಅಥವಾ ಗುಲಾಬಿ ಬಣ್ಣದ ಬಗ್ಗೆ ಅನೇಕರಿಗೆ ಒಂದಿಲ್ಲಾ ಒಂದು ಆಳವಾದ ನೆನಪು ಇದ್ದೇ ಇರುತ್ತದೆ. ಹಾಗೆಯೇ ಬಾರ್ಬಿ ಟ್ರೆಂಡ್​​ನ ಜ್ವರ ಎಐ ಕಲಾವಿದರನ್ನೂ ಆವರಿಸಿಕೊಂಡಿದೆ. ಇದರ ಮಾಯೆಯಿಂದ ಅವರಿಗೂ ತಪ್ಪಿಸಿಕೊಳ್ಳಲಾಗಿಲ್ಲ!

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 5:44 pm, Wed, 26 July 23