Viral Video: ಎಐ ಬಾಲಿವುಡ್​ ಬಾರ್ಬಿ: ನಿಮ್ಮ ನೆಚ್ಚಿನ ನಟಿ ಇಲ್ಲಿದ್ದಾರೆಯೇ?

Barbie : ಅಂದಹಾಗೆ ಇವರೆಲ್ಲರೂ ಹೀಗೆ ಬಾರ್ಬಿಯಲ್ಲಿ ಕಂಗೊಳಿಸುತ್ತಿರುವುದಕ್ಕೆ ಕಾರಣವಿದೆ, ಜು. ಜುಲೈ 21 ರಂದು ಬಾರ್ಬಿ (Barbie) ಚಲನಚಿತ್ರ ಬಿಡುಗಡೆಯಾಗಲಿದೆ. ಹಾಗಾಗಿ ಎಐ ಕಲಾವಿದರಿಗೆಲ್ಲ ಬಾರ್ಬಿ ಫಿವರ್!

Viral Video: ಎಐ ಬಾಲಿವುಡ್​ ಬಾರ್ಬಿ: ನಿಮ್ಮ ನೆಚ್ಚಿನ ನಟಿ ಇಲ್ಲಿದ್ದಾರೆಯೇ?
ಎಐ ಕಲೆಯಲ್ಲಿ ಬಾಲಿವುಡ್​ ಬೆಡಗಿಯರಾದ ಐಶ್ವರ್ಯಾ ರೈ ಮತ್ತು ಕರೀನಾ ಕಪೂರ್
Follow us
ಶ್ರೀದೇವಿ ಕಳಸದ
|

Updated on: Jul 20, 2023 | 5:31 PM

Artificial Intelligence : ಪ್ರತೀ ದಿನ ಬೆಳಗಾಗುವುದರೊಳಗೆ ಹೊಸ ಹೊಸ ಅಚ್ಚರಿ ಕೊಡುತ್ತಿರುತ್ತಾರೆ ಎಐ ಕಲಾವಿದರು. ಇದೀಗ ಅನುಷ್ಕಾ ಶರ್ಮಾ, ಕರೀನಾ ಕಪೂರ್, ಐಶ್ವರ್ಯ ರೈ,  ಅಲಿಯಾ ಭಟ್​, ಪರಿಣೀತಾ ಛೋಪ್ರಾ, ದಿಶಾ ಪಠಾಣಿ, ದೀಪಿಕಾ ಪಡುಕೋಣೆ, ಸುಹಾನಾ ಖಾನ್​, ಕತ್ರೀನಾ ಕೈಫ್​, ಶ್ರದ್ಧಾ ಕಪೂರ್​ರನ್ನು ಬಾರ್ಬಿಯಂತೆ ಸೃಷ್ಟಿಸಿದ್ದಾರೆ. ಸೊಗಸಾದ ಕೇಶವಿನ್ಯಾಸ, ಪ್ರಸಾಧನ, ವಸ್ತವಿನ್ಯಾಸದಿಂದ ಆಕರ್ಷಕವಾಗಿ ಕಾಣಿಸುತ್ತಿದ್ದಾರೆ ಬಾಲಿವುಡ್​ನ ಈ ಬೆಡಗಿಯರು. ಅಂದಹಾಗೆ ಇವರೆಲ್ಲರೂ ಹೀಗೆ ಬಾರ್ಬಿಯಲ್ಲಿ ಕಂಗೊಳಿಸುತ್ತಿರುವುದಕ್ಕೆ ಕಾರಣವಿದೆ, ಜು. ಜುಲೈ 21 ರಂದು ಬಾರ್ಬಿ (Barbie) ಚಲನಚಿತ್ರ ಬಿಡುಗಡೆಯಾಗಲಿದೆ. ಹಾಗಾಗಿ ಎಐ ಕಲಾವಿದರಿಗೆಲ್ಲ ಬಾರ್ಬಿ ಫಿವರ್!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Sahid SK (@sahixd)

ಗ್ರೇಟಾ ಗೆರ್ವಿಂಗ್ (Greta Gerwig) ನಿರ್ದೇಶನದಲ್ಲಿ ಬಾರ್ಬಿ ಚಿತ್ರ ತಯಾರಾಗಿದೆ. ಅರಿಯಾನಾ ಗ್ರೀನ್​ಬ್ಲಾಟ್, ಕಿಂಗ್ಸ್​ಲೆ ಬೆನ್​ ಆದಿರ್, ರಿಯಾನ್​ ಗೊಸ್ಲಿಂಗ್​ ಮತ್ತು ಎಮ್ಮಾ ಮ್ಯಾಕಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಬಾಲಿವುಡ್​ನ ಬೆಡಗಿಯರನ್ನು ಎಐಮಯಗೊಳಿಸಿದ್ದು ಕಲಾವಿದ ಸಾಹಿದ್. ಈಗಾಗಲೇ ಇವರ ಈ ಪೋಸ್ಟ್​ ಅನ್ನು 20,000 ಕ್ಕೂ ಹೆಚ್ಚು ಜನರು ನೋಡಿದ್ದಾರೆ. 3,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಅನೇಕರು ತಮ್ಮ ನೆಚ್ಚಿನ ನಟಿಯರನ್ನು ಗುರುತಿಸಿ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ಅಜ್ಜಅಜ್ಜಿಯ ನೃತ್ಯ; ಸಂಗಾತಿ ಎಂದರೆ ನಿಮ್ಮೊಂದಿಗೆ ಪ್ರತೀ ಕ್ಷಣವೂ ಜೀವಿಸುತ್ತಿರಬೇಕು

ಐಶ್ವರ್ಯಾ ಮಾತ್ರ ಬಾರ್ಬಿಯಂತೆ ಕಾಣುತ್ತಿದ್ದಾಳೆ ಎಂದಿದ್ದಾರೆ ಒಬ್ಬರು. ನಾನು ಜಾಕ್ವೆಲೀನ್​ಳನ್ನು ಹುಡುಕುತ್ತಿದ್ದೆ ಎಂದಿದ್ದಾರೆ ಮತ್ತೊಬ್ಬರು. ನನ್ನ ನೆಚ್ಚಿನ ಕಾಜೋಲ್​ ಎಲ್ಲಿ ಎಂದಿದ್ದಾರೆ ಮಗದೊಬ್ಬರು. ಮಾಧುರಿಯನ್ನೇಕೆ ಬಿಟ್ಟಿದ್ದೀರಿ ಎಂದು ಕೇಳಿದ್ದಾರೆ ಇನ್ನೊಬ್ಬರು. ಹೀಗೆ ಅನೇಕರು ತಮ್ಮ ನೆಚ್ಚಿನ ನಟಿಯರು ಇಲ್ಲಿ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : Viral Video: ಮೊಬೈಲ್​ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಜಲಪಾತಕ್ಕೆ ಹಾರಿದ ಶಾಲಾಬಾಲಕಿ

ಸುಹಾನಾ ಬಾಲಿವುಡ್ ಬೆಡಗಿಯೆ? ಎಂದು ಕೇಳಿದ್ದಾರೆ ಒಬ್ಬರು. ನಿಜಕ್ಕೂ ಚೆನ್ನಾಗಿವೆ ಈ ಚಿತ್ರಗಳು ನೀವು ಯಾವ ಆ್ಯಪ್ ಉಪಯೋಗಿಸಿದ್ದೀರಿ ಎಂದು ಕೇಳಿದ್ದಾರೆ ಮತ್ತೊಬ್ಬರು. ಸಾಮಾನ್ಯವಾಗಿ ಎಐ ಕಲಾವಿದರು ಮಿಡ್​ ಜರ್ನಿ (Mid Journey), ಪ್ರೋಕ್ರಿಯೇಟ್​ ಮತ್ತು ಎಡಿಟಿಂಗ್​ಗಾಗಿ ಫೋಟೋಶಾಪ್​ ಉಪಯೋಗಿಸಿ ಎಐ ಕಲೆಯನ್ನು ಸೃಷ್ಟಿಸುತ್ತಾರೆ.

ಎಐ ಕಲೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ