Viral Video: ಮೊಬೈಲ್​ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಜಲಪಾತಕ್ಕೆ ಹಾರಿದ ಶಾಲಾಬಾಲಕಿ

Chhattisgarh : ಅಲ್ಲಿದ್ದವರು ಕೂಗಿಕೊಂಡರೂ ಲೆಕ್ಕಿಸದೇ ಈಕೆ 90 ಅಡಿಯಿಂದ ಧುಮುಕಿದ್ದಾಳೆ. ಪೋಷಕರು ಗದರಿದ್ದಕ್ಕೆ ಈಕೆ ಈ ಕೃತ್ಯಕ್ಕೆ ಮುಂದಾಗಿದ್ದಾಳೆ ಎನ್ನುವುದನ್ನು ಪೊಲೀಸರು ಸಾಬೀತುಪಡಿಸಿದ್ದಾರೆ. ಅದೃಷ್ಟಕ್ಕೆ ಬದುಕುಳಿದಿದ್ದಾಳೆ.

Viral Video: ಮೊಬೈಲ್​ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಜಲಪಾತಕ್ಕೆ ಹಾರಿದ ಶಾಲಾಬಾಲಕಿ
ಛತ್ತೀಸಗಡದ ಚಿತ್ರಕೋಟೆ ಜಲಪಾತದಲ್ಲಿ ಶಾಲಾಬಾಲಕಿ ಬೀಳುತ್ತಿರುವ ದೃಶ್ಯ
Follow us
|

Updated on:Jul 20, 2023 | 3:07 PM

Mobile : ಮೊಬೈಲ್​ ನೋಡಬೇಡ ಎಂದು ಮಕ್ಕಳನ್ನು ಗದರುವಾಗಲೂ ಪೋಷಕರ ಕೈಯಲ್ಲಿ ಮೊಬೈಲ್​ ಇದ್ದೇ ಇರುತ್ತದೆ. ಹೀಗಿದ್ದಾಗ ಪೋಷಕರು ಹೇಳಿದ್ದರ ಕಡೆ ಮಕ್ಕಳ ಗಮನವಾದರೂ ಹೇಗೆ ಹೋಗಬೇಕು? ಇದು ಇಂದಿನ ವಿಪರ್ಯಾಸ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಶಾಲಾಬಾಲಕಿಯೊಬ್ಬಳ ಪೋಷಕರು, ಜಾಸ್ತಿ ಮೊಬೈಲ್​ ಬಳಸಬೇಡ ಎಂದು ಆಕೆಗೆ ಹೇಳಿದ್ದಕ್ಕೆ, ಮನನೊಂದು 90 ಅಡಿ ಇರುವ ಈ ಜಲಪಾತದಿಂದ ಹಾರಿ ಪ್ರಾಣ ಕಳೆದುಕೊಳ್ಳಲು ಪ್ರಯತ್ನಿಸಿದ್ದಾಳೆ. ಹೀಗಾದರೆ ಹೇಗೆ? ಮಕ್ಕಳಿಗೆ ತಿಳಿಹೇಳುವುದು ಬಹಳೇ ಕಷ್ಟ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಛತ್ತೀಸ್‌ಗಢದ ಬಸ್ತಾರ್‌ನಲ್ಲಿರುವ ಚಿತ್ರಕೋಟೆ ಎಂಬ ಜಲಪಾತದಲ್ಲಿ ಈ ಘಟನೆ ನಡೆದಿದೆ. ಈ ಬಾಲಕಿ ಹೀಗೆ ಜಲಪಾತಕ್ಕೆ ಹಾರುವ ದೃಶ್ಯವನ್ನು ನೋಡಿದ ಯಾರಿಗೂ ಭಯವಾಗುತ್ತದೆ. ಅವರವರ ಮನೆಯ ಮಕ್ಕಳ ಬಗ್ಗೆ ಆತಂಕವಾಗುತ್ತದೆ. ಆದರೆ ಅದೃಷ್ಟವಶಾತ್​ ಈ ಬಾಲಕಿ ಬದುಕುಳಿತಿದ್ದಾಳೆ! ಈ ವಿಡಿಯೋ ಅನ್ನು ಸುಶ್ರೀ ಸಂಗೀತಾ ಎಂಬ ಪತ್ರಕರ್ತೆ ಟ್ವೀಟ್ ಮಾಡಿದ್ದಾರೆ. ‘ಅತಿಯಾಗಿ ಮೊಬೈಲ್​ ಬಳಸಬೇಡ ಎಂದು ಪೋಷಕರು ಗದರಿದ್ದಕ್ಕೆ ಈ ಹುಡುಗಿ ಛತ್ತೀಸ್​ಗಢದ ಚಿತ್ರಕೋಟೆಯ ಜಲಪಾತಕ್ಕೆ ಹಾರಿದ್ದಾಳೆ. ಮೊಬೈಲ್​ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಸ್ಮಾರ್ಟ್​​ಫೋನ್​​ಗಳಿಂದ ನಿಮ್ಮ ಮಕ್ಕಳನ್ನು ದೂರವಿಡಿ’ ಎಂದು ಆಕೆ ಒಕ್ಕಣೆ ಬರೆದಿದ್ದಾರೆ.

ಇದನ್ನೂ ಓದಿ : Viral Video: ನಮ್ಮ ದೇಶದಲ್ಲಿ ಇಂಥ ಐಡಿಯಾ ಇತ್ತೇ, ಇದೆಯೇ? ನೆಟ್ಟಿಗರ ಜಗಳ ಬಿಡಿಸಿ

ಮಂಗಳವಾರ ಈ ಘಟನೆ ನಡೆದಿದೆ. ಜಲಪಾತಕ್ಕೆ ಧುಮುಕುವ ಮೊದಲು ಆಕೆ ಸ್ವಲ್ಪ ಹೊತ್ತು ಅದರ ಅಂಚಿನಲ್ಲಿ ಓಡಾಡಿದ್ದಾಳೆ. ಇದನ್ನು ನೋಡಿದ ಸ್ಥಳೀಯರು/ಪ್ರವಾಸಿಗರು, ಆಕೆಯನ್ನು ಕೂಗಿ ನಿಲ್ಲುವಂತೆ ಹೇಳಿದ್ದಾರೆ.  ಆದರೂ ಆಕೆ ಧುಮುಕಿಯೇಬಿಟ್ಟಿದ್ದಾಳೆ. ಚಿತ್ರಕೋಟೆ ಜಲಪಾತದ ಮೂಲ ಇಂದ್ರಾವತಿ ನದಿ. ಬಸ್ತಾರ್​ನ ಜಗದಲ್​ಪುರದಿಂದ 38.ಕೀಮೀ ದೂರದಲ್ಲಿ ಈ ಜಲಪಾತವಿದೆ. ಇದನ್ನು ಮಿನಿ ನಯಾಗರ ಜಲಪಾತ ಎಂದೂ ಕರೆಯುತ್ತಾರೆ.

ವಿಷಯ ತಿಳಿದ ಪೊಲೀಸರು ತನಿಖೆ ನಡೆಸಿದ್ದಾರೆ. ಮೊಬೈಲ್​ ಬಳಕೆಯ ವಿಷಯವಾಗಿ ಪೋಷಕರು ಗದರಿದ್ದರಿಂದ  ಆಕೆ ಈ ಕೃತ್ಯಕ್ಕೆ ಮುಂದಾಗಿದ್ದಾಳೆ ಎನ್ನುವುದು ಸಾಬೀತಾಗಿದೆ. ಕೊನೆಗೆ ಆಕೆಯನ್ನು ಪೋಷಕರಿಗೆ ಒಪ್ಪಿಸಲಾಗಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:05 pm, Thu, 20 July 23

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್