Viral Video: ಮಗಳು ವೈದ್ಯೆಯಾದ ಸುದ್ದಿ ಕೇಳಿ ಕಣ್ಣೀರಾದ ಅಪ್ಪ

Father Daughter : ಅಪ್ಪಾ, ನೀವು ನನಗೆ ಸ್ವಲ್ಪ ಹಣ ಕಳಿಸಬೇಕಿತ್ತಲ್ಲ. ಆಗಲಿ ಕಳಿಸುವೆ. ನೀವು ನನಗೆ ಹಣ ಕಳಿಸಿದ ಮೇಲೆ ಸ್ಕ್ರೀನ್ ಮೇಲೆ ನನ್ನ ಹೆಸರು ಏನೆಂದು ಬರುತ್ತದೆ? ಸನಾ ಅಶ್ರಫ್​. ಅಲ್ಲ... ಮತ್ತೆ?

Viral Video: ಮಗಳು ವೈದ್ಯೆಯಾದ ಸುದ್ದಿ ಕೇಳಿ ಕಣ್ಣೀರಾದ ಅಪ್ಪ
ಡಾ. ಸನಾ ಅಶ್ರಫ್
Follow us
ಶ್ರೀದೇವಿ ಕಳಸದ
|

Updated on: Jul 20, 2023 | 12:41 PM

Doctor : ಮಕ್ಕಳು ಇಷ್ಟಪಟ್ಟ ಕೋರ್ಸ್​ ಕಲಿಯಲು ಅನುವು ಮಾಡಿಕೊಟ್ಟು, ನೌಕರಿ ಹಿಡಿದು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವಂತಾದರೆ ಸಾಕು ಎನ್ನುವುದನ್ನೇ ಪ್ರತೀ ತಂದೆತಾಯಿಯೂ ಬಯಸುತ್ತಾರೆ. ಹಾಗಾಗಿ ಮಕ್ಕಳ ಯಶಸ್ಸಿಗಿಂತ (Success) ದೊಡ್ಡ ಖುಷಿ ಬೇರೆ ಏನಿದೆ ಅವರಿಗೆ? ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಮಗಳೊಬ್ಬಳು ತನ್ನ ತಂದೆಗೆ ಫೋನ್ ಮಾಡುತ್ತಾಳೆ. ಅತ್ತಕಡೆಯಿಂದ ಅಪ್ಪನ ಧ್ವನಿ. ಉಭಯಕುಶಲೋಪರಿಯ ನಂತರ ನನಗೆ ಸ್ವಲ್ಪ ಹಣ ಬೇಕಿತ್ತು ಕಳಿಸುವಿರಾ ಎನ್ನುತ್ತಾಳೆ. ಅಪ್ಪ ಆಗಲಿ ಎನ್ನುತ್ತಾನೆ. ಆದರೆ ನೀವು ಹಣ ಕಳಿಸಿದ ಮೇಲೆ ಸ್ಕ್ರೀನ್​ ಮೇಲೆ ನನ್ನ ಹೆಸರು ಏನೆಂದು ಬರುತ್ತದೆ ಎಂದು ಕೇಳುತ್ತಾಳೆ. ಮುಂದಿನದನ್ನು ಈ ವಿಡಿಯೋದಲ್ಲಿ ನೀವೇ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Dr.Hare (@dr_hare_021)

ನಾನು ಈಗ ಡಾಕ್ಟರ್​ ಸನಾ ಅಶ್ರಫ್​! ಪರೀಕ್ಷೆಯ ಫಲಿತಾಂಶ ಬಂದಿದೆ ಎಂದು ಮಗಳು ಹೇಳಿದಾಗ ಅತ್ತಕಡೆಯಿದ್ದ ತಂದೆ ಭಾವುಕರಾಗುತ್ತಾರೆ. ‘ನನ್ನ ಮೇಲೆ ಹೆಚ್ಚು ವಿಶ್ವಾಸ ಇಟ್ಟಿದ್ದಕ್ಕಾಗಿ ಧನ್ಯವಾದ ಅಪ್ಪಾ. ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತ ನನ್ನನ್ನು ಯಾವಾಗಲೂ ಎತ್ತಿ ಹಿಡಿಯುತ್ತ ಬಂದಿದ್ದೀರಿ. ನಿಮಗೆ ಅಲ್ಲಾಹ್​ ಒಳ್ಳೆಯದನ್ನು ಮಾಡಲಿ’ ಎಂಬ ನೋಟ್​ ಬರೆದು ಸನಾ ಈ ಪೋಸ್ಟ್ ಮಾಡಿದ್ದಾರೆ.

ಇದನ್ನೂಓದಿ : Viral Video: ನೀರಿನೊಳಗೆ ಹಾಕಿದ ಮೇಲೂ ನೀ ಯಾಕೆ ಈಜುತ್ತಿಲ್ಲ, ಒಮ್ಮೆ ಮಿಸುಕಾಡು ಪ್ಲೀಸ್​

ಈ ವಿಡಿಯೋ ಅನ್ನು ಈತನಕ ಎರಡು ಮಿಲಿಯನ್​ ಜನರು ನೋಡಿದ್ದಾರೆ. 2.5 ಲಕ್ಷಕ್ಕಿಂತಲೂ ಹೆಚ್ಚು ಜನ ಲೈಕ್​ ಮಾಡಿದ್ದಾರೆ. ಸಾವಿರಾರು ಜನರು ಡಾ. ಸನಾಗೆ ಶುಭ ಹಾರೈಸಿದ್ದಾರೆ. ಒಂದು ಸೆಕೆಂಡ್​ ನಾನು ಮೂಕನಾದೆ, ನಾನೀಗ ಅಳುತ್ತಿಲ್ಲ ಎಂದು ಒಬ್ಬರು ಹೇಳಿದ್ದಾರೆ. ಇಂತ ಮಗಳನ್ನು ಪಡೆದ ತಂದೆಗೂ ಅಭಿನಂದನೆ ಎಂದಿದ್ದಾರೆ ಕೆಲವರು. ನೀಟ್​ ಪರೀಕ್ಷೆ ಬರೆದ ನನ್ನ ಕಣ್ಣಲ್ಲಿಯೂ ನೀರು ಇಳಿಯುತ್ತಿದೆ, ಸದ್ಯದಲ್ಲೇ ನನ್ನ ಕನಸನ್ನು ಈಡೇರಿಸಿಕೊಳ್ಳುತ್ತೇನೆ, ಅಲ್ಲಾಹ್ ಜೊತೆಗಿದ್ದಾನೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ