AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

Cat : ಗಂಡಾಲ್ಫ್ ಇಷ್ಟೊಂದು ಚಿತ್ತಗೊಟ್ಟು ಅಡುಗೆ ಮಾಡುವುದನ್ನು ನೋಡುತ್ತಿದ್ದರೆ...

Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
ಶೆಫ್​ ಕ್ಯಾಟ್
Follow us
TV9 Web
| Updated By: ಶ್ರೀದೇವಿ ಕಳಸದ

Updated on: Aug 15, 2022 | 2:48 PM

Viral Video : ಮನುಷ್ಯ-ಮನುಷ್ಯರ ನಡುವಿನ ನಂಬಿಕೆಯ ಸೇತುವೆ ಮುರಿದು ಬೀಳುತ್ತ ಹೋದಷ್ಟೂ ಹೆಚ್ಚೆಚ್ಚು ಪ್ರಾಣಿ-ಪಕ್ಷಿಗಳೊಂದಿಗೆ ಮನುಷ್ಯ ಜೀವಿಸಲು ಬಯಸುತ್ತಿದ್ದಾನೆ. ಈಗೀಗಲಂತೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ವಿಡಿಯೋ ನೋಡಿದರೆ, ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಮುದ್ದಿಸುವ, ಪ್ರೀತಿಸುವ, ಕಾಳಜಿ ತೆಗೆದುಕೊಳ್ಳುವ ಪೆಟ್​ ಪೇರೆಂಟ್​ಗಳು ನಮ್ಮ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಳ್ಳುತ್ತಿದ್ದಾರೆ ಎಂದೆನ್ನಿಸುತ್ತಿದೆ. ವಿದೇಶಗಳಲ್ಲಿ ಅಷ್ಟೇ ಯಾಕೆ ನಮ್ಮ ದೇಶದಲ್ಲಿಯೂ ಕೆಲ ಕಾರ್ಪೊರೇಟ್ ಕಂಪೆನಿಗಳು ತಮ್ಮ ಆಫೀಸುಗಳಿಗೆ ಬೆಕ್ಕು-ನಾಯಿಗಳನ್ನು ಕರೆದೊಯ್ಯಲು ಅನುಮತಿ ಇದೆ. ಏಕೆಂದರೆ ಅವೂ ಮಕ್ಕಳಂತೆಯೆ ತಾನೆ? ಮನೆಯಲ್ಲಿದ್ದಾಗಲಂತೂ ಅವುಗಳನ್ನು ಬಿಟ್ಟಿರುವುದು ದೂರದ ಮಾತೇ ಎನ್ನುವುದಕ್ಕೆ ಸಾಕ್ಷಿ ಈ ವಿಡಿಯೋ. ಇಲ್ಲಿ ನೋಡಿ ಗಂಡಾಲ್ಫ್​ ಎಂಬ ಬೆಕ್ಕಿಗೆ ಅಡುಗೆ ಮಾಡುವುದನ್ನು ತೋರಿಸುತ್ತಿದ್ದಾರೆ. ಅದು ಅಷ್ಟೇ ಚಿತ್ತಕೊಟ್ಟು ಎಲ್ಲವನ್ನೂ ನೋಡುತ್ತಿದೆ. ಶೆಫ್​ ಇನ್​ ಟ್ರೇನಿಂಗ್​ ಎಂಬ ಶೀರ್ಷಿಕೆಯಡಿ, ಇನ್​ಡೋರ್​ ಔಟ್​ಡೋರ್​ ಕ್ಯಾಟ್​ ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by IndoorOutdoorKat (@indoor_outdoor_kat)

ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ ಗಂಡಾಲ್ಫ್​ ಈ ವಿಡಿಯೋಗೆ 3 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಲೈಕ್ಸ್​ ಪಡೆದಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಜಾಫರ್​ ಎಕ್ಸ್​ಪ್ರೆಸ್​ ಹೈಜಾಕ್ ವಿಡಿಯೋ ಬಿಡುಗಡೆ ಮಾಡಿದ ಬಿಎಲ್​ಎ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಎಷ್ಟು ನಷ್ಟವಾಗಿದೆ? ವಿಶ್ವನಾಥ
ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ ಮಗಳ ಸಾಧನೆ; ತಂದೆಯಾಗಿ ಹೆಮ್ಮೆಯ ಕ್ಷಣ
ಸಂಗೀತ ಕ್ಷೇತ್ರದಲ್ಲಿ ಅರ್ಜುನ್ ಜನ್ಯ ಮಗಳ ಸಾಧನೆ; ತಂದೆಯಾಗಿ ಹೆಮ್ಮೆಯ ಕ್ಷಣ
ರಾತ್ರಿ ಸುರಿದ ಮಳೆಯಿಂದ ನಡುಗಡ್ಡೆಯಾಗಿ ಮಾರ್ಪಟ್ಟಿರುವ ಸಾಯಿ ಲೇಔಟ್
ರಾತ್ರಿ ಸುರಿದ ಮಳೆಯಿಂದ ನಡುಗಡ್ಡೆಯಾಗಿ ಮಾರ್ಪಟ್ಟಿರುವ ಸಾಯಿ ಲೇಔಟ್
ನಗರದ ಲ್ಯಾಂಡ್ ಮಾರ್ಕ್​ ಎನಿಸಿಕೊಂಡಿರುವ ಸ್ಟೇಡಿಯಂ ಸ್ಥಿತಿ ಹೇಗಿದೆ ನೋಡಿ
ನಗರದ ಲ್ಯಾಂಡ್ ಮಾರ್ಕ್​ ಎನಿಸಿಕೊಂಡಿರುವ ಸ್ಟೇಡಿಯಂ ಸ್ಥಿತಿ ಹೇಗಿದೆ ನೋಡಿ
ಬದುಕಿರುವವರು ಸತ್ತಂತೆ ಕನಸಿನಲ್ಲಿ ಬಂದರೆ ಏನರ್ಥ? ವಿಡಿಯೋ ನೋಡಿ
ಬದುಕಿರುವವರು ಸತ್ತಂತೆ ಕನಸಿನಲ್ಲಿ ಬಂದರೆ ಏನರ್ಥ? ವಿಡಿಯೋ ನೋಡಿ
ನೆಲಮಂಗಲ: ಹೆದ್ದಾರಿ ಜಲಾವೃತ, ನೀರಿನಲ್ಲಿ ಬಂದ ಬೈಕ್ ಸವಾರನ ಸ್ಥಿತಿ ನೋಡಿ!
ನೆಲಮಂಗಲ: ಹೆದ್ದಾರಿ ಜಲಾವೃತ, ನೀರಿನಲ್ಲಿ ಬಂದ ಬೈಕ್ ಸವಾರನ ಸ್ಥಿತಿ ನೋಡಿ!