Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

Viral News: ಕನ್ನಡದ ಉಪ್ಪಿದಾದಾ ಎಂಬಿಬಿಎಸ್​ನಲ್ಲೂ ಇಂತಹದ್ದೇ ಸನ್ನಿವೇಶವಿದೆ. ಒಂದು ಚಿತ್ರದಲ್ಲಿ ಮೂಡಿಬಂದ ಈ ಸನ್ನಿವೇಶವನ್ನೇ ಇದೀಗ ವ್ಯಕ್ತಿಯೊಬ್ಬರು ಬಂಡವಾಳ ಮಾಡಿಕೊಂಡಿದ್ದಾರೆ. ಅಂದರೆ ಅಪ್ಪುಗೆಯ ವ್ಯವಹಾರನ್ನೇ ಪ್ರಾರಂಭಿಸಿ ಎಲ್ಲರನ್ನು ಸಂತೈಸಲು ಹೊರಟಿದ್ದಾನೆ.

Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
'Professional Cuddler'
Follow us
| Updated By: ಝಾಹಿರ್ ಯೂಸುಫ್

Updated on: Jul 16, 2022 | 4:24 PM

2003 ರಲ್ಲಿ ತೆರೆಕಂಡಿದ್ದ ಸಂಜಯ್ ದತ್ ಅಭಿನಯದ ‘ಮುನ್ನಾಭಾಯಿ ಎಂಬಿಬಿಎಸ್’ ಸಿನಿಮಾ ನಿಮಗೆ ನೆನಪಿದೆಯೇ? ಆ ಚಿತ್ರದಲ್ಲಿ ನಾಯಕ ‘ಮುನ್ನಾ’ ಎಲ್ಲರಿಗೂ ‘ಜಾದು ಕಿ ಜಪ್ಪಿ’ ಕೊಡುತ್ತಾ ಸಂತೈಸುವ ಸನ್ನಿವೇಶವೊಂದಿತ್ತು. ಅಂದರೆ ಅಪ್ಪುಗೆಯು ಜನರ ಮೂಡ್ ಬದಲಾಯಿಸಲು ಮತ್ತು ಭಾತೃತ್ವ ಸುಧಾರಿಸಲು ಉತ್ತಮ ವಿಧಾನ ಎಂದು ಈ ಚಿತ್ರದ ಮೂಲಕ ನಿರ್ದೇಶಕ ರಾಜ್​ಕುಮಾರ್ ಹಿರಾನಿ ತಿಳಿಸಿದ್ದರು. ಇದೇ ಚಿತ್ರದ ರಿಮೇಕ್ ಕನ್ನಡದ ಉಪ್ಪಿದಾದಾ ಎಂಬಿಬಿಎಸ್​ನಲ್ಲೂ ಇಂತಹದ್ದೇ ಸನ್ನಿವೇಶವಿದೆ. ಒಂದು ಚಿತ್ರದಲ್ಲಿ ಮೂಡಿಬಂದ ಈ ಸನ್ನಿವೇಶವನ್ನೇ ಇದೀಗ ವ್ಯಕ್ತಿಯೊಬ್ಬರು ಬಂಡವಾಳ ಮಾಡಿಕೊಂಡಿದ್ದಾರೆ. ಅಂದರೆ ಅಪ್ಪುಗೆಯ ವ್ಯವಹಾರನ್ನೇ ಪ್ರಾರಂಭಿಸಿ ಎಲ್ಲರನ್ನು ಸಂತೈಸಲು ಹೊರಟಿದ್ದಾನೆ. ಇಲ್ಲಿ ವಿಶೇಷ ಎಂದರೆ ಪ್ರತಿ ಅಪ್ಪುಗೆಗೂ ದುಡ್ಡು ಕೊಡಲೇಬೇಕು.

ಹೌದು, ಅಪ್ಪುಗೆಯ ಮೂಲಕವೇ ಲಕ್ಷ ಸಂಪಾದಿಸುತ್ತಿರುವ ವ್ಯಕ್ತಿಯ ಹೆಸರು ಟ್ರೆವರ್ ಹೂಟನ್. ಮೂಲತಃ ಕೆನಡಾ ನಿವಾಸಿಯಾಗಿರುವ ಹೂಟನ್ ಬ್ರಿಟನ್​ನಲ್ಲಿ ವೃತ್ತಿಪರ ಅಪ್ಪುಗೆಯ ವ್ಯವಹಾರ (Britain man professional cuddling business) ಪ್ರಾರಂಭಿಸಿದ್ದಾನೆ. ‘ಎಂಬ್ರೇಸ್ ಕನೆಕ್ಷನ್’ ಹೆಸರಿನ ಈ ಹಗ್ ಥೆರಪಿಯ ಸೇವೆಯ ಮೂಲಕ ಹೂಟನ್ ಜನರ ಮಾನಸಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿರತಾಗಿದ್ದಾರೆ. ಅಂದರೆ ಮಾತಿನಲ್ಲಿ ಹೇಳಲಾಗದ ಭಾವನೆಗಳನ್ನು, ಮಾನಸಿಕ ಒತ್ತಡವನ್ನು, ಸೂಕ್ಷ್ಮ ವಿಚಾರಗಳನ್ನು ಕೇವಲ ಅಪ್ಪುಗೆಯ ಮೂಲಕವೇ ಅರ್ಥೈಸಿಕೊಳ್ಳಬಹುದು. ಹೀಗಾಗಿ ಹೂಟರ್ ಹಗ್ ಥೆರಪಿಯನ್ನು ಪ್ರಾರಂಭಿಸಿದ್ದಾರೆ.

ಅತ್ತ ನಗರ ಜೀವನದಿಂದ ಬೆಸತ್ತಿದ್ದರೆ, ಖಿನ್ನತೆಯಿಂದ ಕುಗ್ದಿದ್ದರೆ, ಆತಂಕಗೊಂಡಿದ್ದರೆ ಅಥವಾ ಒಂಟಿತನ ಕಾಡುತ್ತಿದ್ದರೆ ಟ್ರೆವರ್ ಹೂಟನ್ ಅವರನ್ನು ಸಂಪರ್ಕಿಸಬಹುದು. ಹೀಗೆ ಸಂಪರ್ಕಿಸಿದರೆ, ಹೂಟನ್ ಬಂದು ಅವರನ್ನು ಅಪ್ಪುಗೆಯೊಂದಿಗೆ ಸಮಾಧಾನಪಡಿಸಿ ಸಂತೈಸುತ್ತಾರೆ. ಅಲ್ಲದೆ ಅವರ ಎಲ್ಲಾ ರೀತಿಯ ನೋವಿಗೂ ಕಿವಿಯಾಗುತ್ತಾರೆ.

ಇದನ್ನೂ ಓದಿ
Image
Lady Singham: ಕೊನೆಗೂ ಲೇಡಿ ಸಿಂಗಮ್ ಅರೆಸ್ಟ್​..!
Image
Viral Video: ಒಳಗೆ ಸೇರಿದರೆ ಗುಂಡು…ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಯುವತಿಯ ರಂಪಾಟ..!
Image
Crime Story: ಪೊಲೀಸ್ ಮಗ, ಎಲ್​ಎಲ್​ಬಿ ಪದವೀಧರ: ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್?
Image
Crime Story: ಕಿಂಗ್ ಆಫ್ ಕ್ರೈಮ್: ದಾವೂದ್ ಇಬ್ರಾಹಿಂಗೆ ನಡುಕ ಹುಟ್ಟಿಸಿದ್ದ ಸ್ಲಂ ಡಾನ್

ಹೀಗೆ ಜನರಿಗೆ ಅಪ್ಪುಗೆಯೊಂದಿಗೆ ಪ್ರೀತಿ ಹಂಚಲು ಹೂಟನ್ ಇಂತಿಷ್ಟು ಮೊತ್ತ ಎಂದು ಚಾರ್ಜ್ ಮಾಡುತ್ತಾರೆ. ಅಚ್ಚರಿ ಎಂದರೆ ಎಂಬ್ರೇಸ್ ಕನೆಕ್ಷನ್ ಪ್ರತಿ ಒಂದು ಗಂಟೆಯ ಅಪ್ಪುಗೆಗೆ ನಿಗದಿಪಡಿಸಿರುವ ಮೊತ್ತ 7100 ರೂ. ಅಂದರೆ ಹೂಟನ್ ಬೆಚ್ಚನೆಯ ಅಪ್ಪುಗೆಯೊಂದಿಗೆ ಪ್ರೀತಿಯ ಮಾತುಗಳನ್ನಾಡುತ್ತಾ ಪ್ರತಿ ಗಂಟೆಗೆ 7 ಸಾವಿರಕ್ಕೂ ಅಧಿಕ ಮೊತ್ತ ಪಡೆಯುತ್ತಿದ್ದಾರೆ.

ಈಗ ನಿಮಗೂ ಇಂತಹದೊಂದು ವೃತ್ತಿಯನ್ನು ಆರಂಭಿಸಿದರೆ ಹೇಗೆ ಎಂದು ಅನಿಸಿರಬಹುದು. ಆದರೆ ಅದಕ್ಕೂ ಮುನ್ನ ಮನಶಾಸ್ತ್ರ ಗೊತ್ತಿರಬೇಕಾದ ಅನಿವಾರ್ಯತೆ ಇದೆ ಎಂಬುದು ಕೂಡ ತಿಳಿದಿರಬೇಕು. ಏಕೆಂದರೆ ಇಂತಹದೊಂದು ಬಿಸಿನೆಸ್ ಶುರು ಮಾಡುವ ಸುಮಾರು 10 ವರ್ಷಗಳ ಹಿಂದೆ ಮಾನವ ಸಂಬಂಧಗಳು ಮತ್ತು ಸಂಪರ್ಕಗಳ ಕುರಿತಾಗಿ ಹೂಟರ್ ಅಧ್ಯಯನ ನಡೆಸಿದ್ದರು. ಈ ವೇಳೆ ಜನರ ಮನಸ್ಥಿತಿ ಹೇಗಿರುತ್ತೆ, ಅವರನ್ನು ಹೇಗೆ ಸಂತೈಸಬೇಕೆಂದನ್ನು ಕರಗತ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಟ್ರೆವರ್ ಹೂಟರ್​ನ ಅಪ್ಪುಗೆಗಾಗಿ ಬ್ರಿಟನ್ ನಿವಾಸಿಗಳು ಗಂಟೆಗೆ 7 ಸಾವಿರಕ್ಕೂ ಅಧಿಕ ಮೊತ್ತ ಪಾವತಿಸುತ್ತಿರುವುದು. ಅಂದಹಾಗೆ ನಿಮಗೂ ಕೂಡ ಬೆಚ್ಚನೆಯ ಅಪ್ಪುಗೆಯ ಮೂಲಕ ಜನರನ್ನು ಸಂತೈಸುವ ಕಲೆ ಗೊತ್ತಿದ್ರೆ ಟ್ರೈ ಮಾಡಿ ನೋಡಿ. ಕ್ಲಿಕ್ ಆದ್ರೂ ಆಗಬಹುದು.

ತಾಜಾ ಸುದ್ದಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ