Crime Story: ಪೊಲೀಸ್ ಮಗ, ಎಲ್​ಎಲ್​ಬಿ ಪದವೀಧರ: ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್?

Who is Lawrence Bishnoi: ಕಾಲೇಜಿನಲ್ಲಿದ್ದಾಗಲೇ ವಿದ್ಯಾರ್ಥಿ ಸಂಘದ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ಬಿಷ್ಣೋಯ್ ವಿರುದ್ದ ಸಣ್ಣ ಪುಟ್ಟ ಪ್ರಕರಣಗಳು ದಾಖಲಾಗಿದ್ದವು.

Crime Story: ಪೊಲೀಸ್ ಮಗ, ಎಲ್​ಎಲ್​ಬಿ ಪದವೀಧರ: ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್?
Lawrence Bishnoi
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jun 02, 2022 | 5:36 PM

ಎಲ್ಲಾ ಕೊಲೆಯ ಹಿಂದೆಯೂ ಒಂದು ಕಥೆ ಇರುತ್ತೆ…ಆ ಕೊಲೆಗಡುಕನಿಗೂ ಒಂದು ಕಹಾನಿ ಇರುತ್ತೆ…ಲಾರೆನ್ಸ್​ ಬಿಷ್ಣೋಯ್, ಈ ಹೆಸರು ನೀವು ಕಳೆದ ಕೆಲ ದಿನಗಳಿಂದ ಕೇಳಿರುತ್ತೀರಿ. ಅದರಲ್ಲೂ ಕಳೆದ ನಾಲ್ಕೈದು ದಿನಗಳಲ್ಲಿ ಅತೀ ಹೆಚ್ಚು ಸುದ್ದಿಯಾದ ಹೆಸರುಗಳಲ್ಲಿ ಲಾರೆನ್ಸ್​ ಬಿಷ್ಣೋಯ್ ಕೂಡ ಒಬ್ಬರು. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಹಿಂದೆ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi)​ ಹೆಸರು ಕೂಡ ಕೇಳಿಬಂದಿದೆ.

ಪಂಜಾಬಿ ಗಾಯಕ-ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರನ್ನು ಕೆಲ ದಿನಗಳ ಹಿಂದೆಯಷ್ಟೇ ದುಷ್ಕರ್ಮಿಗಳು ಶೂಟ್ ಮಾಡಿದ್ದರು. ಮೊದಲೇ ರೂಪಿಸಿದ್ದ ಪ್ಲ್ಯಾನ್​ನಂತೆ ಜೀಪ್​ನಲ್ಲಿ ಬರುತ್ತಿದ್ದ ಸಿಧು ಮೂಸೆವಾಲರನ್ನು ಕಾದು ಕುತಿದಿದ್ದ ಗ್ಯಾಂಗ್, ಜನಬಿಡ ಪ್ರದೇಶದಲ್ಲೇ 30 ಬಾರಿ ಫೈರಿಂಗ್ ಮಾಡುವ ಮೂಲಕ ಗುಂಡಿಕ್ಕಿ ಕೊಂದಿದ್ದರು. ಹಾಡುಹಗಲೇ ಇಂತಹದೊಂದು ಭೀಕರ ಹತ್ಯೆಯ ಬಳಿಕ ಕೊಲೆಯ ಹಿಂದೆ ಇಬ್ಬರ ಹೆಸರು ಥಳುಕು ಹಾಕಿಕೊಂಡಿತು. ಅವರಲ್ಲಿ ಮೊದಲಿಗರೆಂದರೆ ಲಾರೆನ್ಸ್ ಬಿಷ್ಣೋಯ್, ಮತ್ತೊಬ್ಬರು ಗೋಲ್ಡಿ ಬ್ರಾರ್.

ವಿಶೇಷ ಎಂದರೆ ಗೋಲ್ಡಿ ಬ್ರಾರ್​ ಭಾರತದಲ್ಲಿಲ್ಲ. ಬದಲಾಗಿ ಕೆನಡಾದಿಂದಲೇ ಭಾರತದಲ್ಲಿ ಕುಕೃತ್ಯಗಳನ್ನು ನಡೆಸುತ್ತಿದ್ದಾರೆ. ಇನ್ನು ಲಾರೆನ್ಸ್ ಬಿಷ್ಣೋಯ್ ಸಿಧು ಮೂಸೆವಾಲ ಹತ್ಯೆ ನಡೆಯುವಾಗ ಜೈಲಿನಲ್ಲಿದ್ದರು. ಅಂದರೆ ಲಾರೆನ್ಸ್​ ಬಿಷ್ಣೋಯ್ ಜೈಲಿನಿಂದಲೇ ಮೂಸೆವಾಲ ಹತ್ಯೆಗೆ ಸ್ಕೆಚ್ ರೂಪಿಸಿದ್ರಾ ಎಂಬ ಅನುಮಾನ ಇದೀಗ ಪೊಲೀಸರ ಮುಂದಿದೆ. ಇದರ ಬೆನ್ನಲ್ಲೇ ಯಾರು ಈ ಲಾರೆನ್ಸ್ ಬಿಷ್ಣೋಯ್ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಇದನ್ನೂ ಓದಿ
Image
Ambassador car 2022: ಹೊಸ ಲುಕ್​ನೊಂದಿಗೆ ಮತ್ತೆ ರಸ್ತೆಗಿಳಿಯಲಿದೆ ಅಂಬಾಸಿಡರ್ ಕಾರು
Image
T20 World Cup: ಟಿ20 ವಿಶ್ವಕಪ್​ನಲ್ಲಿ 20 ತಂಡಗಳ ನಡುವೆ ಸೆಣಸಾಟ..!
Image
Railway Recruitment 2022: SSLC ಪಾಸಾದವರಿಗೆ ಸುರ್ವಣಾವಕಾಶ: ರೈಲ್ವೆಯಲ್ಲಿದೆ ಉದ್ಯೋಗಾವಕಾಶ
Image
Crime Story: ಕಿಂಗ್ ಆಫ್ ಕ್ರೈಮ್: ದಾವೂದ್ ಇಬ್ರಾಹಿಂಗೆ ನಡುಕ ಹುಟ್ಟಿಸಿದ್ದ ಸ್ಲಂ ಡಾನ್

ಈ ಪ್ರಶ್ನೆಗೆ ಉತ್ತರ ಸಿಗಬೇಕಿದ್ದರೆ, ಒಂದಷ್ಟು ವರ್ಷಗಳ ಹಿಂದಕ್ಕೆ ಹೋಗಬೇಕು. ಅಂದರೆ 90 ರ ದಶಕಕ್ಕೆ. ಹೌದು, ಫೆಬ್ರವರಿ 12, 1993 ರಂದು ಜನಿಸಿದ ಬಿಷ್ಣೋಯ್ ಹರ್ಯಾಣ ಮೂಲದವರು. ಬಾಲ್ಯದಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ ಲಾರೆನ್ಸ್, ಕಾಲೇಜ್​ ಮೆಟ್ಟಿಲು ಹತ್ತುತ್ತಿದ್ದಂತೆ ಹೊಸ ಹವಾ ಶುರು ಮಾಡಿಕೊಂಡಿದ್ದ. ಇದಾಗ್ಯೂ ಓದಿನಲ್ಲಿ ಹಿಂದೆ ಬಿದ್ದಿರಲಿಲ್ಲ ಎಂಬುದೇ ಅಚ್ಚರಿ.

ಏಕೆಂದರೆ ಲಾರೆನ್ಸ್​ ಬಿಷ್ಣೋಯ್ ಪಂಜಾಬ್ ವಿಶ್ವವಿದ್ಯಾಲಯದಿಂದ (ಪಿಯು) ಎಲ್​ಎಲ್​ಬಿ ಮುಗಿಸಿದ್ದರು. ಅಷ್ಟೇ ಯಾಕೆ ಅವರ ತಂದೆ 1992 ರಲ್ಲಿ ಹರ್ಯಾಣ ಪೊಲೀಸ್​ನಲ್ಲಿ 5 ವರ್ಷಗಳ ಕಾನ್ಸ್​ಟೇಬಲ್​ ಆಗಿ ಕಾರ್ಯ ನಿರ್ವಹಿಸಿದ್ದರು. ಅಂದರೆ ಪೊಲೀಸ್ ಮಗನಾಗಿ ಬೆಳೆದ ಬಿಷ್ಣೋಯ್, ಎಲ್​ಎಲ್​ಬಿ ಪದವಿ ಪಡೆದ ಬಳಿಕ ಇಳಿದದ್ದು ಅಕ್ರಮ ಚಟುವಟಿಕೆಗಳಲ್ಲಿ ಎಂಬುದು ವಿಶೇಷ.

ಕಾಲೇಜಿನಲ್ಲಿದ್ದಾಗಲೇ ವಿದ್ಯಾರ್ಥಿ ಸಂಘದ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ಬಿಷ್ಣೋಯ್ ವಿರುದ್ದ ಸಣ್ಣ ಪುಟ್ಟ ಪ್ರಕರಣಗಳು ದಾಖಲಾಗಿದ್ದವು. ಅದಾಗಲೇ ಹೊಸ ಹವಾ ಸೃಷ್ಟಿಸಿಕೊಂಡಿದ್ದ ಬಿಷ್ಣೋಯ್ ಆ ಬಳಿಕ ಗ್ಯಾಂಗ್ ಕಟ್ಟಿಕೊಂಡಿದ್ದ. ಅಲ್ಲದೆ ಮದ್ಯ ಮಾಫಿಯಾ, ಪಂಜಾಬಿ ಗಾಯಕರು ಮತ್ತು ಇತರ ಪ್ರಭಾವಿ ವ್ಯಕ್ತಿಗಳಿಂದ ಹಣವನ್ನು ಸುಲಿಗೆ ಮಾಡಲಾರಂಭಿಸಿದ.

ಹೀಗೆ ಪಂಜಾಬ್-ಹರ್ಯಾಣ ಭಾಗದಲ್ಲಿ ಲಾರೆನ್ಸ್ ಬಿಷ್ಣೋಯ್ ಡಾನ್ ಆಗಿ ಮೆರೆಯಲಾರಂಭಿಸಿದ. ಹೀಗೆ ಗ್ಯಾಂಗ್​ಸ್ಟರ್ ಆಗಿ ಗುರುತಿಸಿಕೊಂಡ ಬಿಷ್ಣೋಯ್ ನೆಟ್​ವರ್ಕ್​ ಅಂತಾರಾಷ್ಟ್ರೀಯ ಮಟ್ಟಕ್ಕೂ ತಲುಪಿತ್ತು. ಅಂದರೆ ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ ಮತ್ತು ಹಿಮಾಚಲ ಪ್ರದೇಶ, ಅಲ್ಲದೆ ಕೆನಡಾದಲ್ಲೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದ.

ಆದರೆ ಲಾರೆನ್ಸ್ ಬಿಷ್ಣೋಯ್​ಗೆ ಸಂಪೂರ್ಣ ಮೀಡಿಯಾ ಕವರೇಜ್ ಸಿಕ್ಕಿದ್ದು ಬಾಲಿವುಡ್​ ನಟ ಸಲ್ಮಾನ್ ಖಾನ್ ಪ್ರಕರಣದಲ್ಲಿ ಎಂಬುದು ವಿಶೇಷ. 2018 ರಲ್ಲಿ ಕೃಷ್ಣ ಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರೆನ್ಸ್​ ಬಿಷ್ಣೋಯ್ ಸಲ್ಮಾನ್ ಖಾನ್​ಗೆ ಬೆದರಿಕೆ ಹಾಕಿದ್ದ. ಬಿಷ್ಣೋಯ್ ಸಮುದಾಯದವರು ಕೃಷ್ಣ ಮೃಗವನ್ನು ಪವಿತ್ರ ಎಂದು ಪರಿಗಣಿಸುತ್ತಾರೆ. ಹೀಗಾಗಿ ಕೃಷ್ಣ ಮೃಗ ಕೊಂದ ಸಲ್ಮಾನ್​ನನ್ನು ನಾನು ಬಿಡುವುದಿಲ್ಲ, ಮುಗಿಸುತ್ತೇನೆ ಎಂದು ನ್ಯಾಯಾಲಯದ ಮುಂದೆಯೇ ಹೇಳಿದ್ದ. ಈ ಹೇಳಿಕೆಯನ್ನು ಅಂದು ಯಾರು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ. ಏಕೆಂದರೆ ಅದುವರೆಗೆ ಲಾರೆನ್ಸ್ ಬಿಷ್ಣೋಯ್ ಎಂಬ ಡಾನ್ ಇದ್ದಾನೆ ಎಂಬುದು ಕೂಡ ಮುಂಬೈನವರಿಗೆ ತಿಳಿದಿರಲಿಲ್ಲ.

ಆದರೆ ಯಾವಾಗ ತನ್ನ ಸಾಮ್ರಾಜ್ಯ ಅಂತಾರಾಷ್ಟ್ರೀಯ ಮಟ್ಟದವರೆಗೆ ಬೆಳೆಯಿತೋ ಲಾರೆನ್ಸ್ ಬಿಷ್ಣೋಯ್ ಪಂಜಾಬ್​ನಲ್ಲಿ ಮಾತ್ರವಲ್ಲದೆ, ಮುಂಬೈಗೂ ತನ್ನ ಕುಕೃತ್ಯಗಳನ್ನು ವಿಸ್ತರಿಸಿಕೊಂಡಿದ್ದ. ಅದರಲ್ಲೂ ಮುಖ್ಯವಾಗಿ ಶಸ್ತ್ರಾಸ್ತಗಳಂತಹ ದೊಡ್ಡ ದೊಡ್ಡ ಡೀಲ್​ಗಳ ಹಿಂದೆ ಲಾರೆನ್ಸ್ ಹೆಸರು ಕೇಳಿ ಬಂದವು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಲಾರೆನ್ಸ್ ಬಿಷ್ಣೋಯ್​ನನ್ನು ಬಂಧಿಸಿದ್ದರು. ಅಲ್ಲದೆ ಈತನ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯ ಪ್ರಕರಣವನ್ನು ವಿಧಿಸಿ ಇದೀಗ ತಿಹಾರ್ ಜೈಲಿನಲ್ಲಿಟ್ಟಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಜೈಲು ಪಾಲಾಗಿದ್ದರೂ ತನ್ನ ನೆಟ್​ವರ್ಕ್​ ಮಾತ್ರ ಮುಂದುರೆದಿತ್ತು ಎಂಬುದಕ್ಕೆ ಸಿಧು ಮೂಸೆವಾಲ ಅವರ ಹತ್ಯೆ ಜೊತೆ ಆತನ ಹೆಸರು ಥಳುಕು ಹಾಕಿಕೊಂಡಿರುವುದೇ ಸಾಕ್ಷಿ. ಕೆಲ ಮೂಲಗಳ ಮಾಹಿತಿ ಪ್ರಕಾರ ಜೈಲಿನಿಂದಲೇ ಬಿಷ್ಣೋಯ್ ವಾಟ್ಸ್​ಆ್ಯಪ್​ ಮುಖಾಂತರ ತನ್ನ ಗ್ಯಾಂಗ್​ ಅನ್ನು ನಿಯಂತ್ರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಮುಂದುವರೆದ ಭಾಗ ಸಿಧು ಮೂಸೆವಾಲ ಅವರ ಹತ್ಯೆ ಎನ್ನಲಾಗಿದೆ.

ಯಾವಾಗ ಲಾರೆನ್ಸ್ ಬಿಷ್ಣೋಯ್ ಜೈಲು ಪಾಲಾದರೋ, ಆ ಬಳಿಕ ಗ್ಯಾಂಗ್​ನ ಉಸ್ತುವಾರಿಯನ್ನು ಬಲಗೈ ಬಂಟ ಸತ್ವಿಂದರ್ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ನೋಡಿಕೊಳ್ಳುತ್ತಿದ್ದಾರೆ. ಅದು ಕೂಡ ದೂರದ ಕೆನಡಾದಲ್ಲಿ ಕೂತು ಎಂಬುದು ವಿಶೇಷ. ಸದ್ಯ 60 ಪ್ರಕರಣಗಳಲ್ಲಿ ಆರೋಪಿಯಾಗಿರುವ ಲಾರೆನ್ಸ್ ಬಿಷ್ಣೋಯ್​ಗೆ ಎನ್​ಕೌಂಟರ್ ಭಯ ಕೂಡ ಆವರಿಸಿದೆ. ಹೀಗಾಗಿಯೇ ಪಂಜಾಬ್ ಪೊಲೀಸರ ನಕಲಿ ಎನ್‌ಕೌಂಟರ್‌ಗೆ ಹೆದರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಈ ಅರ್ಜಿಯನ್ನು ಹಿಂಪಡೆದಿದ್ದಾರೆ.

ಇನ್ನು ಲಾರೆನ್ಸ್ ಬಿಷ್ಣೋಯ್ ಕಟ್ಟಿಕೊಂಡಿರುವ ಸಾಮ್ರಾಜ್ಯದಲ್ಲಿ ಸುಮಾರು 700 ಮಂದಿ ಗ್ಯಾಂಗ್​ಸ್ಟರ್​ಗಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಅಂದರೆ ಒಂದು ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಲ್ಲ ಸಾಮರ್ಥ್ಯದ ಗ್ಯಾಂಗ್ ಕಟ್ಟಿಕೊಂಡಿದ್ದಾರೆ. ಈ ಮೂಲಕ ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ ಮತ್ತು ಹಿಮಾಚಲ ಪ್ರದೇಶ, ಕೆನಡಾದಲ್ಲಿ ತನ್ನ ಭೂಗತ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡು ಭೂಗತ ಲೋಕದಲ್ಲಿ ಡಾನ್ ಆಗಿ ಮೆರೆಯುತ್ತಿದ್ದಾರೆ ಲಾರೆನ್ಸ್ ಬಿಷ್ಣೋಯ್.

ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!