ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆ ಹೆಸರಲ್ಲಿ ಹಣ ಸುಲಿಗೆ ಆರೋಪ, ಲೋಕಾಯುಕ್ತಕ್ಕೆ ದೂರು ನೀಡಲು ಮುಂದಾದ ಅಭ್ಯರ್ಥಿಗಳು
ನೇಮಕಾತಿ ಪರೀಕ್ಷೆ ಹೆಸರಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕೋಟಿ ಕೋಟಿ ಹಣ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನೊಂದ ಅಭ್ಯರ್ಥಿಗಳು ಲೋಕಾಯುಕ್ತ ಮತ್ತು ಮುಖ್ಯ ಕಾರ್ಯದರ್ಶಿಯವರಿಗೆ ದೂರು ನೀಡಲು ಚಿಂತನೆ ನಡೆಸುತ್ತಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಭಾರಿ ಅಕ್ರಮಗಳು ಕೇಳಿಬರುತ್ತಿವೆ. ಪೊಲೀಸ್ ಸಬ್ಇನ್ಸ್ಪೆಕ್ಟರ್ ನಂತರ ಅನೇಕ ನೇಮಕಾತಿಯಲ್ಲಿ ಅಕ್ರಮಗಳು ಕೇಳಿಬಂದಿದ್ದವು. ಇದೀಗ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಅಕ್ರಮದ ಘಾಟು ಕೇಳಿಬರಲು ಆರಂಭವಾಗಿದೆ. C
ಈ ಹಿಂದೆ ಕೆಪಿಟಿಸಿಎಲ್ನಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ ಬರೋಬ್ಬರಿ 2.14 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಸುಮಾರು 9 ಕೋಟಿಗೂ ಅಧಿಕ ಶುಲ್ಕು ಪಾವತಿಯಾಗಿದೆ. ಉದ್ಯೋಗ ಆಯ್ಕೆ ಪರೀಕ್ಷೆ ಶುಲ್ಕ ಪಡೆಯಲಾಗುತ್ತದೆ. ಕೊನೆಗೆ ಉದ್ಯೋಗ ಪ್ರಕಟಣೆ ರದ್ದು ಮಾಡಿ ಹಣ ದುರ್ಬಳಕೆ ಮಾಡಲಾಗುತ್ತದೆ. ಇದೇ ರೀತಿ ಪದೇ ಪದೇ ರದ್ದು ಮಾಡಿ ಹಣ ಮಾಡಲಾಗುತ್ತಿದೆ ಎಂದು ಅಭ್ಯರ್ಥಿಗಳು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: Breaking ಅಕ್ರಮ ಹಣ ವರ್ಗಾವಣೆ ಪ್ರಕರಣ: ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿಗೆ ಇಡಿ ಸಮನ್ಸ್
ಉದ್ಯೋಗ ಪ್ರಕಟಣೆ ರದ್ದು ಹಿನ್ನೆಲೆ ಅಭ್ಯರ್ಥಿಗಳು ತಾವು ಕಟ್ಟಿದ ಹಣ ವಾಪಸ್ ನೀಡುವಂತೆ ಕೋರಿದರೂ ಸಂಸ್ಥೆಯು ಕಟ್ಟಿದ ಶುಲ್ಕವನ್ನು ವಾಪಸ್ ನೀಡಲಾಗುವುದಿಲ್ಲ ಎಂದು ಹೇಳುತ್ತಿದೆಯಂತೆ. ಅಲ್ಲದೆ ಮತ್ತದೇ ಹುದ್ದೆಗಳಿಗೆ ಮರು ಅರ್ಜಿ ಆಹ್ವಾನಿಸಲಾಗಿದೆ. ಹಾಗಿದ್ದರೆ ಬರೋಬ್ಬರಿ 2.14 ಲಕ್ಷ ಅಭ್ಯರ್ಥಿಗಳಿಂದ ಪಡೆ 9.11 ಕೋಟಿ ಶುಲ್ಕದ ಹಣದ ಕಥೆ ಏನು? ಆ ಹಣ ಎಲ್ಲಿ ಹೋಯ್ತು? ಎಂದು ಅಭ್ಯರ್ಥಿಗಳು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಈ ಬಗ್ಗೆ ಲೋಕಾಯುಕ್ತ ಮತ್ತು ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಲು ಚಿಂತನೆ ನಡೆಸುತ್ತಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ