T20 World Cup: ಟಿ20 ವಿಶ್ವಕಪ್​ನಲ್ಲಿ 20 ತಂಡಗಳ ನಡುವೆ ಸೆಣಸಾಟ..!

T20 World Cup: 2007 ರಲ್ಲಿ ಟಿ20 ವಿಶ್ವಕಪ್ ಆರಂಭವಾಗಿತ್ತು. ಇದುವರೆಗೆ 7 ಬಾರಿ ಚುಟುಕು ಕ್ರಿಕೆಟ್ ಕದನವನ್ನು ಆಯೋಜಿಸಲಾಗಿದ್ದು, 6 ತಂಡಗಳು ಚಾಂಪಿಯನ್ ಆಗಿವೆ. ವೆಸ್ಟ್ ಇಂಡೀಸ್ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರೆ, ಭಾರತ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಲಾ ಒಂದು ಬಾರಿ ಟ್ರೋಫಿಯನ್ನು ವಶಪಡಿಸಿಕೊಂಡಿವೆ.

T20 World Cup: ಟಿ20 ವಿಶ್ವಕಪ್​ನಲ್ಲಿ 20 ತಂಡಗಳ ನಡುವೆ ಸೆಣಸಾಟ..!
T20 World Cup
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jun 01, 2022 | 3:12 PM

T20 World Cup: ಕ್ರಿಕೆಟ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಚುಟುಕು ಕ್ರಿಕೆಟ್ ಕದನ ಟಿ20 ವಿಶ್ವಕಪ್​ನಲ್ಲಿ ಒಟ್ಟು 20 ತಂಡಗಳಿಗೆ ಅವಕಾಶ ನೀಡಲು ಇಂಟರ್​ನ್ಯಾಷನಲ್​​ ಕ್ರಿಕೆಟ್ ಕೌನ್ಸಿಲ್ (ICC) ಮುಂದಾಗಿದೆ. ಅದರಂತೆ 2024 ರ ಟಿ20 ವಿಶ್ವಕಪ್​ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದೆ. ಇದರಲ್ಲಿ 12 ತಂಡಗಳು ನೇರ ಅರ್ಹತೆ ಪಡೆದರೆ, 8 ತಂಡಗಳು ಅರ್ಹತಾ ಸುತ್ತಿನ ಮೂಲಕ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಪಡೆಯಲಿದೆ. ವಿಶೇಷ ಎಂದರೆ ನೇರ ಅರ್ಹತೆಯ ಮೂಲಕ ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಈಗಾಗಲೇ ಟಿ20 ವಿಶ್ವಕಪ್ 2024 ರಲ್ಲಿ ಸ್ಥಾನ ಪಡೆದಿದೆ. ಐಸಿಸಿ ನಿಯಮದ ಪ್ರಕಾರ ಟೂರ್ನಿಗೆ ಆತಿಥ್ಯವಹಿಸುವ ದೇಶಗಳಿಗೆ ನೇರ ಅವಕಾಶ ದೊರೆಯಲಿದೆ. ಅದರಂತೆ 2024 ರಲ್ಲಿ ಟಿ20 ವಿಶ್ವಕಪ್​​ ಟೂರ್ನಿಯನ್ನು ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಜಂಟಿಯಾಗಿ ಆಯೋಜಿಸಲಾಗುತ್ತಿದೆ. ಹೀಗಾಗಿ ಈ ಎರಡು ದೇಶಗಳು ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದೆ. ಇನ್ನು ಉಳಿದ 10 ತಂಡಗಳಿಗೆ ಟಾಪ್ 10 ಟಿ20 ರ್ಯಾಂಕಿಂಗ್ ಆಧಾರದಲ್ಲಿ ಅವಕಾಶ ದೊರೆಯಲಿದೆ.

ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಟಾಪ್-8 ತಂಡಗಳಿಗೂ ನೇರ ಪ್ರವೇಶ ನೀಡಲಾಗಿದೆ. ಉಳಿದ 8 ಸ್ಥಾನಗಳಿಗೆ ಅರ್ಹತಾ ಪಂದ್ಯಗಳು ನಡೆಯಲಿವೆ. ಅಂದರೆ ಈ ಬಾರಿ ಎಂದಿನಂತೆ ಒಟ್ಟು 16 ತಂಡಗಳು ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳಲಿದೆ. ಆ ಬಳಿಕ ಸೂಪರ್ 12 ಪಂದ್ಯಗಳು ನಡೆಯಲಿದೆ.

ಅರ್ಹತಾ ಸ್ಪರ್ಧೆಯಲ್ಲಿ 66 ದೇಶಗಳು: 2024 ರ ಟಿ20 ವಿಶ್ವಕಪ್​ಗಾಗಿ ಒಟ್ಟು 66 ದೇಶದ ತಂಡಗಳು ಅರ್ಹತಾ ಸ್ಪರ್ಧೆಯಲ್ಲಿದೆ. ಇದರಲ್ಲಿ ಆಫ್ರಿಕಾದ 14 ತಂಡಗಳು, ಅಮೆರಿಕದ 8 ತಂಡಗಳು, ಏಷ್ಯಾದ 9 ತಂಡಗಳು, ಇಎಪಿಯ 7 ತಂಡಗಳು ಮತ್ತು ಯುರೋಪ್‌ನ 28 ತಂಡಗಳು ಸೇರಿವೆ. ಈ ಪಂದ್ಯಗಳು 2 ವರ್ಷಗಳ ಕಾಲ ನಡೆಯಲಿವೆ. ಹಂಗೇರಿ, ರೊಮೇನಿಯಾ ಮತ್ತು ಸರ್ಬಿಯಾ ಮೊದಲ ಬಾರಿಗೆ ಈವೆಂಟ್‌ಗೆ ಪ್ರವೇಶಿಸುವ ಅವಕಾಶವನ್ನು ಪಡೆಯುತ್ತಿವೆ.

ಇದನ್ನೂ ಓದಿ
Image
India vs South Africa T20: ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ
Image
Ashish Nehra: ಎಳನೀರು, ಪೆನ್ನು ಪೇಪರ್​ನಲ್ಲೇ 9 ತಂಡಗಳನ್ನ ಮುಗಿಸಿಬಿಟ್ರು..!
Image
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
Image
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಐಸಿಸಿ ಟೂರ್ನಿಯಲ್ಲಿ ದಾಖಲೆ ಸಂಖ್ಯೆಯ ತಂಡಗಳು ಭಾಗವಹಿಸುವುದನ್ನು ನೋಡಲು ನಮಗೆ ಸಂತೋಷವಾಗುತ್ತಿದೆ. ಯುರೋಪ್‌ನ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. T20 ಸ್ವರೂಪವು ಆಟದ ವಿಕಾಸವನ್ನು ಮುಂದುವರೆಸಿದೆ ಮತ್ತು ಮುಂದಿನ 2 ವರ್ಷಗಳಲ್ಲಿ ಮೊದಲ ಬಾರಿಗೆ ಐಸಿಸಿ ಟೂರ್ನಿಗಳಲ್ಲಿ ಹೊಸ ತಂಡಗಳು ಆಡುವುದನ್ನು ನಾವು ನೋಡುತ್ತೇವೆ ಎಂದು ಐಸಿಸಿ ಈವೆಂಟ್‌ಗಳ ಮುಖ್ಯಸ್ಥ ಕ್ರಿಸ್ ಟೆಟ್ಲಿ ಹೇಳಿದ್ದಾರೆ.

7 ವಿಶ್ವಕಪ್ 6 ತಂಡಗಳು ಚಾಂಪಿಯನ್ಸ್​: 2007 ರಲ್ಲಿ ಟಿ20 ವಿಶ್ವಕಪ್ ಆರಂಭವಾಗಿತ್ತು. ಇದುವರೆಗೆ 7 ಬಾರಿ ಚುಟುಕು ಕ್ರಿಕೆಟ್ ಕದನವನ್ನು ಆಯೋಜಿಸಲಾಗಿದ್ದು, 6 ತಂಡಗಳು ಚಾಂಪಿಯನ್ ಆಗಿವೆ. ವೆಸ್ಟ್ ಇಂಡೀಸ್ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರೆ, ಭಾರತ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಲಾ ಒಂದು ಬಾರಿ ಟ್ರೋಫಿಯನ್ನು ವಶಪಡಿಸಿಕೊಂಡಿವೆ. ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವುದು 8ನೇ ಟಿ20 ವಿಶ್ವಕಪ್ ಹಾಗೂ ಅಮೆರಿಕ-ವೆಸ್ಟ್ ಇಂಡೀಸ್​ ಆಯೋಜಿಸಲಿರುವ 9ನೇ ಟಿ20 ವಿಶ್ವಕಪ್​ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದೆ.

ಟಿ20 ವಿಶ್ವಕಪ್ 2022ರ ಗ್ರೂಪ್ ಮತ್ತು ಭಾರತ ತಂಡದ ವೇಳಾಪಟ್ಟಿ:

  1. ಗ್ರೂಪ್ ಎ: ಶ್ರೀಲಂಕಾ, ನಮೀಬಿಯಾ, ಎರಡು ಕ್ವಾಲಿಫೈಯರ್ ತಂಡಗಳು
  2. ಗ್ರೂಪ್ ಬಿ: ವೆಸ್ಟ್​ ಇಂಡೀಸ್, ಸ್ಕಾಟ್ಲೆಂಡ್, ಎರಡು ಕ್ವಾಲಿಫೈಯರ್ ತಂಡಗಳು

ಸೂಪರ್ 12 ಗ್ರೂಪ್​:

  1. ಗ್ರೂಪ್ 1: ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್, ನ್ಯೂಜಿಲೆಂಡ್, A1, A2
  2. ಗ್ರೂಪ್ 2: ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ವೆಸ್ಟ್ ಇಂಡೀಸ್, B1, B2

ಟೀಮ್ ಇಂಡಿಯಾದ ಪಂದ್ಯಗಳ ವೇಳಾಪಟ್ಟಿ:

  1. ಭಾರತ vs ಪಾಕಿಸ್ತಾನ, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಅಕ್ಟೋಬರ್ 23
  2. ಭಾರತ vs ಗ್ರೂಪ್ A ರನ್ನರ್ ಅಪ್, ಸಿಡ್ನಿ ಕ್ರಿಕೆಟ್ ಗ್ರೌಂಡ್, ಅಕ್ಟೋಬರ್ 27
  3. ಭಾರತ vs ದಕ್ಷಿಣ ಆಫ್ರಿಕಾ, ಪರ್ತ್ ಸ್ಟೇಡಿಯಂ, ಅಕ್ಟೋಬರ್ 30
  4. ಭಾರತ vs ಬಾಂಗ್ಲಾದೇಶ, ಅಡಿಲೇಡ್ ಓವಲ್, ನವೆಂಬರ್ 2

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ