IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

IPL 2022: ಆರ್​ಸಿಬಿ ತಂಡದ ಪ್ಲೇಆಫ್​ ಅರ್ಹತೆ ಇಂದು ನಿರ್ಧಾರವಾಗಲಿದೆ. ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್​ ಮುಖಾಮುಖಿಯಾಗುತ್ತಿದೆ. ಈ ಪಂದ್ಯವು ಡೆಲ್ಲಿ ಹಾಗೂ ಆರ್​ಸಿಬಿ ಪಾಲಿಗೆ ನಿರ್ಣಾಯಕ.

IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು
ಸಾಂದರ್ಭಿಕ ಚಿತ್ರ
Follow us
| Updated By: ಝಾಹಿರ್ ಯೂಸುಫ್

Updated on: May 21, 2022 | 3:34 PM

IPL 2022: ಐಪಿಎಲ್​ನ 67ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಪಾಯಿಂಟ್ಸ್​ ಟೇಬಲ್ ಟಾಪರ್ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸುವ ಮೂಲಕ ತಮ್ಮ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಮೋಘ ಫಾರ್ಮ್‌ ಪ್ರದರ್ಶಿಸಿದ್ದರು. ಕೇವಲ 54 ಎಸೆತಗಳಲ್ಲಿ 73 ರನ್‌ಗಳನ್ನು ಬಾರಿಸುವ ಮೂಲಕ ಗುಜರಾತ್ ನೀಡಿದ 169 ರನ್​ಗಳ ಟಾರ್ಗೆಟ್​ ಅನ್ನು ಆರ್​ಸಿಬಿ ಸುಲಭವಾಗಿ ಚೇಸ್ ಮಾಡಿತು. ಇತ್ತ ವಿರಾಟ್ ಕೊಹ್ಲಿ ಮೈದಾನದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ದಾಖಲೆಗಳನ್ನು ಬರೆದರೆ, ಅತ್ತ RCB ಅಭಿಮಾನಿಗಳು ಮೈದಾನದ ಹೊರಗೆ ವಿಶ್ವ ದಾಖಲೆ ನಿರ್ಮಿಸಿದರು.

ಹೌದು, ಆರ್​ಸಿಬಿ ಅಭಿಮಾನಿಗಳು 823 ರನ್ ಓಡುವ ಮೂಲಕ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. 22 ಯಾರ್ಡ್​ ಪಿಚ್‌ನಲ್ಲಿ ವಿಕೆಟ್‌ಗಳ ನಡುವೆ 823 ರನ್​ ಓಡಿ ಆರ್​ಸಿಬಿ ಫ್ಯಾನ್ಸ್​ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಸ್ಪೋರ್ಟ್ಸ್ ಬ್ರ್ಯಾಂಡ್ ಬೆಂಗಳೂರಿನಲ್ಲಿ ಕಾರ್ಯಕ್ರಮದಲ್ಲಿ ಈ ದಾಖಲೆ ನಿರ್ಮಾಣವಾಗಿದ್ದು, ಇದಕ್ಕಾಗಿ 187 RCB ಅಭಿಮಾನಿಗಳು ಕೈಜೋಡಿಸಿದ್ದರು.

ಈ ಕಾರ್ಯಕ್ರಮದಲ್ಲಿ ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಂದ್ ಮತ್ತು ಹಾಕಿ ತಾರೆ ರೂಪಿಂದರ್ ಪಾಲ್ ಸಿಂಗ್ ಕೂಡ ಭಾಗವಹಿಸಿದ್ದರು. ದ್ಯುತಿ ಚಂದ್ RCB ಅಭಿಮಾನಿಯಾಗಿ ಮೊದಲ ರನ್‌ ಓಡುವುದರೊಂದಿಗೆ ದಾಖಲೆಯ ಓಟ ಆರಂಭಿಸಿದ್ದರು. ಆ ಬಳಿಕ 187 ಆರ್​ಸಿಬಿ ಅಭಿಮಾನಿಗಳು ಒಂದು ಗಂಟೆಯೊಳಗೆ 823 ರನ್​ ಓಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದರು. ಇದರೊಂದಿಗೆ ಆರ್​ಸಿಬಿ ಅಭಿಮಾನಿಗಳ ಮೂಲಕ ವಿಶೇಷ ದಾಖಲೆಯೊಂದು ಆರ್​ಸಿಬಿ ಪಾಲಾಯಿತು.

ಇದನ್ನೂ ಓದಿ
Image
Virat Kohli: ಕೊಹ್ಲಿ ಕಡೆಯಿಂದ ರಶೀದ್ ಖಾನ್​​ಗೆ ಸ್ಪೆಷಲ್ ಗಿಫ್ಟ್​: ಸೇಫ್ ಆಗಿ ಇಟ್ಟಿರಿ ಎಂದ ಸೌತ್ ಆಫ್ರಿಕಾ ಕ್ರಿಕೆಟಿಗ
Image
KL Rahul: ಐಪಿಎಲ್​ನಲ್ಲಿ ರಾಹುಲ್ ಅಬ್ಬರ: ಸತತ 5ನೇ ಬಾರಿ ಕೆಎಲ್ ಕಿಂಗ್
Image
IPL 2022: RCB ಗೆದ್ದರೂ ಡೆಲ್ಲಿ ಕ್ಯಾಪಿಟಲ್ಸ್​ ಚಾನ್ಸ್, ಯಾಕೆ ಗೊತ್ತಾ?
Image
IPL 2022: ಬುಮ್ರಾ ದಾಖಲೆ ಮುರಿದ ಉಮ್ರಾನ್ ಮಲಿಕ್

RCB ಗಿನ್ನೆಸ್ ದಾಖಲೆ

ಇನ್ನು ಆರ್​ಸಿಬಿ ತಂಡದ ಪ್ಲೇಆಫ್​ ಅರ್ಹತೆ ಇಂದು ನಿರ್ಧಾರವಾಗಲಿದೆ. ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್​ ಮುಖಾಮುಖಿಯಾಗುತ್ತಿದೆ. ಈ ಪಂದ್ಯವು ಡೆಲ್ಲಿ ಹಾಗೂ ಆರ್​ಸಿಬಿ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ ಮಾತ್ರ ಪ್ಲೇಆಫ್​ಗೆ ಅರ್ಹತೆ ಪಡೆಯಬಹುದು. ಹಾಗೆಯೇ ಮುಂಬೈ ಇಂಡಿಯನ್ಸ್ ಗೆದ್ದರೆ ಆರ್​ಸಿಬಿಗೆ ಪ್ಲೇಆಫ್​ ಚಾನ್ಸ್ ಸಿಗಲಿದೆ. ಹಾಗಾಗಿ ಡೆಲ್ಲಿ – ಮುಂಬೈ ಕದನದ ಫಲಿತಾಂಶವು ಆರ್​ಸಿಬಿ ತಂಡದ ಪ್ಲೇಆಫ್​ ಅನ್ನು ನಿರ್ಧರಿಸಲಿದೆ. ಹೀಗಾಗಿಯೇ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲಬೇಕೆಂದು ಆರ್​ಸಿಬಿ ಅಭಿಮಾನಿಗಳು ಬಯಸುತ್ತಿದ್ದಾರೆ. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ ಆರ್​ಸಿಬಿ ತಂಡವು ಐಪಿಎಲ್​ನಿಂದ ಹೊರಬೀಳಲಿದೆ. ಅಂದರೆ ಡೆಲ್ಲಿ ಕ್ಯಾಪಿಟಲ್ಸ್ ಸೋಲದ ಹೊರತು ಆರ್​ಸಿಬಿ ತಂಡಕ್ಕೆ ಪ್ಲೇಆಫ್​ ಚಾನ್ಸ್ ಸಿಗುವುದಿಲ್ಲ. ಹೀಗಾಗಿ ಇಂದಿನ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್​ಸಿಬಿ ಪಾಲಿಗೆ ನಿರ್ಣಾಯಕ ಪಂದ್ಯವಾಗಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.