IPL 2022: ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಕೈಕೊಟ್ಟ CSK ಬ್ಯಾಟರ್​ಗಳು

IPL 2022: ಅಂಬಟಿ ರಾಯುಡು 13 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 274 ರನ್ ಮಾತ್ರ. ಇನ್ನು ಡೆವೊನ್ ಕಾನ್ವೆ 7 ಪಂದ್ಯಗಳಲ್ಲಿ 252 ರನ್ ಗಳಿಸಿದರೆ, ಮೊಯಿನ್ ಅಲಿ 10 ಪಂದ್ಯಗಳಲ್ಲಿ 244 ರನ್ ಬಾರಿಸಿದ್ದಾರೆ.

IPL 2022: ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಕೈಕೊಟ್ಟ CSK ಬ್ಯಾಟರ್​ಗಳು
CSK
Follow us
| Updated By: ಝಾಹಿರ್ ಯೂಸುಫ್

Updated on: May 21, 2022 | 6:25 PM

IPL 2022: ಐಪಿಎಲ್ ಸೀಸನ್ 15 ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್​ (CSK) ತಂಡವು ತನ್ನೆಲ್ಲಾ ಲೀಗ್ ಪಂದ್ಯಗಳನ್ನು ಮುಗಿಸಿ ಪಾಯಿಂಟ್ಸ್​ ಟೇಬಲ್​ನಲ್ಲಿ 9ನೇ ಸ್ಥಾನ ಪಡೆದುಕೊಂಡಿದೆ. ಈ ಬಾರಿ ಆಡಿದ 14 ಪಂದ್ಯಗಳಲ್ಲಿ ಸಿಎಸ್​ಕೆ ತಂಡವು ಕೇವಲ 4 ರಲ್ಲಿ ಮಾತ್ರ ಜಯ ಸಾಧಿಸಿದೆ. ಅಂದರೆ 10 ಪಂದ್ಯಗಳಲ್ಲಿ ಸೋಲುವ ಮೂಲಕ ನಾಲ್ಕು ಬಾರಿಯ ಚಾಂಪಿಯನ್ ನಿರಾಸೆ ಮೂಡಿಸಿದೆ. ಐಪಿಎಲ್ ಆರಂಭಕ್ಕೂ ಮುನ್ನ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಸಿಎಸ್​ಕೆ ತಂಡದ ಸೋಲಿಗೆ ಕಾರಣವೇನು ಎಂದು ನೋಡುವುದಾದರೆ, ಬ್ಯಾಡ್ಸ್​ಮನ್​ಗಳ ವೈಫಲ್ಯ. ಏಕೆಂದರೆ ಚನ್ನೈ ಸೂಪರ್ ಕಿಂಗ್ಸ್ ಪರ ಈ ಬಾರಿ ಯಾವುದೇ ಬ್ಯಾಟ್ಸ್​​ಮನ್ 400 ರನ್​ಗಳ ಗಡಿ ದಾಟಿಲ್ಲ. ಅಂದರೆ ಸಿಎಸ್​ಕೆ ಬ್ಯಾಟ್ಸ್​ಮನ್​ಗಳ ವೈಯುಕ್ತಿಕ ಸ್ಕೋರ್​ 400 ರನ್​ಗಳ ಗಡಿದಾಟದಿರುವುದು ಐಪಿಎಲ್​ ಇತಿಹಾಸದಲ್ಲೇ ಇದೇ ಮೊದಲು.

ಇಲ್ಲಿ ಬ್ಯಾಟ್ಸ್​ಮನ್​ಗಳ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರದಿರುವುದು ಸಿಎಸ್​ಕೆ ತಂಡದ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿದೆ. ಏಕೆಂದರೆ ತಂಡದಲ್ಲಿ ಅನುಭವಿ ಬೌಲರ್​ಗಳ ಕೊರತೆಯಿತ್ತು. ಇತ್ತ ಬೃಹತ್ ಮೊತ್ತ ಪೇರಿಸಿ ಗೆಲ್ಲುವ ಉತ್ಸಾಹ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕಾಣಲಿಲ್ಲ. ಹಾಗೆಯೇ ಸ್ಥಿರ ಪ್ರದರ್ಶನ ನೀಡುವಲ್ಲಿ ಪ್ರಮುಖ ಬ್ಯಾಟ್ಸ್​ಮನ್​​ಗಳು ಎಡವಿದರು. ಇದೇ ಕಾರಣದಿಂದಾಗಿ ಯಾವುದೇ ಬ್ಯಾಟ್ಸ್​ಮನ್ 400 ರನ್​ಗಳ ಗಡಿ ದಾಟಿಲ್ಲ.

ಇದನ್ನೂ ಓದಿ: IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಇದನ್ನೂ ಓದಿ
Image
Virat Kohli: ಕೊಹ್ಲಿ ಕಡೆಯಿಂದ ರಶೀದ್ ಖಾನ್​​ಗೆ ಸ್ಪೆಷಲ್ ಗಿಫ್ಟ್​: ಸೇಫ್ ಆಗಿ ಇಟ್ಟಿರಿ ಎಂದ ಸೌತ್ ಆಫ್ರಿಕಾ ಕ್ರಿಕೆಟಿಗ
Image
KL Rahul: ಐಪಿಎಲ್​ನಲ್ಲಿ ರಾಹುಲ್ ಅಬ್ಬರ: ಸತತ 5ನೇ ಬಾರಿ ಕೆಎಲ್ ಕಿಂಗ್
Image
IPL 2022: RCB ಗೆದ್ದರೂ ಡೆಲ್ಲಿ ಕ್ಯಾಪಿಟಲ್ಸ್​ ಚಾನ್ಸ್, ಯಾಕೆ ಗೊತ್ತಾ?
Image
IPL 2022: ಬುಮ್ರಾ ದಾಖಲೆ ಮುರಿದ ಉಮ್ರಾನ್ ಮಲಿಕ್

ಈ ಬಾರಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್. ರುತುರಾಜ್ 14 ಪಂದ್ಯಗಳಲ್ಲಿ 368 ರನ್ ಗಳಿಸಿದ್ದು ಗರಿಷ್ಠ ವೈಯುಕ್ತಿಕ ಸ್ಕೋರ್. ಇವರಲ್ಲದೆ ಶಿವಂ ದುಬೆ 11 ಪಂದ್ಯಗಳಲ್ಲಿ 289 ರನ್ ರನ್ ಕಲೆಹಾಕಿದ್ದರು. ಆದರೆ ಅಂಬಟಿ ರಾಯುಡು 13 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 274 ರನ್ ಮಾತ್ರ. ಇನ್ನು ಡೆವೊನ್ ಕಾನ್ವೆ 7 ಪಂದ್ಯಗಳಲ್ಲಿ 252 ರನ್ ಗಳಿಸಿದರೆ, ಮೊಯಿನ್ ಅಲಿ 10 ಪಂದ್ಯಗಳಲ್ಲಿ 244 ರನ್ ಬಾರಿಸಿದ್ದಾರೆ.

ಇನ್ನು ನಾಯಕ ಮಹೇಂದ್ರ ಸಿಂಗ್ ಧೋನಿ 14 ಪಂದ್ಯಗಳಲ್ಲಿ 232 ರನ್ ಕಲೆಹಾಕಿದ್ದಾರೆ. ರಾಬಿನ್ ಉತ್ತಪ್ಪ 230 ರನ್ ಗಳಿಸಿದ್ದಾರೆ. ಅಂದರೆ ರುತುರಾಜ್ ಗಾಯಕ್ವಾಡ್ ಅವರನ್ನು ಹೊರತುಪಡಿಸಿ ಪ್ರಮುಖ ಬ್ಯಾಟ್ಸ್​ಮನ್​ಗಳು 300 ರನ್​ಗಳ ಗಡಿದಾಟಿಲ್ಲ. ಹಾಗೆಯೇ ಇದೇ ಮೊದಲ ಬಾರಿಗೆ ಸಿಎಸ್​ಕೆ ತಂಡದ ಬ್ಯಾಟ್ಸ್​ಮನ್​ಗಳು 400 ರನ್​ಗಳ ಗಡಿದಾಟದೇ ಐಪಿಎಲ್ ಅನ್ನು ಅಂತ್ಯಗೊಳಿಸಿದ್ದಾರೆ. ಒಟ್ಟಿನಲ್ಲಿ ಬಲಿಷ್ಠ ತಂಡ, ಹಾಲಿ ಚಾಂಪಿಯನ್ ಟೀಮ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು 14 ಪಂದ್ಯಗಳಲ್ಲಿ 10 ಸೋಲು ಕಾಣುವ ಮೂಲಕ ಈ ಬಾರಿ ನಿರಾಸೆ ಮೂಡಿಸಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ