Optical Illusion: ನಿಮ್ಮ ಕಣ್ಣುಗಳಿಗೊಂದು ಸವಾಲು, ಗೊಂಬೆಗಳ ನಡುವೆ ಮರೆಯಾಗಿರುವ ಮೂರು ಬಾಳೆಹಣ್ಣುಗಳನ್ನು ಪತ್ತೆಹಚ್ಚುವಿರಾ?
ಹಳದಿ ಬಣ್ಣದಲ್ಲಿರುವ ಗೊಂಬೆಗಳ ನಡುವೆ ಮರೆಯಾಗಿರುವ ಮೂರು ಬಾಳೆಹಣ್ಣುಗಳನ್ನು ಪತ್ತೆಹಚ್ಚುವಿರಾ? ಇದು ಸಾವಾಲು ಮಾತ್ರವಲ್ಲ, ನಿಮ್ಮ ಕಣ್ಣುಗಳ ಸಾಮರ್ಥ್ಯವನ್ನು ಅಳೆಯಲು ಸಹಾಯಕವಾಗಲಿದೆ.
ಇಲ್ಲಸ್ಟ್ರೇಟರ್ ಗೆರ್ಗೆಲಿ ಡುಡಾಸ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ್ಗೆ ಆಸಕ್ತಿದಾಯಕ ಒಗಟುಗಳನ್ನು ಹಂಚಿಕೊಂಡು ನಿರ್ದಿಷ್ಟ ವಸ್ತುಗಳನ್ನು ಹುಡುಕುವಂತೆ ಸವಾಲು ಹಾಕುತ್ತಾರೆ. ಇದೀಗ ಅವರು ಅಪ್ಲೋಡ್ ಮಾಡಿದ ಆಪ್ಟಿಕಲ್ ಭ್ರಮೆ ನಿಮ್ಮ ಮುಂದೆ ಇಡುತ್ತಿದ್ದೇವೆ. ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಸೂಕ್ಷ್ಮತೆಯನ್ನು ಪರೀಕ್ಷಿಸಲು ಈ ಆಪ್ಟಿಕಲ್ ಭ್ರಮೆ (Optical Illusion) ಸಹಾಯಕವಾಗಲಿದೆ. ನೀವು ಈ ಚಿತ್ರದ ಮೂಲಕ ಮಾಡಬೇಕಾಗಿರುವುದು ಇಷ್ಟೆ, ಹಳದಿ ಬಣ್ಣದಲ್ಲಿರುವ ಗೊಂಬೆಗಳ ನಡುವೆ ಮರೆಯಾಗಿರುವ ಮೂರು ಬಾಳೆಹಣ್ಣುಗಳನ್ನು ಪತ್ತೆಹಚ್ಚಬೇಕು.
thedudolf ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಆಪ್ಟಿಕಲ್ ಭ್ರಮೆಯನ್ನು ಹಂಚಿಕೊಳ್ಳಲಾಗಿದ್ದು, ಗೊಂಬೆಗಳ ನಡುವೆ ಇರುವ ಮೂರು ಬಾಳೆಹಣ್ಣುಗಳನ್ನು ಪತ್ತೆಹಚ್ಚುವಿರಾ ಎಂದು ಶೀರ್ಷಿಕೆಯಲ್ಲಿ ಪ್ರಶ್ನಿಸಿದ್ದಾರೆ. ಈ ಪೋಸ್ಟ್ ವೈರಲ್ ಪಡೆದು 2ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಹಲವು ಕಾಮೆಂಟ್ಗಳು ಬಂದಿವೆ. ಕೆಲವರು ಬಾಳೆಹಣ್ಣುಗಳನ್ನು ಪತ್ತೆಹಚ್ಚುವಲ್ಲಿ ವಿಫಲವಾದರೆ ಇನ್ನೂ ಕೆಲವರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈಗ ನಿಮ್ಮ ಕಣ್ಣಿನ ಸಾಮರ್ಥ್ಯವನ್ನು ಅಳೆಯುವ ಸಮಯ ಬಂದಿದೆ. ಮೊದಲು ನೀವು ಟೈಮರ್ ಅನ್ನು ತೆಗೆದುಕೊಳ್ಳಿ, ಈಗ ಈ ಕೆಳಗೆ ನೀಡಿರುವ ಆಪ್ಟಿಕಲ್ ಭ್ರಮೆಯ ಚಿತ್ರದಲ್ಲಿ ಅಡಗಿರುವ ಮೂರು ಬಾಳೆಹಣ್ಣುಗಳನ್ನು ಕೇವಲ 60 ಸೆಕೆಂಡುಗಳಲ್ಲಿ ಪತ್ತೆಹಚ್ಚಬೇಕು. ಈಗ ನಿಮ್ಮ ಸಮಯ ಆರಂಭವಾಗಿದೆ.
ಆಪ್ಟಿಕಲ್ ಭ್ರಮೆ ಚಿತ್ರ
View this post on Instagram
ನಿಮ್ಮ ಸಮಯ ಮುಗಿದಿದೆ. ಚಿತ್ರದಲ್ಲಿ ಬಾಳೆಹಣ್ಣನ್ನು ಹುಡುಕುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದಾಗ್ಯೂ ಮೂರು ಬಾಳೆಹಣ್ಣುಗಳನ್ನು ಪತ್ತೆಹಚ್ಚುವಲ್ಲಿ ನೀವು ಯಶಸ್ವಿಯಾಗಿದ್ದರೆ ನಿಮಗೆ ಅಭಿನಂದನೆಗಳು, ನೀವು ಈ ಸವಾಲಿನ ಹಾಗೂ ಕಣ್ಣಿನ ಸಾಮರ್ಥ್ಯವನ್ನು ಅಳೆಯುವ ಪರೀಕ್ಷೆಯಲ್ಲಿ ಸೋತಿದ್ದರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಪಕ್ಕಕ್ಕೆ ಕಣ್ಣಿಗೆ ಕಾಣಲು ಸಿಗದ ಬಾಳೆಹಣ್ಣುಗಳನ್ನು ತೋರಿಸಲಾಗಿದೆ.
ಆಪ್ಟಿಕಲ್ ಭ್ರಮೆ ಚಿತ್ರದ ಉತ್ತರ
Published On - 1:38 pm, Sat, 16 July 22