AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishi Sunak: ‘ಅಭಿಯಾನ’ ಪದದಲ್ಲಿನ ತಪ್ಪಾದ ಕಾಗುಣಿತದಿಂದಾಗಿ ವೈರಲ್ ಆದ ರಿಷಿ ಸುನಕ್

ರಿಷಿ ಸುನಕ್ ಅವರ ಅಭಿಯಾನದ ಬ್ಯಾನರ್​ನಲ್ಲಿ Campaign ಎಂದು ಬರೆಯುವ ಬದಲು Campiaign ಎಂದು ಬರೆಯಲಾಗಿದೆ. ಕಾಗುಣಿತ ತಪ್ಪಾಗಿರುವುದನ್ನು ಗಮನಿಸಿದ ನೆಟ್ಟಿಗರು, ವಿವಿಧ ರೀತಿಯಲ್ಲಿ ಕಾಂಮೆಂಟ್​ಗಳನ್ನು ಮಾಡಿ ಜರಿಯುತ್ತಿದ್ದಾರೆ.

Rishi Sunak: 'ಅಭಿಯಾನ' ಪದದಲ್ಲಿನ ತಪ್ಪಾದ ಕಾಗುಣಿತದಿಂದಾಗಿ ವೈರಲ್ ಆದ ರಿಷಿ ಸುನಕ್
ರಿಷಿ ಸುನಕ್
TV9 Web
| Edited By: |

Updated on:Jul 16, 2022 | 12:42 PM

Share

ಮಾನವರಾದ ನಾವು ತಪ್ಪು ಮಾಡುವುದು ಸಹಜ, ಅದರಲ್ಲೂ ಕಾಗುಣಿತದಲ್ಲಿನ ತಪ್ಪುಗಳು. ಜನಸಾಮಾನ್ಯರಾದರೆ ಅಷ್ಟೊಂದು ಗಂಭೀರವಾಗುವುದಿಲ್ಲ ಆದರೆ ದೊಡ್ಡ ವ್ಯಕ್ತಿಗಳು ತಪ್ಪು ಮಾಡಿದರೆ ಅದು ಹೆಚ್ಚು ಗಮನಸೆಳೆಯುತ್ತದೆ. ಇದೀಗ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ (Rishi Sunak) ಅವರು ಆಂಗ್ಲ ಭಾಷೆಯಲ್ಲಿನ ಅಭಿಯಾನ ಪದದಲ್ಲಿ ಬರೆಯಲಾದ ತಪ್ಪಾದ ಕಾಗುಣಿತದಿಂದಾಗಿ ಹೆಚ್ಚು ವೈರಲ್ ಆಗುತ್ತಿದ್ದಾರೆ.

ಬ್ರಿಟನ್ ಪ್ರಧಾನಿ ಹುದ್ದೆಗೆ ಪಿಚ್ ಮಾಡುವ ಮೊದಲ ದೂರದರ್ಶನ ಚರ್ಚೆಯಲ್ಲಿ ರಿಷಿ ಸುನಕ್ ಅವರು ಭಾಗವಹಿಸಿದ್ದಾರೆ. ಸಂದರ್ಶಕರ ಮುಂದೆ ಕುಳಿತಿದ್ದ ರಿಷಿ ಅವರ ಹಿಂಬದಿಯಲ್ಲಿ ಅಭಿಯಾನದ ಬ್ಯಾನರ್ ಅನ್ನು ಹಾಕಲಾಗಿತ್ತು. ಈ ಅಭಿಯಾನದ ಬ್ಯಾನರ್​ನಲ್ಲಿ ಅಭಿಯಾನ ಎಂಬ ಆಂಗ್ಲ ಪದವೇ ತಪ್ಪಾಗಿ ಬರೆದಿರುವುದು ಕೆಲವು ನೆಟ್ಟಿಗರ ಕಣ್ಣಿಗೆ ಬಿದ್ದಿದೆ. ಇದನ್ನೇ ಮುಂದಿಟ್ಟುಕೊಂಡು ರಿಷಿ ಸುನಕ್ ಅವರನ್ನು ಪ್ರಚಾರದ ಬ್ಯಾನರ್‌ನಲ್ಲಿ ಕಾಗುಣಿತ ದೋಷವಿದೆ ಎಂದು ವೀಕ್ಷಕರು ಇಂಟರ್ನೆಟ್​ನಲ್ಲಿ ಜರಿಯಲು ಪ್ರಾರಂಭಿಸಿದ್ದಾರೆ.

ಅಷ್ಟಕ್ಕೂ ರಿಷಿ ಸುನಕ್ ಅವರ ಅಭಿಯಾನದ ಬ್ಯಾನರ್​ನಲ್ಲಿ Campaign ಎಂದು ಬರೆಯುವ ಬದಲು Campiaign ಎಂದು ಬರೆಯಲಾಗಿದೆ. ಕಾಗುಣಿತ ತಪ್ಪಾಗಿರುವುದನ್ನು ಮುಂದಿಟ್ಟುಕೊಂಡು ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಂಮೆಂಟ್​ಗಳನ್ನು ಮಾಡಲು ಮುಂದಾಗಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು, ”ರಿಷಿ ಸುನಕ್ ಅವರು ತಪ್ಪಾಗಿ ಬರೆದ ‘ಅಭಿಯಾನ’ ಪದದ ಮುಂದೆ ಕುಳಿತುಕೊಳ್ಳದಿದ್ದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು” ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿ, “ರಿಷಿ ಸುನಕ್ ಕೋಟ್ಯಾಧಿಪತಿಯಾಗಿರಬಹುದು, ಆದರೆ ಅವರು ಅಭಿಯಾನವನ್ನು ಉಚ್ಚರಿಸಲು ಸಾಧ್ಯವಿಲ್ಲ” ಎಂದಿದ್ದಾರೆ.

ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು  ಬ್ರಿಟನ್ ಪ್ರಧಾನಿ ಆಕಾಂಕ್ಷಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಗುರುವಾರ ನಡೆದ ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಬ್ರಿಟನ್‌ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಒಬ್ಬ ಅಭ್ಯರ್ಥಿ ಚುನಾವಣಾ ಸುತ್ತಿನಿಂದ ಹೊರ ಬಿದ್ದಿದ್ದಾರೆ. ಸುನಕ್ 101 ಮತಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಜೂನಿಯರ್ ಟ್ರೇಡ್ ಮಿನಿಸ್ಟರ್ ಪೆನ್ನಿ ಮೊರ್ಡಾಂಟ್ 83 ಮತಗಳನ್ನು ಮತ್ತು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 64 ಮತಗಳನ್ನು ಪಡೆದಿದ್ದಾರೆ. ಅಟಾರ್ನಿ ಜನರಲ್ ಸುಯೆಲ್ಲಾ ಬ್ರಾವರ್‌ಮನ್ 27 ಮತಗಳೊಂದಿಗೆ ಸುತ್ತಿನಿಂದ ಹೊರನಡೆದಿದ್ದಾರೆ. ಶಾಸಕ ಟಾಮ್ ತುಗೆಂಧತ್ 32 ಮತಗಳನ್ನು ಪಡೆದರೆ, ಕೆಮಿ ಬಡೆನೋಚ್ 49 ಮತಗಳನ್ನು ಪಡೆದಿದ್ದಾರೆ.

Published On - 11:13 am, Sat, 16 July 22

Follow Us
Web contact
Web contact

TV9 Kannada

Read More
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ