ಅಂಗಾಂಗ ದಾನದ ಮೂಲಕ ಇಬ್ಬರು ಯೋಧರು ಸೇರಿದಂತೆ ಐವರ ಜೀವ ಉಳಿಸಿದ ಮೆದುಳು ನಿಷ್ಕ್ರಿಯಗೊಂಡ ಮಹಿಳೆ
ಮೆದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಇಬ್ಬರು ಸೈನಿಕರು ಸೇರಿದಂತೆ ಒಟ್ಟು ಐವರಿಗೆ ಮರುಜನ್ಮ ನೀಡಿದಂತಾಗಿದೆ. ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.

ಮೆದುಳು ನಿಷ್ಕ್ರಿಯಗೊಂಡ ಮಹಿಳೆಯೊಬ್ಬರ ಅಂಗಾಂಗ ದಾನ ಮಾಡುವ ಮೂಲಕ ಇಬ್ಬರು ಸೈನಿಕರು ಸೇರಿದಂತೆ ಒಟ್ಟು ಐವರಿಗೆ ಮರುಜನ್ಮ ನೀಡಿದಂತಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿರುವ ಕಮಾಂಡ್ ಹಾಸ್ಪಿಟಲ್ ಸದರ್ನ್ ಕಮಾಂಡ್ (ಸಿಎಚ್‌ಎಸ್‌ಸಿ)ಯಲ್ಲಿ ಇಬ್ಬರು ಸೇನಾ ಯೋಧರು ಸೇರಿದಂತೆ ಐವರಿಗೆ ಮಹಿಳೆಯ ಅಂಗಾಗಳನ್ನು ಕಸಿ ಮಾಡಲಾಗಿದೆ. ಮಹಿಳೆಯು ತನ್ನ ಜೀವನದ ಕೊನೆಯ ಹಂತದಲ್ಲಿ CHSC ಪುಣೆಗೆ ಕರೆತರಲಾಯಿತು ಎಂದು ಸುದ್ದಿ ಸಂಸ್ಥೆ ANI ಶನಿವಾರ ಮುಂಜಾನೆ ವರದಿ ಮಾಡಿದೆ.
ಆಸ್ಪತ್ರೆಯ ಕಸಿ ಸಂಯೋಜಕರೊಂದಿಗಿನ ಚರ್ಚೆಯ ನಂತರ ಮಹಿಳೆಯ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದಾರೆ. ಅದರಂತೆ ಅಗತ್ಯ ಅನುಮತಿಗಳನ್ನು ಪಡೆದ ನಂತರ ಕಸಿ ಮಾಡುವ ವೈದ್ಯರ ತಂಡ ತಕ್ಷಣ ಸಕ್ರಿಯವಾಗಿ ಗುರುವಾರ ರಾತ್ರಿ ಮತ್ತು ಶುಕ್ರವಾರದ ಮುಂಜಾನೆ ನಡುವೆ ಕಾರ್ಯಸಾಧ್ಯವಾದ ಅಂಗಗಳನ್ನು ಮತ್ತು ಮೂತ್ರಪಿಂಡಗಳನ್ನು ಇಬ್ಬರು ಸೈನಿಕರಿಗೆ ಕಸಿ ಮಾಡಿತು. ಮಹಿಳೆಯ ಕಣ್ಣುಗಳನ್ನು CH(SC)-ಆರ್ಮ್ಡ್ ಫೋರ್ಸಸ್ ಮೆಡಿಕಲ್ ಕಾಲೇಜ್ ಕಾಂಪ್ಲೆಕ್ಸ್‌ನಿಂದ ಸಂರಕ್ಷಿಸಲಾಗಿದ್ದು, ಆಕೆಯ ಯಕೃತ್ತನ್ನು ಪುಣೆಯ ರೂಬಿ ಹಾಲ್ ಕ್ಲಿನಿಕ್‌ನಲ್ಲಿನ ರೋಗಿಯೊಬ್ಬರಿಗೆ ನೀಡಲಾಗಿದೆ.
Organ donation by a young brain-dead woman saves the life of 5 people including 2 serving Army soldiers in Command Hospital Southern Command (CHSC) in Pune: Defence PRO pic.twitter.com/AbeSgQNdLG
— ANI (@ANI) July 15, 2022
ಈ ಬಗ್ಗೆ ಮಾಹಿತಿ ನೀಡಿದ ರಕ್ಷಣಾ ಪಿಆರ್ಒ, “ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಜೀವ ಉಳಿಯುವ ಲಕ್ಷಣಗಳು ಇರಲಿಲ್ಲ. ಹೀಗಾಗಿ ಆಸ್ಪತ್ರೆಯ ಕಸಿ ಸಂಯೋಜಕರೊಂದಿಗೆ ಚರ್ಚಿಸಿದ ನಂತರ ಕುಟುಂಬದವರು ಮಹಿಳೆಯ ಅಂಗಗಳನ್ನು ತೀವ್ರ ಅಗತ್ಯವಿರುವ ರೋಗಿಗಳಿಗೆ ದಾನ ಮಾಡಬೇಕೆಂದು ಬಯಸಿದರು” ಎಂದರು. “ಸಾವಿನ ನಂತರ ಅಂಗಾಂಗ ದಾನದ ಪರೋಪಕಾರಿ ಸೂಚಕ ಮತ್ತು ಆಸ್ಪತ್ರೆಯಲ್ಲಿನ ಉತ್ತಮ ಸಂಘಟಿತ ಪ್ರಯತ್ನವು ಐದು ತೀವ್ರ ಅಸ್ವಸ್ಥ ರೋಗಿಗಳಿಗೆ ಜೀವನ ಮತ್ತು ದೃಷ್ಟಿಯನ್ನು ನೀಡಿತು” ಎಂದು ಹೇಳಿದರು.
ಜೂನ್‌ನಲ್ಲಿ ಅಪಘಾತಕ್ಕೀಡಾದ ಬಿಹಾರದ ಮಾಜಿ ಸೇನಾಧಿಕಾರಿಯೊಬ್ಬರ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಅವರ ಯಕೃತ್ತು ಮತ್ತು ಎರಡು ಮೂತ್ರಪಿಂಡಗಳನ್ನು ಉತ್ತರ ಪ್ರದೇಶದಲ್ಲಿ ಮೂರು ವಿಭಿನ್ನ ರೋಗಿಗಳಿಗೆ ಕಸಿ ಮಾಡಲಾಯಿತು. ಅವರ ಯಕೃತ್ತನ್ನು ಲಕ್ನೋದ ಕಿಂಗ್ ಗೆರೋಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಪ್ರತಾಪ್‌ಗಢದ 39 ವರ್ಷದ ರೋಗಿಗೆ ಮತ್ತು ಅವರ ಮೂತ್ರಪಿಂಡಗಳನ್ನು ಇತರ ಇಬ್ಬರು ರೋಗಿಗಳಿಗೆ ಕಸಿ ಮಾಡಲಾಯಿತು.
Published On - 9:34 am, Sat, 16 July 22