Viral Video: 2000 ಬಿಯರ್ ಬಾಟಲ್ ರಸ್ತೆಗೆ ಬಿದ್ದು ಪುಡಿಪುಡಿ; ಕ್ಲೀನ್ ಮಾಡಿದ ‘ಹೀರೋಗಳಿಗೆ’ ಧನ್ಯವಾದ ಹೇಳಿದ ಕಂಪನಿ
2ಸಾವಿರ ಬಿಯರ್ ಬಾಟಲ್ಗಳು ಟ್ರಕ್ನಿಂದ ರಸ್ತೆಗೆ ಬಿದ್ದು ಪುಡಿಯಾಗಿ ಹೊಳೆಯಂತೆ ಬಿಯರ್ ಹರಿದು ಹೋದ ವಿಡಿಯೋ ವೈರಲ್ ಆಗುತ್ತಿದೆ. ರಸ್ತೆಯನ್ನು ಸ್ವಚ್ಛಗೊಳಿಸಲು ಚಾಲಕನೊಂದಿಗೆ ನೆರವಾದ ಸಾರ್ವಜನಿಕರಿಗೆ ಕಂಪನಿಯು ಧನ್ಯವಾದಗಳನ್ನು ತಿಳಿಸಿದೆ.
ವೈರಲ್ ವಿಡಿಯೋ: ಚಾಲಕನು ಟ್ರಕ್ ಅನ್ನು ತಿರುಗಿಸುವಾಗ ಬರೋಬ್ಬರಿ 2ಸಾವಿರ ಬಿಯರ್ (Beer) ಬಾಟಲ್ಗಳು ರಸ್ತೆಗೆ ಬಿದ್ದು ಪುಡಿಪುಡಿಯಾದ ಘಟನೆಯ ವಿಡಿಯೋ ವೈರಲ್ (Viral Video) ಆಗುತ್ತಿದೆ. ಈ ನಡುವೆ ರಸ್ತೆಯನ್ನು ಸ್ವಚ್ಛಗೊಳಿಸಿದ ಸಾರ್ವಜನಿಕರಿಗೆ ಬಿಯರ್ ಕಂಪನಿಯು ಹೇಳಿದ ಧನ್ಯವಾದದ ಪೋಸ್ಟ್ ಕೂಡ ಟ್ರೆಂಡಿಂಗ್ (Trending) ಪಡೆದುಕೊಂಡಿದೆ. ಅಷ್ಟಕ್ಕೂ ಈ ಘಟನೆ ದಕ್ಷಿಣ ಕೊರಿಯಾದಲ್ಲಿ ಜೂನ್ 29 ರಂದು ನಡೆದಿದೆ.
ವೈರಲ್ ವಿಡಿಯೋದಲ್ಲಿ ಇರುವಂತೆ, ತಿರುವು ರಸ್ತೆಯಲ್ಲಿ ಹೋಗುವಾಗ ಟ್ರಕ್ನಲ್ಲಿದ್ದ ಬಾಟಲ್ಗಳ ಬಾಕ್ಸ್ಗಳು ರಸ್ತೆಗೆ ಬಿದ್ದು ಪುಡಿಯಾಗಿದ್ದು, ಸಂಪೂರ್ಣ ಬಿಯರ್ ರಸ್ತೆಯಲ್ಲಿ ಕೊಚ್ಚಿಹೋಗಿದೆ. ನಂತರ ಟ್ರಕ್ ಚಾಲಕನು ರಸ್ತೆಯನ್ನು ಸ್ವಚ್ಛಗೊಳಿಸಲು ಮುಂದಾಗಿದ್ದು, ಈ ವೇಳೆ ಸಾರ್ವಜನಿಕರು ಕೂಡ ಚಾಲಕನೊಂದಿಗೆ ಸೇರಿ ಕೇವಲ ಅರ್ಧಗಂಟೆಯಲ್ಲಿ ರಸ್ತೆಯನ್ನು ಸ್ವಚ್ಛಗೊಳಿಸುವಲ್ಲಿ ನೆರವಾಗಿದ್ದಾರೆ. ಅದರಂತೆ ವಾಹನಗಳ ಸುಗಮ ಸಂಚಾರಕ್ಕೂ ಕಾರಣವಾಯಿತು. ಈ ದೃಶ್ಯಾವಳಿ ಬಿಯರ್ ಕಂಪನಿಯ ಹೃದಯಗೆದ್ದಿದ್ದು, ಸಾರ್ವಜನಿಕರಿಗೆ ಧನ್ಯವಾದಗಳನ್ನು ಅರ್ಪಿಸಿ “ನಾವು ಚುಂಚಿಯಾನ್ನಲ್ಲಿ ನಿಜವಾದ ಹೀರೋಗಳನ್ನು ಹುಡುಕುತ್ತಿದ್ದೇವೆ” ಎಂದಿದೆ.
South Korea:
A truck spilled 2,000 bottles of beer on the road.
CCTV footage showed people approaching the driver one by one to help clean up.
The beer company (CASS) is now trying to find the heroes who helped out. Team game… pic.twitter.com/FQySL35y1z
— Rex Chapman?? (@RexChapman) July 14, 2022
“ನಿಜವಾದ ಪ್ರಭಾವ ಬೀರಿದ ನಾಗರಿಕರೇ, ನಾವು ನಿಮಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇವೆ. ಚಾಲಕನನ್ನು ವಜಾಗೊಳಿಸದೆ ಅಥವಾ ಅವರ ವಿರುದ್ಧ ಯಾವುದೇ ಶಿಸ್ತಿನ ಕ್ರಮಕೈಗೊಳ್ಳದೆ ಅಪಘಾತವನ್ನು ವಿಮೆಯಿಂದ ಮುಚ್ಚಲಾಗಿದೆ” ಎಂದು ಕಂಪನಿ ಹೇಳಿಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಕಾಣಿಸಿಕೊಂಡಾಗಿನಿಂದ ಕೊರಿಯಾದ ಜನರನ್ನು ನೆಟಿಜನ್‌ಗಳು ಶ್ಲಾಘಿಸಿದ್ದಾರೆ.
ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, “ಕೊರಿಯಾವು ಭೂಮಿಯ ಮೇಲಿನ ಸ್ವಚ್ಛ ರಾಷ್ಟ್ರಗಳಲ್ಲಿ ಒಂದಾಗಿದೆ. ಅಲ್ಲಿನ ಜನರು ತಮ್ಮ ರಾಷ್ಟ್ರದ ಮೇಲೆ ಪ್ರೀತಿ ಮತ್ತು ಭಕ್ತಿಯನ್ನು ಹೊಂದಿದ್ದಾರೆ. ಇದು ಅದ್ಭುತವಾಗಿದೆ” ಎಂದು ಹೇಳಿದ್ದಾರೆ.
Published On - 7:38 am, Sat, 16 July 22