Viral Video: ಉಕ್ಕಿ ಹರಿಯುತ್ತಿದ್ದ ನದಿಗೆ ಹಾರಿದ ಯುವಕ ನಾಪತ್ತೆ, ವೈರಲ್ ವಿಡಿಯೋ ಇಲ್ಲಿದೆ
ಬಿಸಿ ರಕ್ತದ ಯುವಕ ಉಕ್ಕಿ ಹರಿಯುವ ನದಿಗೆ ಹಾರಿ ನಾಪತ್ತೆಯಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಸದ್ಯ ಯುವಕ ನದಿಗೆ ಹಾರುವ ವಿಡಿಯೋ ವೈರಲ್ ಆಗುತ್ತಿದೆ.
ಕೆಲವರು ಬಿಸಿ ರಕ್ತ ಇದೆ ಎಂದು ಸಾಹಡ ಮಾಡಲು ಹೋಗಿ ಜೀವಕ್ಕೆ ಕುತ್ತು ತರುತ್ತಾರೆ. ಇಂತಹ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದೆಯೇ ನಡೆದಿವೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳನ್ನು ಕಾಣಬಹುದು. ಇದೀಗ ಯುವಕನೊಬ್ಬ ಉಕ್ಕಿ ಹರಿಯುತ್ತಿರುವ ನದಿಗೆ ಹಾರಿ ನಾಪತ್ತೆಯಾಗಿರುವ ಘಟನೆಯೊಂದು ನಡೆದಿದ್ದು, ಯುವಕ ನದಿಗೆ ಹಾರುವ ವಿಡಿಯೋ ವೈರಲ್ ಆಗುತ್ತಿದೆ. ವೈರಲ್ ವಿಡಿಯೋ(Viral Video), ಯುವಕನೊಬ್ಬ ಸೇತುವೆ ಮೇಲೆ ನಿಂತು ಉಕ್ಕಿ ಹರಿಯುತ್ತಿರುವ ನದಿಗೆ ಹಾರುವುದನ್ನು ತೋರಿಸುತ್ತದೆ.
ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ಭಾರೀ ಮಳೆಯಿಂದಾಗಿ ಗಿರ್ನಾ ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಈ ವೇಳೆ ಬಿಸಿ ರಕ್ತದ ಯುವಕ ದುಸ್ಸಾಹಸಕ್ಕೆ ಇಳಿದು ಜೀವಕ್ಕೆ ಕುತ್ತು ತಂದಿದ್ದಾನೆ. ಯುವಕ ನದಿಗೆ ಹಾರುವುದನ್ನು ವಿಡಿಯೋ ಮಾಡಲಾಗಿದ್ದು, ಒಂದಷ್ಟು ಮಂದಿ ಆತನ ಸಾಹಸವನ್ನು ನೋಡಲು ಬರುವುದನ್ನು ವಿಡಿಯೋದಲ್ಲಿ ಕಾಣಬಹುದು. ಯುವಕ ಹಾರುವಾಗ ಓಹ್ ಎಂದು ಹುರಿದುಂಬಿಸುವಂತೆ ಚೀರಾಡುವುದನ್ನು ವಿಡಿಯೋದಲ್ಲಿ ಕೇಳಿಸಬಹುದು.
मालेगाव, नाशिक : स्टंटबाजी करत तरुणाने गिरणा पुलावरुन नदीत मारली उडी; बेपत्ता तरुणाचा शोध सुरु…#Nashik #Malegaon #HeavyRain #Stunt #ViralVideo
Video Credit: Abhijeet Sonawane pic.twitter.com/zB3HgUIQEW
— Akshay Baisane (अक्षय बैसाणे) (@Baisaneakshay) July 14, 2022
ನದಿಗೆ ಹಾರಿದ ನಂತರ ಯುವಕ ಮೇಲೆಬರದೆ ನಾಪತ್ತೆಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ನದಿಯಲ್ಲಿ ನಾಪತ್ತೆಯಾದವನನ್ನು ನಯೀಮ್ ಅಮೀನ್ ಎಂದು ಗುರುತಿಸಲಾಗಿದ್ದು, ಅಧಿಕಾರಿಗಳು ಈತನ ಪತ್ತೆಗಾಗಿ ಗುರುವಾರ ತಡರಾತ್ರಿಯವರೆಗೂ ಹುಡುಕಾಡಿದರೂ ಪತ್ತೆಯಾಗಲಿಲ್ಲ.
ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಒಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯು ಪುಣೆ, ನಾಸಿಕ್ ಮತ್ತು ಇತರ 3 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಪಾಲ್ಘರ್ ಜಿಲ್ಲೆಯ ವಸಾಯಿ ನಗರದಲ್ಲಿ ನಿನ್ನೆ ಸಂಭವಿಸಿದ ಭೂಕುಸಿತದಲ್ಲಿ ತಂದೆ ಮತ್ತು ಮಗಳು ಸಾವನ್ನಪ್ಪಿದ್ದಾರೆ. ಅಲ್ಲದೆ ಗೊಂಡಿಯಾ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ ನಾಲ್ಕು ಜನರು ಕೊಚ್ಚಿ ಹೋಗಿದ್ದಾರೆ.
Published On - 6:29 pm, Fri, 15 July 22