Lady Singham: ಕೊನೆಗೂ ಲೇಡಿ ಸಿಂಗಮ್ ಅರೆಸ್ಟ್​..!

Lady Singham Seema Jakhar: ಒಂದು ಕಾಲದಲ್ಲಿ ಬರ್ಲುಟ್, ಪಾಲಿ ಜಿಲ್ಲೆಯ ಸಂದೇರಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲೇಡಿ ಸಿಂಗಮ್ ಆಗಿ ಮೆರೆದಿದ್ದ ಸೀಮಾ ಜಾಖರ್ ಅವರ ಅಸಲಿ ಮುಖವಾಡ ಕಳಚಿ ಬಿದ್ದಿದೆ.

Lady Singham: ಕೊನೆಗೂ ಲೇಡಿ ಸಿಂಗಮ್ ಅರೆಸ್ಟ್​..!
Seema Jakhar
Follow us
| Updated By: ಝಾಹಿರ್ ಯೂಸುಫ್

Updated on:Jun 27, 2022 | 7:52 PM

ಕಾನೂನು ರಕ್ಷಕರೇ ಭಕ್ಷಕರಾದಾಗ ಸಮಾಜ ಹೇಗೆ ತಾನೆ ಸುವ್ಯವಸ್ಥಿತವಾಗಿ ಇರಲು ಸಾಧ್ಯ ಹೇಳಿ…ಹೌದು, ರಕ್ಷಣೆ ಮಾಡಬೇಕಾದ ಪೊಲೀಸ್ ಅಧಿಕಾರಿಯೇ ಭಕ್ಷಕರಾಗಲು ಹೋಗಿ ಇದೀಗ ಜೈಲು ಸೇರಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಸಿರೋಹಿ ಜಿಲ್ಲೆಯ ಬರ್ಲುಟ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಸೀಮಾ ಜಾಖರ್ ಅವರನ್ನು ರಾಜಸ್ಥಾನ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಅದು ಕೂಡ ಬಿಗ್ ಡೀಲ್​ಗೆ ಸಂಬಂಧಿಸಿದ ಪ್ರಕರಣದ ಸಲುವಾಗಿ ಎಂಬುದು ವಿಶೇಷ. ಸಿರೋಹಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲೇಡಿ ಸಿಂಗಮ್ ಎಂದೇ ಖ್ಯಾತರಾಗಿದ್ದ ಸೀಮಾ ಜಾಖರ್ ಹೆಸರು ಡ್ರಗ್ಸ್ ಮಾಫಿಯಾ ಜೊತೆ ತಳುಕು ಹಾಕಿಕೊಂಡಿತ್ತು. ಅಷ್ಟೇ ಅಲ್ಲದೆ ಡ್ರಗ್ಸ್​ ಕಳ್ಳಸಾಗಣೆದಾರರನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪ ಎದುರಿಸಿದ್ದರು. ಇದೀಗ ಈ ಆರೋಪಗಳು ನಿಜವಾಗಿದೆ.

ಏಕೆಂದರೆ ಬರ್ಲುಟ್ ಪೊಲೀಸರು ಕಳೆದ ವರ್ಷ ಡ್ರಗ್ಸ್ ಜಾಲವೊಂದನ್ನು ಬೇಧಿಸಿದ್ದರು. ಅಲ್ಲದೆ ಮಾದಕ ದ್ರವ್ಯ ಸಾಗಣೆದಾರರ ತಂಡವನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಅವರ ವಾಹನದಲ್ಲಿ 141 ಕೆಜಿ ವ್ಯಸನಕಾರಿ ಮಾದಕವಸ್ತು ಪತ್ತೆಯಾಗಿತ್ತು. ಆದರೆ ಬಂಧಿತರಾದ ಆರೋಪಿಗಳು ಕೆಲವೇ ಗಂಟೆಗಳ ಅಂತರದಲ್ಲಿ ಪರಾರಿಯಾಗಿದ್ದರು. ಹೀಗೆ ಪರಾರಿಯಾಗಲು ಸಹಾಯ ಮಾಡಿದ್ದು ಸಬ್​​ ಇನ್​ಸ್ಪೆಕ್ಟರ್ ಸೀಮಾ ಜಾಖರ್.

ಅಂದು ಕರ್ತವ್ಯದಲ್ಲಿ ಸೀಮಾ ಜಾಖರ್ ಡ್ರಗ್ಸ್ ಡೀಲರ್​ಗಳೊಂದಿಗೆ ಡೀಲ್ ಕುದುರಿಸಿದ್ದರು. 10 ಲಕ್ಷ ರೂಪಾಯಿ ಪಡೆಯುವ ಮೂಲಕ ಮಾದಕವಸ್ತು ಸಾಗಣೆದಾರರು ತಪ್ಪಿಸಿಕೊಳ್ಳಲು ನೇರ ಸಹಾಯ ಮಾಡಿದ್ದರು. ಈ ಆರೋಪದ ನಂತರ ಆಕೆ ಮತ್ತು ಮೂವರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿತ್ತು. ಆ ಬಳಿಕ ನಡೆದ ತನಿಖೆಯಲ್ಲಿ ಸೀಮಾ ಜಾಖರ್ ಆರೋಪಿಗಳೊಂದಿಗೆ ಡೀಲ್ ಮಾಡಿಕೊಂಡಿರುವ ದೃಶ್ಯಾವಳಿಗಳು ಹೊಟೇಲ್​ವೊಂದ ಸಿಸಿಟಿವಿಯಲ್ಲಿ ಸೆರೆಯಾಗಿರುವುದು ಬೆಳಕಿಗೆ ಬಂದಿವೆ. ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದ ನಂತರ ಸೀಮಾ ಜಾಖರ್ ಅವರನ್ನು ಪೊಲೀಸ್ ಸೇವೆಯಿಂದ ವಜಾಗೊಳಿಸಲಾಗಿತ್ತು.

ಇದನ್ನೂ ಓದಿ
Image
Viral Video: ಒಳಗೆ ಸೇರಿದರೆ ಗುಂಡು…ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಯುವತಿಯ ರಂಪಾಟ..!
Image
Crime Story: ಪೊಲೀಸ್ ಮಗ, ಎಲ್​ಎಲ್​ಬಿ ಪದವೀಧರ: ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್?
Image
Railway Recruitment 2022: SSLC ಪಾಸಾದವರಿಗೆ ಸುರ್ವಣಾವಕಾಶ: ರೈಲ್ವೆಯಲ್ಲಿದೆ ಉದ್ಯೋಗಾವಕಾಶ
Image
Crime Story: ಕಿಂಗ್ ಆಫ್ ಕ್ರೈಮ್: ದಾವೂದ್ ಇಬ್ರಾಹಿಂಗೆ ನಡುಕ ಹುಟ್ಟಿಸಿದ್ದ ಸ್ಲಂ ಡಾನ್

ಇದಾಗ್ಯೂ ಸೀಮಾ ಜಾಖರ್ ಅವರನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಹಲವು ಬಾರಿ ತಪ್ಪಿಸಿಕೊಂಡಿದ್ದ ಸ್ವಯಂ ಘೋಷಿತ ಲೇಡಿ ಸಿಂಗಮ್​ರನ್ನು ಕೊನೆಗೂ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿಯ ಮೇರೆ ಜೋಧ್‌ಪುರದಲ್ಲಿರುವ ಮನೆಯ ಮೇಲೆ ದಾಳಿ ಮಾಡಿದ ಸ್ವರೂಪಗಂಜ್ ಪೊಲೀಸರು ಸೀಮಾ ಜಾಖರ್​ ಅವರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಸೋಮವಾರ ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದೆ ಎಂದು ಸಿರೋಹಿ ಎಸ್​ಪಿ ಧರ್ಮೇಂದ್ರ ಸಿಂಗ್ ಯಾದವ್ ಹೇಳಿದ್ದಾರೆ.

ಒಂದು ಕಾಲದಲ್ಲಿ ಬರ್ಲುಟ್, ಪಾಲಿ ಜಿಲ್ಲೆಯ ಸಂದೇರಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲೇಡಿ ಸಿಂಗಮ್ ಆಗಿ ಮೆರೆದಿದ್ದ ಸೀಮಾ ಜಾಖರ್ ಅವರ ಅಸಲಿ ಮುಖವಾಡ ಕಳಚಿ ಬಿದ್ದಿದೆ. ಹೌದು, ಕಾನೂನು ರಕ್ಷಕರೇ ಭಕ್ಷಕರಾದಾಗ ಉತ್ತಮ ಸಮಾಜ ಹೇಗೆ ನಿರ್ಮಾಣವಾಗುತ್ತೆ ಹೇಳಿ? .

Published On - 7:52 pm, Mon, 27 June 22

ಉದಾಹರಣೆ ಮೂಲಕ ಇಕ್ಕಟ್ಟಿನ ಪರಿಸ್ಥಿತಿ ವಿವರಿಸಿದ ರಮೇಶ್ ಅರವಿಂದ್
ಉದಾಹರಣೆ ಮೂಲಕ ಇಕ್ಕಟ್ಟಿನ ಪರಿಸ್ಥಿತಿ ವಿವರಿಸಿದ ರಮೇಶ್ ಅರವಿಂದ್
ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ