ಕರ್ಕಶ ಶಬ್ಧ ಮಾಡುತ್ತಿದ್ದ ವಾಹನಗಳ ಸೈಲೆನ್ಸರ್​ ನಾಶಗೊಳಿಸಿದ ಪೊಲೀಸರು, 190ಕ್ಕೂ ಹೆಚ್ಚು ಪ್ರಕರಣ ದಾಖಲು!

ಕರ್ಕಶ ಶಬ್ದ ಬರುವ ಸೈಲೆನ್ಸರ್​ಗಳನ್ನು ಜಪ್ತಿ ಮಾಡಿ ನಾಶಗೊಳಿಸಿದ ರಾಯಚೂರು ಪೊಲೀಸರು. ಅನೈತಿಕ ಸಂಬಂಧ ಶಂಕಿಸಿ ಪತ್ನಿಯ ರುಂಡ ಮುಂಡ ಬೇರೆ ಮಾಡಿದ ಪತಿ. ತುಮಕೂರಿನ ದೇವಾಲಯವೊಂದಕ್ಕೆ ನುಗ್ಗಿದ ಕಳ್ಳರು ಹುಂಡಿಯಲ್ಲಿದ್ದ ಹಣ, ದೇವರ ಬೆಳ್ಳಿಯಾಭರಣದೊಂದಿಗೆ ಪರಾರಿ.

ಕರ್ಕಶ ಶಬ್ಧ ಮಾಡುತ್ತಿದ್ದ ವಾಹನಗಳ ಸೈಲೆನ್ಸರ್​ ನಾಶಗೊಳಿಸಿದ ಪೊಲೀಸರು, 190ಕ್ಕೂ ಹೆಚ್ಚು ಪ್ರಕರಣ ದಾಖಲು!
ಸೈಲೆನ್ಸರ್ ನಾಶಗೊಳಿಸಿದ ಪೊಲೀಸರು
Follow us
TV9 Web
| Updated By: Rakesh Nayak Manchi

Updated on:Jun 28, 2022 | 9:06 AM

ರಾಯಚೂರು: ಬೈಕ್, ಕಾರುಗಳ ಮೇಲೆ ಕ್ರೇಜ್ (Craze) ಹೊಂದಿರುವ ಒಂದಷ್ಟು ಯುವ ವಾಹನ ಸವಾರರು ತಮ್ಮ ವಾಹನಗಳಿಗೆ ಕರ್ಕಶ ಶಬ್ದ ಬರುವ ಸೈಲೆನ್ಸರ್​ ಅಳವಡಿಸುತ್ತಾರೆ. ಜಿಲ್ಲಾದ್ಯಂತ ಇಂಥ ಸೈಲೆನ್ಸರ್​(Silencer)ಗಳ ಅಳವಡಿಕೆ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಫೀಲ್ಡ್​ಗೆ ಇಳಿದು ವಾಹನ ಸವಾರರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ದೋಷಪೂರಿತ ಸೈಲೆನ್ಸರ್​ಗಳನ್ನು ನಿಗ್ರಹಿಸಲು ಜಿಲ್ಲಾದ್ಯಂತ ಕಾರ್ಯಾರಣೆಗೆ ಇಳಿದ ಪೊಲೀಸರು,  ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಪತ್ತೆಯಾದ ಕರ್ಕಶ ಶಬ್ಧ ಹೊರಹಾಕುತ್ತಿದ್ದ ದ್ವಿಚಕ್ರ, ತಿಚಕ್ರ ವಾಹನಗಳು ಜಪ್ತಿ ಮಾಡಿದ್ದಾರೆ. ಅದರಂತೆ ಒಟ್ಟು 197 ಐಎಂವಿ ಪ್ರಕರಣಗಳನ್ನು ದಾಖಲಿಸಿ ವಾಹನ ಸವರಾರರಿಂದ 2.9 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಇದೀಗ ಜಪ್ತಿಮಾಡಲಾಗಿದ್ದ ವಾಹನಗಳಿಂದ ಸೈಲೆನ್ಸರ್​ಗಳನ್ನು ತೆಗೆದು ನಗರದ ಡಿಎಆರ್ ಮೈದಾನದಲ್ಲಿ ರೋಡ್ ರೋಲರ್ ಹತ್ತಿಸಿ ನಾಶಪಡಿಸಲಾಗಿದೆ.

ಇದನ್ನೂ ಓದಿ: ಆರತಕ್ಷತೆಗೆ ಸಿದ್ದತೆಯಲ್ಲಿದ್ದ ಯುವತಿಯನ್ನು ಕಿಡ್ನಾಪ್ ಮಾಡಿದ ಕಾರ್ಪೋರೆಟರ್? ನ್ಯಾಯಕ್ಕಾಗಿ ಅಂಗಲಾಚುತ್ತಿರುವ ಯುವತಿ

ತುಮಕೂರು: ದೇವಾಲಯದ ಹುಂಡಿ ಕಳ್ಳತನ(Theft) ಪ್ರಕರಣ ಮಧುಗಿರಿ ತಾಲೂಕಿನ ಸಿ ವೀರಾಪುರ ಗ್ರಾಮದಲ್ಲಿ ನಡೆದಿದೆ. ವೀರಭದ್ರಸ್ವಾಮಿ ದೇಗುಲದ ಬೀಗ ಒಡೆದು ಹುಂಡಿಗೆ ಕೈಹಾಕದಿ ಖದೀಮರು, ಸುಮಾರು 2 ಲಕ್ಷ ನಗದು ಹಾಗೂ ದೇವರ ಮೇಲಿದ್ದ ಬೆಳ್ಳಿ ಕಿರೀಟವನ್ನು ಕದ್ದು ಪರಾರಿಯಾಗಿದ್ದಾರೆ.

ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿ ವೀರಾಪುರ ಗ್ರಾಮದಲ್ಲಿ ವೀರಭದ್ರಸ್ವಾಮಿ ದೇಗುಲದ ಮೇಲೆ ವಕ್ರದೃಷ್ಟಿ ಇಟ್ಟ ಕಳ್ಳರು, ನಿನ್ನೆ ರಾತ್ರಿ ಬೀಗ ಜಡಿದು ಒಳಗೆ ನುಗ್ಗಿ ಹುಂಡಿಯಲ್ಲಿದ್ದ ಕಾಣಿಯ ಹಣವನ್ನು ದೋಚಿದ್ದಾರೆ. ಅಲ್ಲದೆ ಖಾಲಿ ಹುಂಡಿಯನ್ನು ಕಾಲುವೆಗೆ ಎಸೆದು ದೇವರ ಬೆಳ್ಳಿ ಕಿರೀಟ, ದೇವರ ಮೇಲಿದ್ದ ಬೆಳ್ಳಿ, ಬೆಳ್ಳಿ ಛತ್ರಿ, ಬೆಳ್ಳಿ ಆಭರಣಗಳ ಸಹಿತ ಪರಾರಿಯಾದ್ದಾರೆ.

ಇದನ್ನೂ ಓದಿ: Lady Singham: ಕೊನೆಗೂ ಲೇಡಿ ಸಿಂಗಮ್ ಅರೆಸ್ಟ್​..!

ಮೈಸೂರು: ಅನೈತಿಕ ಸಂಬಂಧ (Immoral relationship) ಶಂಕೆ ಹಿನ್ನೆಲೆ ಪತ್ನಿಯನ್ನೇ ಮಾರಕಾಸ್ತ್ರಗಳಿಂದ ಪತಿ ಕೊಲೆ(Murder)ಗೈದ ಘಟನೆ ಮೈಸೂರು ತಾಲೂಕಿನ ಚೆಟ್ಟನಹಳ್ಳಿಯಲ್ಲಿ ನಡೆದಿದೆ. ಪುಟ್ಟಮ್ಮ(40) ಬರ್ಬರ ಹತ್ಯೆಯಾದ ಮಹಿಳೆ. ಪತ್ನಿಯನ್ನು ಕೊಚ್ಚಿ ಕೊಲೆಗೈದ ಬಳಿಕ ಆರೋಪಿ ದೇವರಾಜ್ ಪರಾರಿಯಾಗಿದ್ದು, ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನೈತಿಕ ಸಂಬಂಧ ಶಂಕಿಸಿ ಮಾರಕಾಸ್ತ್ರದಿಂದ ಪತ್ನಿಯ ರುಂಡ ಮುಂಡ ಬೇರೆ ಮಾಡಿ ಹತ್ಯೆಗೈಯಲಾಗಿದ್ದು, ಪೊಲೀಸರು ಆರೋಪಿಯ ಬಂಧನಕ್ಕೆ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ನಾಲ್ಕು ಅಂತಸ್ತಿನ ಕಟ್ಟದ ಕುಸಿತ! 7 ಮಂದಿಯ ರಕ್ಷಣೆ, ಅವಶೇಷಗಳಡಿ 20ಕ್ಕೂ ಹೆಚ್ಚು ಜನ ಸಿಲುಕಿರುವ ಶಂಕೆ

Published On - 9:05 am, Tue, 28 June 22

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ