Viral Video: ಒಳಗೆ ಸೇರಿದರೆ ಗುಂಡು…ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಯುವತಿಯ ರಂಪಾಟ..!
Viral Videos: ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದರೂ ಯುವತಿಯ ಅಮಲು ಮಾತ್ರ ಇಳಿದಿರಲಿಲ್ಲ. ಅಲ್ಲದೆ ರಸ್ತೆಯಲ್ಲಿ ಹಾದುಹೋಗುವವರನ್ನೂ, ಚಾಲಕನನ್ನು ಅವಾಚ್ಯ ಶಬ್ದಗಳಿಂದ ತೀವ್ರವಾಗಿ ನಿಂದಿಸಿದ್ದಾಳೆ.
ಮುಂಬೈನ ಪ್ರಮುಖ ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿ ಯುವತಿಯೊಬ್ಬಳು ಮೈಮರೆತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಶೆಯಲ್ಲಿ ತೇಲುತ್ತಿದ್ದ ಯುವತಿಯು ಪೊಲೀಸರು, ಕ್ಯಾಬ್ ಚಾಲಕರು ಮತ್ತು ರಸ್ತೆಯಲ್ಲಿ ಸಂಚರಿಸುವವರನ್ನು ನಿಂದಿಸುತ್ತಿರುವುದು ಈ ವಿಡಿಯೋದಲ್ಲಿ ಕಾಣಬಹುದು. ಮುಂಬೈನಲ್ಲಿ ಪಾರ್ಟಿ ಮುಗಿಸಿ ತಡರಾತ್ರಿ ವಾಪಾಸಾಗುತ್ತಿದ್ದ ವೇಳೆ ಮೂವರು ಯುವತಿಯರು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಕಂಠಪೂರ್ತಿ ಕುಡಿದಿದ್ದ ಯುವತಿಯು ಸವಾರಿ ವೇಳೆ ಕ್ಯಾಬ್ ಚಾಲಕನನ್ನು ನಿಂದಿಸಲು ಆರಂಭಿಸಿದ್ದಳು. ಜೊತೆಗೆ ಚಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ತಕ್ಷಣವೇ ಕಾರು ಚಾಲಕ ವಾಹನವನ್ನು ನಿಲ್ಲಿಸಿ ಯುವತಿಯರ ರಂಪಾಟದ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಅಷ್ಟೇ ಅಲ್ಲದೆ ಮುಂಬೈ ಪೊಲೀಸರಿಗೆ ಕರೆ ಮಾಡಿದ್ದಾರೆ.
Video 4 pic.twitter.com/I2S3MVZASd
ಇದನ್ನೂ ಓದಿ— Kungfu Pande ??2.0 (@pb3060) June 19, 2022
ಕಾರು ಚಾಲಕ ವಿಡಿಯೋ ಚಿತ್ರೀಕರಿಸುತ್ತಿದ್ದರೆ ಯುವತಿಯು ಪೋಸ್ ಕೊಡುತ್ತಾ, “ಹಲೋ, ನನ್ನ ಹೆಸರು ಅರ್ಚಿತಾ..” ಎಂದು ಏನು ಬೇಕಾದರೂ ಮಾಡಿಕೊಳ್ಳಿ ಎಂದು ರಾಜಾರೋಷವಾಗಿ ಹೇಳುತ್ತಿರುವುದನ್ನು ಕೇಳಬಹುದು. ಇದೇ ವೇಳೆ ತಡೆಯಲು ಮುಂದಾದ ಸ್ನೇಹಿತೆಗೆ ಕಪಾಳಮೋಕ್ಷ ಮಾಡಿದ್ದಾಳೆ. ಚಾಲಕ ಚಿತ್ರೀಕರಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ‘ಓಲಾ/ಉಬರ್ ಚಾಲಕರಿಗೆ ಹೇಗೆ ಕಿರುಕುಳ ನೀಡಲಾಗುತ್ತಿದೆ ಎಂಬುದನ್ನು ಜಗತ್ತಿಗೆ ತಿಳಿಸಿ’ ಎಂದು ಈ ವಿಡಿಯೋ ಮೂಲಕ ಕೇಳಿಕೊಂಡಿದ್ದಾರೆ.
Video 2 pic.twitter.com/GAgxVifzV7
— Kungfu Pande ??2.0 (@pb3060) June 19, 2022
ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದರೂ ಯುವತಿಯ ಅಮಲು ಮಾತ್ರ ಇಳಿದಿರಲಿಲ್ಲ. ಅಲ್ಲದೆ ರಸ್ತೆಯಲ್ಲಿ ಹಾದುಹೋಗುವವರನ್ನೂ, ಚಾಲಕನನ್ನು ಅವಾಚ್ಯ ಶಬ್ದಗಳಿಂದ ತೀವ್ರವಾಗಿ ನಿಂದಿಸಿದ್ದಾಳೆ. ಇನ್ನು ವೀಡಿಯೋ ಒಂದರಲ್ಲಿ ಯುವತಿ ಪೊಲೀಸ್ ಅಧಿಕಾರಿಯ ಕಾಲರ್ ಹಿಡಿದುಕೊಂಡು ನಿಂದಿಸುತ್ತಾ ಬೆದರಿಕೆ ಹಾಕುತ್ತಿರುವುದನ್ನು ಕಾಣಬಹುದು. ಪೊಲೀಸರು ಆಕೆಯನ್ನು ನಿಯಂತ್ರಿಸಲು ಯತ್ನಿಸಿದಾಗ ಆಕೆ ಕುಡಿದ ಮತ್ತಿನಲ್ಲಿ ಒದ್ದಿದ್ದಾಳೆ.
Video 4 pic.twitter.com/I2S3MVZASd
— Kungfu Pande ??2.0 (@pb3060) June 19, 2022
Video 5 pic.twitter.com/2uZwNlQ17U
— Kungfu Pande ??2.0 (@pb3060) June 19, 2022
ಸದ್ಯ ಯುವತಿಯ ಬೀದಿ ರಂಪಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೆ ಈ ಘಟನೆಯು ಮಾರ್ಚ್ ತಿಂಗಳಲ್ಲಿ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಮದ್ಯದ ಅಮಲಿನಲ್ಲಿ ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದಿದ್ದಕ್ಕಾಗಿ ಮೂವರು ಯುವತಿಯರ ವಿರುದ್ಧ ಈಗಾಗಲೇ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
Video 8 pic.twitter.com/bS1ZVP4Jzq
— Kungfu Pande ??2.0 (@pb3060) June 19, 2022
ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.