ಕಲಬುರಗಿ ಬಳಿ ಕೆಎಸ್ಆರ್ಟಿಸಿ ಮತ್ತು ಕ್ರೂಸರ್ ವಾಹನ ಡಿಕ್ಕಿ; ಓರ್ವ ಸಾವು, ಹಲವರಿಗೆ ಗಾಯ
ತಾಲೂಕಿನ ಗಂವ್ಹಾರ್ ಗ್ರಾಮದ ರಾಜಶೇಖರ್(40) ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಲಬುರಗಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ: ತಾಲೂಕಿನ ಸಿರನೂರು ಗ್ರಾಮದ ಬಳಿ ಕೆಎಸ್ಆರ್ಟಿಸಿ ಮತ್ತು ಕ್ರೂಸರ್ ವಾಹನ ನಡುವೆ ಡಿಕ್ಕಿಯಾಗಿ(Accident) ಕ್ರೂಸರ್ನಲ್ಲಿದ್ದ ಜೇವರ್ಗಿ ತಾಲೂಕಿನ ಗಂವ್ಹಾರ್ ಗ್ರಾಮದ ರಾಜಶೇಖರ್(40) ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಲಬುರಗಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿಯಲ್ಲಿ ರೌಡಿ ಶೀಟರ್ ಮೇಲೆ ಪೊಲೀಸರಿಂದ ಪೈರಿಂಗ್ ಕಿತ್ತೂರು ತಾಲೂಕಿನ ಚಿಕ್ಕ ನಂದಿಹಳ್ಳಿ ಗ್ರಾಮದ ಆರೋಪಿ ವಿಶಾಲ್ ಸಿಂಗ್ ಚವ್ಹಾಣ್ ಮೇಲೆ ಪೊಲೀಸರು ಪೈರಿಂಗ್ ಮಾಡಿದ್ದಾರೆ. ಸದ್ಯ ಬೆಳಗಾವಿಯ ಶಾಸ್ತ್ರಿನಗರದಲ್ಲಿ ವಾಸವಿರುವ ವಿಶಾಲ್ ಸಿಂಗ್, ಒಂಬತ್ತು ಕೇಸ್ ಗಳಲ್ಲಿ ಆರೋಪಿಯಾಗಿದ್ದ. ಆರು ಹಾಫ್ ಮರ್ಡರ್, ಒಂದು ರಾಬರಿ, ಒಂದು ಡಕಾಯಿತಿ ಕೇಸ್‌ನಲ್ಲಿ ಆರೋಪಿಯಾಗಿದ್ದ. ಹಾಗೂ ಒಂದು ಸುಪಾರಿ ತೆಗೆದುಕೊಂಡು ಕೊಲೆ ಮಾಡಿದ್ದ. ಇಂದು ಬೆಳಗಿನ ಜಾವ ಆರೋಪಿಯನ್ನ ಮಹಾರಾಷ್ಟ್ರದಿಂದ ಕರೆದುಕೊಂಡು ಬರುವಾಗ ಬೆಳಗಾವಿ ನಗರದ ಧರ್ಮನಾಥ್ ವೃತ್ತದ ಬಳಿ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಹೀಗಾಗಿ ಆತ್ಮ ರಕ್ಷಣೆಗಾಗಿ ಪೊಲೀಸರು ಗುಂಡು ಹಾಕಿಸಿದ್ದಾರೆ. ಯಾಸೀನ್ ಎಂಬ ಪೊಲೀಸ್‌ಗೆ ಚಾಕು ಇರಿದು ಆರೋಪಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಎಸಿಪಿ ನಾರಾಯಣ್ ಭರಮನಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಹನಿಮೂನ್ ಫೋಟೋ ಹಂಚಿಕೊಂಡ ನಯನತಾರಾ-ವಿಘ್ನೇಶ್; ನವ ದಂಪತಿ ತೆರಳಿದ್ದೆಲ್ಲಿಗೆ?
ಚಿಟ್ ಫಂಡ್ ಹೆಸರಲ್ಲಿ ಮೋಸ, ಆರೋಪಿ ಅರೆಸ್ಟ್ ಬೆಂಗಳೂರು: ವಾರಿಧಿ ಚಿಟ್ ಫಂಡ್ ಹೆಸರಲ್ಲಿ ಕಂಪನಿ ತೆರೆದು ಜನರಿಂದ ಹಣ ಸಂಗ್ರಹಿಸಿ ವಂಚಿಸಿ ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆ ಲಕ್ಷ್ಮೀ ವಾಣಿಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಕಳೆದ ವರ್ಷ ಆಗಸ್ಟ್ 6ರಂದು ಲಕ್ಷ್ಮಿ ವಿರುದ್ಧ ಸಾರ್ವಜನಿಕರು ವಂಚನೆ ಕೇಸ್ ದಾಖಲಿಸಿದ್ದರು.
ಮೊದಲು ಲಗ್ಗೆರೆಯಲ್ಲಿ ವಾರಿಧಿ ಚಿಟ್ ಫಂಡ್ ಪ್ರೈ.ಲಿ. ಪ್ರಾರಂಭಿಸಿದ್ದ ಲಕ್ಷ್ಮೀ, ನಂತರ ರಾಜಾಜಿನಗರದಲ್ಲಿ ಮತ್ತೊಂದು ಬ್ರಾಂಚ್ ಓಪನ್ ಮಾಡಿದ್ರು. ತನ್ನ ಗಂಡನನ್ನೆ ಮ್ಯಾನೇಜಿಂಗ್ ಡೈರೆಕ್ಟರ್ ಮಾಡಿಕೊಂಡು ಚಿಟ್ ಫಂಡ್ ಕಂಪನಿ ಓಪನ್ ಮಾಡಿದ್ರು. ಚಿಟ್ ಫಂಡ್ ಕಂಪನಿಗೆ ಉದ್ಯೋಗಿಗಳನ್ನ ನೇಮಕ ಮಾಡಿಕೊಂಡಿದ್ದ ಲಕ್ಷ್ಮೀ ಉದ್ಯೋಗಿಗಳಿಗೆ ಗೊತ್ತಿಲ್ಲದ್ದಂತೆ ಅವರನ್ನೇ ಡೈರೆಕ್ಟರ್ ಗಳಾಗಿ ಜನರಿಗೆ ಪರಿಚಯಿಸಿ ಮೋಸ ಮಾಡಿದ್ದಾಳೆ. ನಂತರ ವೃದ್ಧರ ಬಳಿ ಹಣ ಕಲೆಕ್ಟ್ ಮಾಡಿ ಚಿಟ್ ಫಂಡ್ ಮಾಡ್ತಿದ್ರು. ವೃದ್ಧರು ತಮ್ಮ ಜೀವನದ ಪೆನ್ಷನ್ ಹಣ ಚಿಟ್ ಫಂಡ್ ಗೆ ಹಾಕಿದ್ರು. ಬೃಂದಾವನ ಕೇಸ್ ಬೆನ್ನಲ್ಲೇ ರಾಜಾಜಿನಗರ ಠಾಣೆಗೆ ಸಾರ್ವಜನಿಕರು ದೂರು ನೀಡಿದ್ದರು. ಚಿಟ್ ಫಂಡ್ ನಲ್ಲಿ ಚೀಟಿಂಗ್ ಮಾಡಿ ಎಸ್ಕೇಪ್ ಆಗಿದ್ದ ಲಕ್ಷ್ಮೀಗಾಗಿ ರಾಜಾಜಿನಗರ ಪೊಲೀಸರು ಹುಡುಕಾಟ ನಡೆಸಿದ್ರು. ಇದನ್ನೂ ಓದಿ: International Yoga Day 2022: ರಾಧಿಕಾ ನಾರಾಯಣ್ ಫಿಟ್ನೆಸ್ ರಹಸ್ಯವೇ ಯೋಗಾಸನ; ಇಲ್ಲಿವೆ ಫೋಟೋಗಳು
ಚಿಟ್ ಫಂಡ್ ನಲ್ಲಿ ಸಂಪೂರ್ಣವಾಗಿ ಲಾಸ್ ಆಗಿ ತಲೆಮರಿಸಿಕೊಂಡಿದ್ದ ಲಕ್ಷ್ಮೀ ವಾಣಿ, ಜೀವನ ನಿರ್ವಹಣೆಗಾಗಿ ಕಲ್ಯಾಣ ಮಂಟಪವೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಸದ್ಯ ಲಕ್ಷ್ಮೀಯನ್ನು ಬಂಧಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಒಂದು ವರ್ಷದ ಬಳಿಕ ಖಾಕಿ ಬಲೆಗೆ ಮಹಿಳೆ ಬಿದ್ದಿದ್ದಾಳೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:36 am, Tue, 21 June 22