ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಇತ್ತೀಚೆಗೆ ವಿವಾಹವಾಗಿದ್ದಾರೆ. ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿಕೊಂಡಿರುವ ಈ ಜೋಡಿ ಹನಿಮೂನ್ಗೆ ತೆರಳಿದೆ. ಈ ಫೋಟೋಗಳನ್ನು ನವ ದಂಪತಿ ಹಂಚಿಕೊಂಡಿದ್ದಾರೆ.
1 / 5
ಮದುವೆಗೂ ಮೊದಲೇ ಸಿನಿಮಾ ಕೆಲಸಗಳನ್ನು ಈ ಜೋಡಿ ಪೂರ್ಣಗೊಳಿಸಿದೆ. ಹೀಗಾಗಿ, ಈಗ ಇಬ್ಬರೂ ವೆಕೇಶನ್ ಮೂಡ್ನಲ್ಲಿದ್ದಾರೆ. ವಿಘ್ನೇಶ್ ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿವೆ.
2 / 5
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಹನಿಮೂನ್ಗಾಗಿ ಥೈಲೆಂಡ್ಗೆ ತೆರಳಿದ್ದಾರೆ. ಅಲ್ಲಿನ ಸುಂದರ ಸಂಜೆಯ ಸಮಯದಲ್ಲಿ ತೆಗೆದ ಫೋಟೋಗಳನ್ನು ವಿಘ್ನೇಶ್ ಅಪ್ಲೋಡ್ ಮಾಡಿದ್ದು, ಅವರ ಅಭಿಮಾನಿ ವಲಯದಲ್ಲಿ ವೈರಲ್ ಆಗುತ್ತಿದೆ.
3 / 5
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೂನ್ 9ರಂದು ಹೊಸ ಬಾಳನ್ನು ಆರಂಭಿಸಿದ್ದಾರೆ. ಏಳು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಈ ಜೋಡಿ ಮದುವೆ ಆಗುವ ಮೂಲಕ ಬಾಳ ಬಂಧನಕ್ಕೆ ಒಳಗಾಗಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಇವರ ವಿವಾಹ ನಡೆದಿತ್ತು.