ಕಾರಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು, ಬಸ್ನಲ್ಲಿದ್ದ 10 ಪ್ರಯಾಣಿಕರಿಗೆ ಗಾಯ
ಮಂಗನ ಮೇಲೆ ಶ್ವಾನಗಳು ದಾಳಿ ಮಾಡಿ ಹತ್ಯೆಗೈದಿರುವಂತಹ ಘಟನೆ ಜಿಲ್ಲೆ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದಲ್ಲಿ ನಡೆದಿದೆ. ಮೃತ ಮಂಗನಿಗೆ ಮಾನವನ ವಿಧಿವಿಧಾನದಂತೆ ಶವಸಂಸ್ಕಾರ ಮಾಡಲಾಗಿದೆ.
ತುಮಕೂರು: ಕೆಎಸ್ಆರ್ಟಿಸಿ (KSRTC) ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಅಪಘಾತ ಸಂಭವಿಸಿದೆ. ಗಿರೀಶ್(37), ಮಾನ್ಯ(17) ಮೃತರು. ಕಾರಿನಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ನಲ್ಲಿದ್ದ 10 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಸ್ಮಶಾನ ಹೀಗೂ ಇರುತ್ತಾ! ಜನರು ಬೆಳಿಗ್ಗೆ, ಸಂಜೆ ರುದ್ರ ಭೂಮಿಯಲ್ಲಿ ಕಾಲ ಕಳೆಯಲು ಬೆಳಗಾವಿ ಯುವಕರೇ ಕಾರಣ
ಮಂಗನ ಮೇಲೆ ದಾಳಿ ಮಾಡಿ ಹತ್ಯೆಗೈದ ಶ್ವಾನಗಳು
ರಾಯಚೂರು: ಮಂಗನ ಮೇಲೆ ಶ್ವಾನಗಳು ದಾಳಿ ಮಾಡಿ ಹತ್ಯೆಗೈದಿರುವಂತಹ ಘಟನೆ ಜಿಲ್ಲೆ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದಲ್ಲಿ ನಡೆದಿದೆ. ಮೃತ ಮಂಗನಿಗೆ ಮಾನವನ ವಿಧಿವಿಧಾನದಂತೆ ಶವಸಂಸ್ಕಾರ ಮಾಡಲಾಗಿದೆ. ನಿನ್ನೆ ಶ್ವಾನಗಳ ದಾಳಿಗೆ ಮಂಗ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಪಶು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ನಂತರ ಮೃತ ಮಂಗಕ್ಕೆ ಪೂಜೆ ಸಲ್ಲಿಸಿ, ಬೀದಿಗಳಲ್ಲಿ ಮೆರವಣಿಗೆ ಮಾಡಿ ಸ್ಥಳೀಯರು ಭಕ್ತಿ ಮೆರೆದರು. ಆಂಜನೇಯ ದೇವಸ್ಥಾನದ ಆವರಣದಲ್ಲಿ ಮೃತ ಮಂಗನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಬಳಿಕ ಸ್ಥಳೀಯರು ಮಾನವನಂತೆ ಅಂತ್ಯಕ್ರಿಯೆ ಮಾಡಿದರು.
ಬಿಳಿ ಗೂಬೆ ಮಾರಾಟ ಜಾಲ ಪತ್ತೆ: ಮೂವರ ಬಂಧನ
ಕೊಡಗು: ನಗರದಲ್ಲಿ ಬಿಳಿ ಗೂಬೆ ಮಾರಾಟ ಜಾಲವನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಕಾರ್ಯಾಚರಣೆ ಮಾಡಿ ಬಯಲಿಗೆಳೆದಿದ್ದಾರೆ. ಮೂವರು ಆರೋಪಿಗಳು ಪೊಲೀಸರ ಬಲೆಗೆ ಬಿದಿದ್ದಾರೆ. ವಿರಾಜಪೇಟೆ ನಗರದ ಚಿಕ್ಕಪೇಟೆಯಲ್ಲಿ ಕಾರ್ಯಾಚರಣೆ ನಡೆಸಿ, ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಾಳಿನಡೆಸಿದ್ದಾರೆ. ಹಣದಾಸೆಗಾಗಿ ಆರೋಪಿಗಳು ಬಿಳಿ ಗೂಬೆ ಮಾರಾಟ ಮಾಡುತ್ತಿದ್ದರು. ಕೇರಳದ ಕಾಸರಗೋಡು ಮೂಲದವರಾದ ಮಹಮ್ಮದ್, ಅಬ್ದುಲ್ ಸತ್ತಾರ್, ಶೇಕಬ್ಬ ಬಂಧಿತ ಆರೋಪಿಗಳು.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.