Viral Video: ಸಿಗ್ನಲ್ ಲೈಟ್ನಲ್ಲಿ ನಟಿ ಕರೀನಾ ಕಪೂರ್ ವಿಡಿಯೋ, “ನನ್ನನ್ನು ತಿರುಗಿ ನೋಡದವನು ಯಾರು?”; ಮೀಮ್ ವಿಡಿಯೋ ವೈರಲ್
ಸಿಗ್ನಲ್ ಲೈಟ್ನಲ್ಲಿನ ಕೆಂಪು ದೀಪಕ್ಕೆ ಕರೀನಾ ಕಪೂರ್ ಅವರ ಪೂ ಪಾತ್ರದ ಕ್ಲಿಪ್ ಅನ್ನು ಎಡಿಟ್ ಮಾಡಿದ ಮೀಮ್ ಅನ್ನು ಟ್ವಿಟರ್ನಲ್ಲಿ ಹಂಚಿಕೊಂಡ ದೆಹಲಿ ಪೊಲೀಸರು ವಾಹನ ಸವಾರರಲ್ಲಿ ವಿಶೇಷವಾದ ಜಾಗೃತಿಯನ್ನು ಮೂಡಿಸಿದ್ದಾರೆ. ಆ ಮೀಮ್ ವಿಡಿಯೋ ಇಲ್ಲಿದೆ.
ಸಂಚಾರಿ ನಿಯಮಗಳ ಉಲ್ಲಂಘನೆ ವಿರುದ್ಧ ಪೊಲೀಸರು ಎಷ್ಟೇ ಕ್ರಮ ಕೈಗೊಂಡರೂ, ಎಷ್ಟೇ ಜಾಗೃತಿ ಮೂಡಿಸಿದರೂ ಅಲ್ಲೊಂದು ಇಲ್ಲೊಂದು ನಿಯಮ ಉಲ್ಲಂಘನೆ ನಡೆಯುತ್ತಲೇ ಇರುತ್ತದೆ. ಅದಾಗ್ಯೂ ಪೊಲೀಸರು ವಾಹನ ಸವಾರರನ್ನು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭಿನ್ನ ವಿಭಿನ್ನ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇದೀಗ ದೆಹಲಿ ಪೊಲೀಸ್ ಇಲಾಖೆಯು ಸಿಗ್ನಲ್ ಜಂಪ್ ವಿಚಾರದಲ್ಲಿ ವಾಹನ ಸವಾರರನ್ನು ಜಾಗೃತಿ ಮೂಡಿಸುವ ವಿಶೇಷ ಮೀಮ್ (Meme) ಒಂದನ್ನು ಹಂಚಿಕೊಂಡಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಮೀಮ್ ವಿಡಿಯೋ ವೈರಲ್ (Viral Video) ಆಗುತ್ತಿದೆ. ವಿಡಿಯೋ ನೀಡಲು ಹಾಸ್ಯವಾಗಿದ್ದರೂ ಇದರ ಒಳಾರ್ಥ ಚೆನ್ನಾಗಿದೆ.
ಮೀಮ್ ಮೂಲಕ ದೆಹಲಿ ಪೊಲೀಸರು ಸಂಚಾರ ನಿಯಮಗಳನ್ನು ಅನುಸರಿಸಲು ಮತ್ತು ರಸ್ತೆ ಸುರಕ್ಷತೆಯನ್ನು ಅಭ್ಯಾಸ ಮಾಡಲು ಜನಸಾಮಾನ್ಯರನ್ನು ಒತ್ತಾಯಿಸಿದ್ದಾರೆ. ವೇಗದ ಕಾರಿನೊಂದಿಗೆ ಪ್ರಾರಂಭವಾಗುವ ಮೀಮ್ ವಿಡಿಯೋದಲ್ಲಿ ಕಭಿ ಖುಷಿ ಕಭಿ ಗಮ್ ಚಿತ್ರದಲ್ಲಿ ಕರೀನಾ ಕಪೂರ್ ಅವರ ಪೂ ಎಂಬ ಸಾಂಪ್ರದಾಯಿಕ ಪಾತ್ರದ ಕ್ಲಿಪ್ ಅನ್ನು ಸಿಗ್ನಲ್ ಲೈಟ್ ಕೆಂಪು ದೀಪಕ್ಕೆ ಎಡಿಟ್ ಮಾಡಲಾಗಿದೆ. “ಕೌನ್ ಹೈ ಯೇ, ಜಿಸ್ನೆ ದೋಬಾರಾ ಮುಝೆ ನಹೀ ದೇಖಾ (ಅವನು ಯಾರು, ನನ್ನತ್ತ ತಿರುಗಿ ನೋಡದವನು ಯಾರು?)” ಎಂಬ ಪ್ರಸಿದ್ಧ ಡೈಲಾಗ್ ಅನ್ನು ಕರೀನಾ ಹೇಳುವುದನ್ನು ಕೇಳಿಸಬಹುದು.
ಈ ವಿಡಿಯೋವನ್ನು ದೆಹಲಿ ಪೊಲೀಸರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಆ ಸಂಚಾರ ನಿಯಮ ಉಲ್ಲಂಘಿಸುವವರು ಯಾರು? ಪೂ ನೋಡುವುದನ್ನು ಇಷ್ಟಪಡುತ್ತಾರೆ, ಆದ್ದರಿಂದ ನೀವು ಟ್ರಾಫಿಕ್ ದೀಪಗಳನ್ನು ನೋಡಿ” ಎಂದು ಶೀರ್ಷಿಕೆ ಬರೆದಿದ್ದಾರೆ. ಮೀಮ್ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
Who's that traffic violator?
Poo likes attention, so do the traffic lights !#RoadSafety#SaturdayVibes pic.twitter.com/ZeCJfJigcb
— Delhi Police (@DelhiPolice) July 16, 2022
ಇದಕ್ಕೂ ಮೊದಲು, ಮೇ ತಿಂಗಳಲ್ಲಿ ಹ್ಯಾರಿ ಪಾಟರ್ ಡೇ ಸಂದರ್ಭದಲ್ಲಿ ದೆಹಲಿ ಪೊಲೀಸರು ಕೋವಿಡ್-19 ಪ್ರೋಟೋಕಾಲ್‌ಗಳನ್ನು ಅನುಸರಿಸಲು ಜನರನ್ನು ಪ್ರೇರೇಪಿಸುವ ಸಲುವಾಗಿ JK ರೌಲಿಂಗ್ ಅವರ ಫ್ಯಾಂಟಸಿ ಸರಣಿಯ ಪಾತ್ರಗಳನ್ನು ಒಳಗೊಂಡ ಒಂದು ಮೀಮ್ ಹಂಚಿಕೊಂಡಿದ್ದರು.
Published On - 11:44 am, Sun, 17 July 22