Viral News: ವಾರಪೂರ್ತಿ ಕಣ್ಣೀರು ಸುರಿಸಿ ಗಿನ್ನಿಸ್​​ ದಾಖಲೆ ಮಾಡಲು ಹೋಗಿ ಕುರುಡನಾದ ಯುವಕ

ಗಿನ್ನಿಸ್​​ ದಾಖಲೆ ಮಾಡಬೇಕು ಎಂಬ ಹುಚ್ಚುತನದಿಂದ ಯುವಕನೊಬ್ಬ ಕುರುಡನಾಗಿರುವ ಘಟನೆ ನೈಜೀರಿಯಾದಲ್ಲಿ ನಡೆದಿದೆ.

Viral News: ವಾರಪೂರ್ತಿ ಕಣ್ಣೀರು ಸುರಿಸಿ ಗಿನ್ನಿಸ್​​ ದಾಖಲೆ ಮಾಡಲು ಹೋಗಿ ಕುರುಡನಾದ ಯುವಕ
ವೈರಲ್​​ ನ್ಯೂಸ್​​
Follow us
ಅಕ್ಷಯ್​ ಪಲ್ಲಮಜಲು​​
|

Updated on:Jul 20, 2023 | 1:42 PM

ಈ ಜಗತ್ತಿನಲ್ಲಿ ಜನಪ್ರಿಯತೆಯನ್ನು ಪಡೆಯಬೇಕು ಎಂದು ಈ ಜನ ಏನೆಲ್ಲ ಮಾಡುತ್ತಾರೆ ಎಂಬುದಕ್ಕೆ ಈ ವೈರಲ್​​ ವರದಿ ಸಾಕ್ಷಿ, ಗಿನ್ನಿಸ್​​ ದಾಖಲೆ ಮಾಡಬೇಕು ಎಂಬ ಹುಚ್ಚುತನದಿಂದ ಯುವಕನೊಬ್ಬ ಕುರುಡನಾಗಿರುವ ಘಟನೆ ನೈಜೀರಿಯಾದಲ್ಲಿ ನಡೆದಿದೆ. ನೈಜೀರಿಯಾದ ತೆಂಬು ಎಬೆರೆ ಎಂಬ ಯುವಕ ಏಳು ದಿನಗಳ ಕಾಲ ಕಣ್ಣೀರು ಹಾಕಲು ಪ್ರಯತ್ನ ಮಾಡಿದ್ದಾನೆ, ಇದರಿಂದ ಆತ ಈಗ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ.

ಬಿಬಿಸಿ ವರದಿ ಪ್ರಕಾರ ಈ ಯುವಕ ವಿಶ್ವ ದಾಖಲೆ ಮಾಡಲು ಇಡೀ ವಾರ ತಡೆರಹಿತವಾಗಿ ಕಣ್ಣೀರು ಸುರಿಸಲು ಪ್ರಯತ್ನಿಸಿದ್ದಾನೆ, ಇದರಿಂದ ಕಣ್ಣಿಗೆ ಒತ್ತಡ ಉಂಟಾಗಿ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ. ದೃಷ್ಟಿ ಕಳೆದುಕೊಳ್ಳುವ ಮುನ್ನ ಆತನಲ್ಲಿ ಈ ಲಕ್ಷಣಗಳು ಕಂಡು ಬಂದಿದೆ. ಮೊದಲು ತಲೆನೋವು, ಊದಿಕೊಂಡ ಮುಖ ಮತ್ತು ಉಬ್ಬಿದ ಕಣ್ಣು, ತುಂಬಾ ನೋವು ಕೂಡ ಕಾಣಿಸಿಕೊಂಡಿದೆ.

ನಾನು ಮತ್ತೆ ಮೊದಲಿನಂತೆ ಆಗಬೇಕು, ತುಂಬಾ ಒತ್ತಡ ಹಾಕಿಕೊಂಡು ಕಣ್ಣೀರು ಹಾಕಬಾರದಿತ್ತು. ಆದರೆ ಗಿನ್ನಿಸ್​​ ದಾಖಲೆಯನ್ನು ಸಾಧಿಸಿಯೇ ಸಾಧಿಸುವೇ ಎಂದು ಹೇಳಿದ್ದಾನೆ, ಈ ಬಗ್ಗೆ GWR (guinness world record) ಗೆ ಅರ್ಜಿ ಸಲ್ಲಿಸಿದ್ದು, ಇದನ್ನೂ ಸಂಸ್ಥೆ ಪರಿಗಣಿಸಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ಶಸ್ತ್ರಚಿಕಿತ್ಸೆ ಮೂಲಕ ಗುಪ್ತಾಂಗದಿಂದ ಬುಲೆಟ್ ತೆಗೆದು ಹಾಕಿದ ಮಹಿಳೆ!

ನೈಜೀರಿಯದಲ್ಲಿ ಇಂತಹದೇ ಮತ್ತೊಂದು ಘಟನೆ ನಡೆದಿದೆ. ಹಿಲ್ಡಾ ಬಾಸಿ ಎಂಬ ಬಾಣಸಿಗ 100 ಗಂಟೆಗಳ ಕಾಲ ನಿರಂತರವಾಗಿ ಅಡುಗೆ ಮಾಡಲು ಪ್ರಯತ್ನಿಸಿದ್ದಾನೆ. ಇದಕ್ಕೆ ಆ ದೇಶದ ಉಪಧ್ಯಾಕ್ಷರು, ಸೆಲೆಬ್ರಿಟಿಗಳು ಹುರಿದುಂಬಿಸಿದ್ದರು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಕೂಡ ಆಗಿತ್ತು. ಇಂತಹ ಅನೇಕ ಸಾಹಸಗಳು ನೈಜೀರಿಯದಲ್ಲಿ ನಡೆದಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:39 pm, Thu, 20 July 23

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?