Viral News : ಶಸ್ತ್ರಚಿಕಿತ್ಸೆ ಮೂಲಕ ಗುಪ್ತಾಂಗದಿಂದ ಬುಲೆಟ್ ತೆಗೆದು ಹಾಕಿದ ಮಹಿಳೆ!

ಸೊಮಾಲಿಯಾ ಮೂಲದ ಮಹಿಳೆ ತಮ್ಮ ಲಿವಿಂಗ್ ರೂಮಿನಲ್ಲಿ ಕುಳಿತಿದ್ದಾಗ ಕ್ಲಿಟೋರಿಸ್ಗೆ(ಚಂದ್ರನಾಡಿ) ಗುಂಡು ತಗುಲಿದ್ದು ಪರಿಣಾಮ ಆಕೆಯನ್ನು ಚಿಕಿತ್ಸೆಗೊಳಪಡಿಸಿ ಬುಲೆಟ್ ಹೊರತೆಗೆಯಲಾಗಿದೆ.

Viral News : ಶಸ್ತ್ರಚಿಕಿತ್ಸೆ ಮೂಲಕ ಗುಪ್ತಾಂಗದಿಂದ ಬುಲೆಟ್ ತೆಗೆದು ಹಾಕಿದ ಮಹಿಳೆ!
Viral News Image Credit source: timesnownews.com
Follow us
| Updated By: ಅಕ್ಷತಾ ವರ್ಕಾಡಿ

Updated on: Apr 28, 2023 | 3:21 PM

ಸೊಮಾಲಿಯಾದಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯ ಲಿವಿಂಗ್ ರೂಮಿನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾಗ ಆಕಸ್ಮಿಕವಾಗಿ ಬಂದ ಗುಂಡು ಗುಪ್ತಾಂಗಕ್ಕೆ ತಗುಲಿದ್ದು ನಂತರ ಆಕೆ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ವರದಿಯನ್ನು ಇತ್ತೀಚೆಗೆ ಇಂಟರ್ನ್ಯಾಷನಲ್ ಜರ್ನಲ್ ಆಫ್ ಸರ್ಜರಿ ಕೇಸ್ ರಿಪೋರ್ಟ್ಸ್ನಲ್ಲಿ ಪ್ರಕಟಿಸಲಾಗಿದೆ. “ನಮಗೆ ತಿಳಿದ ಮಟ್ಟಿಗೆ, ಚಂದ್ರನಾಡಿಯಲ್ಲಿ ಕಂಡು ಬಂದ ಬುಲೆಟ್ನೊಂದಿಗೆ ವಲ್ವರ್ ಪ್ರದೇಶವನ್ನು (ಸ್ತ್ರೀ ಜನನಾಂಗಗಳ ಹೊರಭಾಗ) ಭೇದಿಸಿದ ಮೊದಲ ಗಾಯ ಇದಾಗಿದೆ” ಎಂದು ಅಧ್ಯಯನದ ಲೇಖಕರು ತಿಳಿಸಿದ್ದಾರೆ.

ಅಧ್ಯಯನದ ಪ್ರಕಾರ, 24 ವರ್ಷದ ಅನಾಮಧೇಯ ರೋಗಿಯು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ, ದಾರಿತಪ್ಪಿ ಬಂದ ಗುಂಡು ಚಂದ್ರನಾಡಿಗೆ ತಗುಲಿದ್ದು, ಗಾಬರಿಗೊಂಡ ಮಹಿಳೆ ಮೊಗಾಡಿಶುವಿನ ಎರ್ಡೋಕನ್ ಆಸ್ಪತ್ರೆಗೆ ವರದಿ ಮಾಡಿದ್ದಾಳೆ, ಅಲ್ಲಿ ಸಿಟಿ ಸ್ಕ್ಯಾನ್ ನಲ್ಲಿ ಬುಲೆಟ್ ಚಂದ್ರನಾಡಿ ಒಳಗೆ ಇರುವುದು ತಿಳಿದುಬಂದಿದೆ. ಅಧ್ಯಯನದ ಲೇಖಕರು ತಿಳಿಸಿದ ಮಟ್ಟಿಗೆ, ಈ ರೀತಿಯ ಪ್ರಕರಣ ಕಂಡು ಬಂದಿರುವುದು ಇದೇ ಮೊದಲು.

“ಆ ಬುಲೆಟ್ ಅದೃಷ್ಟವಶಾತ್ ಕಡಿಮೆ ವೇಗದಲ್ಲಿ ತಗುಲಿದ್ದರಿಂದ ಅವಳಿಗೆ ಏನು ಅಪಾಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ರೋಗಿಯನ್ನು ಸ್ಥಳೀಯ ಅರಿವಳಿಕೆಯ ಅಡಿಯಲ್ಲಿ ಇರಿಸಿ ಅವಳ ಖಾಸಗಿ ಭಾಗದಿಂದ ಪ್ರಕ್ಷೇಪಕವನ್ನು ತೆಗೆದುಹಾಕಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಅವಳು ಯಾವುದೇ ತೊಂದರೆ ಅನುಭವಿಸಲಿಲ್ಲ, ಬಳಿಕ ಮರುದಿನ ಅವಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ” ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ತನ್ನ 6 ಪತ್ನಿಯರೊಂದಿಗೆ ಒಟ್ಟಿಗೆ ಮಲಗಲು 81 ಲಕ್ಷ ರೂ ವೆಚ್ಚದ ಹಾಸಿಗೆ ಖರೀದಿಸಿದ ವ್ಯಕ್ತಿ

ಸೊಮಾಲಿಯಾದಂತಹ ಯುದ್ಧ ಪೀಡಿತ ವಸತಿ ಪ್ರದೇಶಗಳಲ್ಲಿ ಇಂತಹ ಘಟನೆ ನಡೆದಿರುವುದು ಯಾರಿಗೂ ದೊಡ್ಡ ವಿಷಯವಲ್ಲ. ಏಕೆಂದರೆ ಈ ಪ್ರದೇಶದಲ್ಲಿ ಯಾರೋ ಹೊಡೆದ ಗುಂಡಿಗೆ ಇನ್ನಾರೋ ಪ್ರಾಣ ಬಿಡುವುದು ಸಾಮಾನ್ಯ. ಮನೆಯ ಒಳಗಿರುವವರಿಗೂ ತಿಳಿದಿರುವುದಿಲ್ಲ ನಮ್ಮ ಸಾವು ಯಾವಾಗ ಎಂದು. ಈ ಪ್ರದೇಶದಲ್ಲಿ ಗುಂಡೇಟು, ಗಾಯ, ಪ್ರಾಣ ಹೋಗುವುದು ಸಹಜ ಪ್ರಕಿಯೆಯಾಗಿ ಬಿಟ್ಟಿದೆ.

ಆದರೆ ಇಂತಹ ಪ್ರಕರಣ ಇದೆ ಮೊದಲಲ್ಲ ಎಂಬ ವರದಿ ಇನ್ನೊಂದು ಅಧ್ಯಯನದಿಂದ ತಿಳಿದುಬಂದಿದ್ದು, ಕಳೆದ ವರ್ಷ ಮಹಿಳೆಯ ಚಂದ್ರನಾಡಿಯಲ್ಲಿ ಉಗುರುಗಳು, ಪೆನ್ ಮುಚ್ಚಳಗಳು ಸೇರಿದಂತೆ ವಿಲಕ್ಷಣ ವಸ್ತುಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ. ಈ ತಿಂಗಳ ಆರಂಭದಲ್ಲಿಯೂ ಸ್ತ್ರೀರೋಗತಜ್ಞರೊಬ್ಬರು ರೋಗಿಯ ಯೋನಿಯನ್ನು ಪರೀಕ್ಷಿಸಿದಾಗ ಒಳಗೆ ಜಿರಳೆ ಅಡಗಿರುವುದನ್ನು ಕಂಡುಬಂದಿದೆ ಎಂದು ವರದಿಗಳ ಮೂಲಕ ತಿಳಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: